ರಾಮ್ ಚರಣ್ ಪತ್ನಿ ಉಪಾಸನಾ, ವ್ಯಾಲೆಂಟೈನ್ಸ್ ಡೇ ಕುರಿತಾದ ಸಾಮಾಜಿಕ ಮಾಧ್ಯಮ ಪೋಸ್ಟ್‌ನಿಂದಾಗಿ ಟ್ರೋಲ್‌ಗೆ ಗುರಿಯಾಗಿದ್ದಾರೆ. 22 ವರ್ಷ ಮೇಲ್ಪಟ್ಟವರು ಮಹಿಳಾ ದಿನಾಚರಣೆ ಆಚರಿಸಬೇಕೆಂಬ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಉದ್ಯಮಿಯಾಗಿರುವ ಉಪಾಸನಾ, ಅಪೋಲೋ ಆಸ್ಪತ್ರೆಗಳ ಉತ್ತರಾಧಿಕಾರಿಣಿಯೂ ಹೌದು. ಟ್ರೋಲ್‌ಗಳಿಗೆ ಇನ್ನೂ ಪ್ರತಿಕ್ರಿಯಿಸಿಲ್ಲ.

ತೆಲುಗು ಚಿತ್ರರಂಗ ಮೆಗಾ ಸ್ಟಾರ್ ಚಿರಂಜೀವಿ ಮುದ್ದಿನ ಪುತ್ರ ರಾಮ್ ಚರಣ್ ಸಿಕ್ಕಾಪಟ್ಟೆ ಸೈಲೆಂಟ್. ಕಾಂಟ್ರವರ್ಸಿ ಅಂದ್ರೆ ಏನು ಎನ್ನಬೇಕು ಅಷ್ಟರ ಮಟ್ಟಕ್ಕೆ ತಾನು ಆಯ್ತು ತನ್ನ ಕೆಲಸ ಆಯ್ತು ಅಂತ ಸುಮ್ಮನಿರುತ್ತಾರೆ. ರಾಮ್ ಚರಣ್ ಪತ್ನಿ ಉಪಾಸನಾ ಕೂಡ ಉದ್ಯಮಿ...ಹತ್ತಾರು ಆಸ್ಪತ್ರೆಗಳು ನಡೆಸುತ್ತಾರೆ. ರಾಮ್‌ ಚರಣ್ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದರೆ ಉಪಾದನಾ ಬ್ಯುಸಿನೆಸ್‌ ಫೀಲ್ಡ್‌ನಲ್ಲಿ ಫುಲ್ ಆಕ್ಟಿವ್. ಹೀಗಾಗಿ ಇಬ್ಬರಿಗೂ ಅಭಿಮಾನಿಗಳು ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಉಪಾಸನಾಳ ಪ್ರತಿಯೊಂದು ಪೋಸ್ಟ್‌ ಸುದ್ದಿ ಕ್ರಿಯೇಟ್ ಮಾಡುತ್ತದೆ ಅದು ಪಾಸಿಟಿವ್ ಆಗಿದೆ. ಆದರೆ ಈ ಸಲ ತಿರುಗೇಟು ಬಿದ್ದಿದೆ. 

ವ್ಯಾಲೆಂಟೈನ್ಸ್‌ ಡೇ ಪ್ರಯಕ್ತ ಪ್ರತಿಯೊಬ್ಬರು ತಮ್ಮ ಫ್ರೆಂಡ್, ಬಾಯ್‌ಫ್ರೆಂಡ್ ಅಥವಾ ಗಂಡನ ಜೊತೆ ಫೋಟೋ ಹಾಕೋದು ಕಾಮನ್. ಪ್ರತಿ ವರ್ಷ ಉಪಾಸನಾ ಕೂಡ ಪೋಸ್ಟ್‌ ಹಾಕುತ್ತಿದ್ದರು ಅದನ್ನು ಪತಿ ರಾಮ್‌ ಚರಣ್ ರೀ-ಶೇರ್ ಮಾಡುತ್ತಿದ್ದರು. ಆದರೆ ಈ ವರ್ಷ ಹಾಕಿರುವ ಪೋಸ್ಟ್‌ ಟ್ರೋಲ್‌ಗೆ ಗುರಿಯಾಗಿದೆ. 'ವ್ಯಾಲೆಂಟೈನ್ಸ್‌ ಡೇ ಏನಿದ್ದರೂ 22 ವರ್ಷಕ್ಕಿಂತ ಕೆಳಗೆ ಇರುವ ಹುಡುಗಿಯರಿಗೆ ಮಾತ್ರ. ನಿಮ್ಮ ವಯಸ್ಸು ಅದಕ್ಕೂ ಮೇಲೆ ಇದ್ದರೆ...ಆಂಟಿ ದಯವಿಟ್ಟು ಇಂಟರ್‌ನ್ಯಾಷನಲ್ ಮಹಿಳಾ ದಿನಾಚರಣೆಗೆ ಕಾಯಬೇಕು' ಎಂದು ಸ್ಟೋರಿ ಪೋಸ್ಟ್ ಮಾಡಿದ್ದರು. ಮದುವೆಯಾದ ದಿನದಿಂದ ಉಪಾಸನಾ ಈ ರೂಲ್ ಫಾಲೋ ಮಾಡಿದ್ದರೆ ಹೌದು ಎಂದು ಒಪ್ಪಿಕೊಳ್ಳಬಹುದು ಆದರೆ 10 ವರ್ಷ ದಾಂಪತ್ಯ ಜೀವನದಲ್ಲಿ ಬಂದ ವ್ಯಾಲೆಂಟೈನ್ಸ್‌ ಡೇ ಆಚರಿಸಿ ಈ ವರ್ಷ ಈ ರೀತಿ ಪೋಸ್ಟ್ ಹಾಕಿರುವುದು ಸರಿ ಅಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. 

ಬೇಸರದಲ್ಲಿದ್ದ ಸೆಲೆಬ್ರಿಟಿಗಳಿಗೆ ಪತ್ರ ಬರೆದ ದರ್ಶನ್; ಏನೇ ಇರ್ಲಿ ಅರೋಗ್ಯ ನೋಡ್ಕೊಳ್ಳಿ ಎಂದ ಫ್ಯಾನ್ಸ್!

ವಿವಾದ ದೊಡ್ಡದಾಗುತ್ತಿದ್ದರೂ ಕೂಡ ಉಪಾಸನಾ ರಿಯಾಕ್ಟ್ ಮಾಡದೆ ಸುಮ್ಮನಿದ್ದಾರೆ. ಬಹುಷ ಇದಕ್ಕೆ ಉತ್ತರ ಮಹಿಳಾ ದಿನಾಚರಣೆದಂದು ಕೊಡಬಹುದು. 34 ವರ್ಷ ವಯಸ್ಸಿನ ಉಪಾಸನಾ, ಅಪೋಲೋ ಆಸ್ಪತ್ರೆಗಳ ಅಧ್ಯಕ್ಷರಾದ ಪ್ರತಾಪ್ ಸಿ ರೆಡ್ಡಿ ಅವರ ಮೊಮ್ಮಗಳು. ಅವರ ಮಾರುಕಟ್ಟೆ ಕ್ಯಾಪ್ ಏಪ್ರಿಲ್ 19 ರ ಹೊತ್ತಿಗೆ 88718 ಕೋಟಿ ರೂ ಆಗಿದ್ದು, ರಿಯಲ್ ಟೈಂ ನಿವ್ವಳ ಮೌಲ್ಯ ಬರೋಬ್ಬರಿ 25,040 ಕೋಟಿ ರೂಪಾಯಿ ಆಗಿದೆ. ಉಪಾಸನಾ ಲಂಡನ್‌ನ ರೀಜೆಂಟ್‌ ಯೂನಿವರ್ಸಿಟಿಯಿಂದ ಎಂಬಿಎಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿದರು, ಅಲ್ಲಿ ಅವರು ವ್ಯವಹಾರಗಳನ್ನು ನಡೆಸಲು ಕೌಶಲ್ಯಗಳನ್ನು ಕಲಿತರು.ಉಪಾಸನಾ ಅವರು ಸಮಗ್ರ ಕ್ಷೇಮ ವೇದಿಕೆಯಾದ URLife ನ ಸ್ಥಾಪಕರು ಮತ್ತು CSR ಅಪೋಲೋ ಹಾಸ್ಪಿಟಲ್ಸ್ ಗ್ರೂಪ್‌ನ ಉಪಾಧ್ಯಕ್ಷರಾಗಿದ್ದಾರೆ. ಅವರು FHPL (ಫ್ಯಾಮಿಲಿ ಹೆಲ್ತ್ ಪ್ಲಾನ್ ಇನ್ಶುರೆನ್ಸ್ TPA ಲಿಮಿಟೆಡ್) ನ ವ್ಯವಸ್ಥಾಪಕ ನಿರ್ದೇಶಕಿಯೂ ಆಗಿದ್ದಾರೆ. ಅವರ ತಾಯಿ ಶೋಭನಾ ಅವರು ಅಪೋಲೋ ಆಸ್ಪತ್ರೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದಾರೆ.

ಬಾಯ್ಸ್‌ vs ಗರ್ಲ್ಸ್‌ ಶೋನಲ್ಲಿ 2 ವಾರದಿಂದ ಹನುಮಂತು ಮಿಸ್ಸಿಂಗ್; ಗುಡ್‌ ಬೈ ಸುಳಿವು