Asianet Suvarna News Asianet Suvarna News

ಲೆಹಂಗಾ ತಯಾರಿಸಲು 1 ವರ್ಷ 51 ದಿನಗಳು; ಆತಿಯಾ ಮದುವೆ ಡ್ರೆಸ್ ಸೀಕ್ರೆಟ್ ರಿವೀಲ್ ಮಾಡಿದ ಡಿಸೈನರ್ ಅನಾಮಿಕಾ

ಬಾಲಿವುಡ್ ನಟಿ ಆತಿಯಾ ಶೆಟ್ಟಿ ಮತ್ತು ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಅದ್ದೂರಿಯಾಗಿ ವಿವಾಹವಾದರು. ಆತಿಯಾ ಧರಿಸಿದ್ದ ಗ್ಯ್ರಾಂಡ್ ಲೆಹಂಗಾ ಎಲ್ಲಲರ ಗಮನ ಸೆಳೆಯುತ್ತಿದೆ. 

Athiya Shetty and KL Rahul wedding; pink handmade wedding lehenga designed by Anamika Khanna that took 10,000 hours to make sgk
Author
First Published Jan 24, 2023, 11:19 AM IST

ಬಾಲಿವುಡ್ ನಟಿ ಆತಿಯಾ ಶೆಟ್ಟಿ ಮತ್ತು ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಜನವರಿ 23ರಂದು ಅದ್ದೂರಿಯಾಗಿ ವಿವಾಹವಾದರು. ಸುನಿಲ್ ಶೆಟ್ಟಿ ಅವರ ಖಂಡಾಲ ಫಾರ್ಮ್‌ಹೌಸ್‌ನಲ್ಲಿ ಇಬ್ಬರೂ ಹಸೆಮಣೆ ಏರಿದರು. ಇಬ್ಬರೂ ಮದುವೆಯ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ನಟಿ ಆತಿಯಾ ಶೆಟ್ಟಿ ಪೋಟೋಗಳನ್ನು ಹಂಚಿಕೊಂಡು ನಿಮ್ಮ ಬೆಳಕಿನಲ್ಲಿ ನಾನು ಹೇಗೆ ಪ್ರೀತಿಸಬೇಕು ಎಂದು  ಕಲಿತೆ' ಎಂದು ಹೇಳಿದ್ದಾರೆ.   

ನಮ್ಮ ಅತ್ಯಂತ ಪ್ರೀತಿಪಾತ್ರರ ಜೊತೆ, ನಮಗೆ ಅಪಾರ ಸಂತೋಷ ಎಲ್ಲವನ್ನೂ ನೀಡಿದ ಮನೆಯಲ್ಲಿ ನಾವು ಮದುವೆಯಾದೆವು. ಕೃತಜ್ಞತೆ ಮತ್ತು ಪ್ರೀತಿ ತುಂಬಿದ ಹೃದಯದಿಂದ, ಈ ಪ್ರಯಾಣದಲ್ಲಿ ನಾವು ನಿಮ್ಮ ಆಶೀರ್ವಾದವನ್ನು ಬಯಸುತ್ತೇವೆ' ಎಂದು ನಟಿ ಆತಿಯಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಆತಿಯಾ ಮತ್ತು ಕೆಎಲ್ ರಾಹುಲ್ ಕುಟುಂಬದವರು ಮತ್ತು ಆತ್ಮಿಯರ ಸಮ್ಮುಖದಲ್ಲಿ ದಾಂಪತ್ಯಕ್ಕೆ ಕಾಲಿಟ್ಟರು. ಇವರ ಮದುವೆ ಕೇವಲ 70 ಜನ ಅತಿಥಿಗಳಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. 

ಆತಿಯಾ ಧರಿಸಿದ್ದ ಲೆಹಂಗಾ ವಿಶೇಷತೆ

ಆತಿಯಾ ಮತ್ತು ರಾಹುಲ್ ಇಬ್ಬರೂ ಪಿಂಕ್ ಬಣ್ಣದ ಗ್ರ್ಯಾಂಗ್ ಡ್ರೆಸ್ ನಲ್ಲಿ ಕಂಗೊಳಿಸಿದ್ದರು. ಆತಿಯಾ ಶೆಟ್ಟಿ ಪಿಂಕ್ ಚಿಕನ್‌ಕಾರಿ ಲೆಹಂಗಾ ಧರಿಸಿದ್ದರು. ಕೆಎಲ್ ರಾಹುಲ್ ಪಿಂಕ್ ಬಣ್ಣದ ಶೆರ್ವಾನಿಯಲ್ಲಿ ಕಂಗೊಳಿಸಿದ್ದರು. ಆತಿಯಾ ಧರಿಸಿದ್ದ ಲೆಹಂಗಾ ಮೇಲೆ  ಹ್ಯಾಂಡ್ ಮೇಡ್ ವರ್ಕ್ ಮಾಡಿಸಲಾಗಿತ್ತು. ಕೈಯಿಂದ ನೇಯ್ಗೆ ಮಾಡಲಾಗಿದ್ದು ಜರ್ದೋಜಿ ಮಚ್ಚು ಜಾಲಿ ವರ್ಕ್ ಅನ್ನು ರೇಶ್ಮೆಯಿಂದ ಮಾಡಿಸಲಾಗಿದೆ. ರೇಶ್ಮೆ ಆರ್ಗನ್ಜಾದಿಂದ ಮಾಡಿದ ದುಪಟ್ಟಾವನ್ನು ಧರಿಸಿದ್ದರು. ಈ ಸುಂದರ ಲೆಹಂಗಾವನ್ನು ಖ್ಯಾತ ಡಿಸೈನರ್ ಅನಾಮಿಕ ಖನ್ನಾ ಅವರು ಡಿಸೈನ್ ಮಾಡಿದ್ದಾರೆ.

ಸುನಿಲ್‌ ಶೆಟ್ಟಿ ಅಳಿಯನಾದ KLR, ಆಥಿಯಾ ಶೆಟ್ಟಿ ಕೈ ಹಿಡಿದ ಕೆಎಲ್‌ ರಾಹುಲ್‌!

ಲೆಹಂಗಾ ತಯಾರಿಸಲು 1 ವರ್ಷ 51 ದಿನಗಳು

ಈ ಸುಂದರ ಲೆಹಂಗಾವನ್ನು ತಯಾರಿಸಲು ಬರೋಬ್ಬರಿ 1 ವರ್ಷ 51 ದಿನಗಳು ಬೇಕಾಯಿತು ಎಂದು ಹೇಳಿದ್ದಾರೆ. ಇಷ್ಟು ಸುಂದರವಾಗಿ ಲೆಹಂಗಾ ತಯಾರಿಸಲು ಸ್ಫೂರ್ತಿಯೇ ಆತಿಯಾ ಶೆಟ್ಟಿ ಎಂದು ಅನಾಮಿಕ ಖನ್ನಾ ರಿವೀಲ್ ಮಾಡಿದ್ದಾರೆ. 'ಆತಿಯಾ ಅತ್ಯಂತ ಸೂಕ್ಷ್ಮವಾದ ಮತ್ತು ಸುಂದರ ಟೇಸ್ಟ್ ಹೊಂದಿದ್ದಾರೆ. ಹಾಗಾಗಿ ಅವರಿಗಾಗಿ ವಿಶೇಷ ಲೆಹಾಂಗಾ ತಯಾರಿಸಿದ್ದು. ಆಕೆ ತುಂಬಾ ಸ್ಟ್ರಾಂಗ್ ವ್ಯಕ್ತಿವತ್ವ' ಎಂದು ಹೇಳಿದ್ದಾರೆ.

ಲೆಹಂಗಾಗೆ ಸರಿಯಾಗಿ ಮ್ಯಾಚ್ ಆಗುವ ಹಾಗೆ ಆಭರಣ ಧರಿಸಿದ್ದರು. ಗ್ರ್ಯಾಂಗ್ ಚೋಕರ್ ನೆಕ್ಲೇಸ್, ಮಾಂಗ್ ಟಿಕಾ ಮತ್ತು ಕಿವಿಯೋಲೆ ಹಾಗು ಬಳೆಗಳನ್ನು ಧರಿಸಿದ್ದರು. ಆತಿಯಾ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ. ತುಂಬಾ ರಿಚ್ ಆಗಿ ಕಾಣಿಸುವ ಆತಿಯಾ ಲುಕ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಕೆಎಲ್ ರಾಹುಲ್ ಕೂಡ ಸುಂದರವಾಗಿಕಾಣಿಸುತ್ತಿದ್ದರು. ಇಬ್ಬರ ಫೋಟೋಗಳು ವೈರಲ್ ಆಗಿದ್ದು ಅಭಿಮಾನಿಗಳು, ಗಣ್ಯರು ಅಭಿನಂದನೆ ಸಲ್ಲಿಸುತ್ತಿದ್ದಾರೆ.  

 

Follow Us:
Download App:
  • android
  • ios