ಕೊನೆಗೂ ಮೌನ ಮುರಿದ ನಟಿ ಅತಿಯಾ ಶೆಟ್ಟಿ; ರಾಹುಲ್ ಜೊತೆಗಿನ ಮದುವೆ ಬಗ್ಗೆ ಹೇಳಿದ್ದೇನು?

ಮದುವೆ ವದಂತಿ ಬಗ್ಗೆ ಮೊದಲ ಬಾರಿಗೆ ಅತಿಯಾ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಮದುವೆ ವದಂತಿ ಜೋರಾದ ಬೆನ್ನಲ್ಲೇ ಅತಿಯಾ ಶೆಟ್ಟಿ ತಂದೆ, ನಟ ಸುನಿಲ್ ಶೆಟ್ಟಿ ಸಹ ಪ್ರತಿಕ್ರಿಯೆ ನೀಡಿದ್ದರು. ಇದೀಗ ಸ್ವತಃ ಅತಿಯಾ ಈ ಬಗ್ಗೆ ವ್ಯಂಗ್ಯವಾಗಿ ಪೋಸ್ಟ್ ಶೇರ್ ಮಾಡಿದ್ದಾರೆ. 

Athiya Shetty breaks silence on her wedding with boyfriend KL Rahul sgk

ಟೀಂ ಇಂಡಿಯಾ ಆಟಗಾರ,  ಲಖನೌ ಸೂಪರ್‌ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಮತ್ತು ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.  ಕೆ ಎಲ್ ರಾಹುಲ್ ಬಹುಕಾಲದ ಗೆಳತಿ ಅತಿಯಾ ಶೆಟ್ಟಿ ಜೊತೆ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಅಂದಹಾಗೆ ಇಬ್ಬರ ಮದುವೆ ವಿಚಾರ ಸದ್ದು ಮಾಡುತ್ತಿರುವುದ ಇದೇ ಮೊದಲಲ್ಲ. ಈ ಮೊದಲು ಸಾಕಷ್ಟು ಬಾರಿ ಸುದ್ದಿಯಾಗಿದೆ. ಆದರೆ ಈ ಬಗ್ಗೆ ಅತಿಯಾ ಅಥವಾ ರಾಹುಲ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಆದರೀಗ ಮೊದಲ ಬಾರಿಗೆ ಅತಿಯಾ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಮದುವೆ ವದಂತಿ ಜೋರಾದ ಬೆನ್ನಲ್ಲೇ ಅತಿಯಾ ಶೆಟ್ಟಿ ತಂದೆ, ನಟ ಸುನಿಲ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದರು. ಇದೀಗ ಸ್ವತಃ ಅತಿಯಾ ಈ ಬಗ್ಗೆ ವ್ಯಂಗ್ಯವಾಗಿ ಪೋಸ್ಟ್ ಶೇರ್ ಮಾಡಿದ್ದಾರೆ. 

 ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿರುವ ಅತಿಯಾ, 'ಮೂರು ತಿಂಗಳಲ್ಲಿ ಆ ಸ್ಥಳದಲ್ಲಿ ನಡೆಯುವ ಮದುವೆಗೆ ನನ್ನನ್ನು ಆಹ್ವಾನಿಸಲಾಗಿದೆ ಎಂದು ಭಾವಿಸುತ್ತೇನೆ' ಎಂದು ಹೇಳಿದ್ದಾರೆ. ಅಂದಹಾಗೆ ಅತಿಯಾ ಮದುವೆ ವಿಚಾರವನ್ನು ಪರೋಕ್ಷವಾಗಿ ಖಚಿತ ಪಡಿಸಿದ್ರಾ ಅಥವಾ ವ್ಯಂಗ್ಯವಾಡಿದ್ರಾ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.

ಅತಿಯಾ ಮತ್ತು ರಾಹುಲ್ ಇಬ್ಬರೂ ಇತ್ತೀಚಿಗಷ್ಟೆ ಜರ್ಮನಿಯ ಮ್ಯೂನಿಚ್‌ಗೆ ಒಟ್ಟಿಗೆ ಪ್ರಯಾಣ ಬೆಳೆಸಿದರು. ಅಲ್ಲಿ ಕೆಎಲ್ ರಾಹುಲ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇಬ್ಬರು ಒಟ್ಟಿಗೆ ಜರ್ಮನಿಗೆ ಹಾರಿದ್ದ ಜೋಡಿಯ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಇಬ್ಬರ ಮದುವೆ ವಿಚಾರ ಮತ್ತಷ್ಟು ಜೋರಾಯಿತು. ಮುಂದಿನ 3 ತಿಂಗಳಲ್ಲಿ ವಿವಾಹವಾಗಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

ಶೀಘ್ರದಲ್ಲೇ ರಾಹುಲ್ - ಅತಿಯಾ ಶೆಟ್ಟಿ ಮದುವೆ ವದಂತಿ; ಸುನಿಲ್ ಶೆಟ್ಟಿ ರಿಯಾಕ್ಷನ್

ಮಗಳ ಮದುವೆ ವದಂತಿ ಬಗ್ಗೆ ನಟ ಸುನಿಲ್ ಶೆಟ್ಟಿ ಕೂಡ ಪ್ರತಿಕ್ರಿಯೆ ನೀಡಿದ್ದರು. ರೇಡಿಯೋ ಮಿರ್ಚಿ ಜೊತೆ ಮಾತನಾಡಿದ ನಟ ಸುನಿಲ್ ಶೆಟ್ಟಿಗೆ ಮದುವೆಗೆ ಸಿದ್ಧತೆ ಆರಂಭಿಸಿದ್ದಾರೆಯೇ ಎಂದು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಹಿರಿಯ ನಟ 'ಇಲ್ಲ, ಈ ಬಗ್ಗೆ ಇನ್ನೂ ಯಾವುದೇ ಪ್ಲಾನ್ ಮಾಡಿಲ್ಲ' ಎಂದು ಹೇಳುವ ಮೂಲಕ ಶೀಘ್ರದಲ್ಲೇ ಮದುವೆ ಎನ್ನುವ ಸುದ್ದಿಯನ್ನು ತಳ್ಳಿಹಾಕಿದ್ರು. ಅಂದಹಾಗೆ  ಹಿರಿಯ ನಟ ತನ್ನ ಮಗಳ ಮದುವೆಯ ವದಂತಿಗಳಿಗೆ ಪ್ರತಿಕ್ರಿಯಿಸುವುದು ಇದೇ ಮೊದಲಲ್ಲ. ಮೇ ತಿಂಗಳಲ್ಲಿ ಮಾತನಾಡಿದ್ದ ಸುನಿಲ್ ಶೆಟ್ಟಿ, 'ಅವಳು ಯಾವಾಗ ಬಯಸುತ್ತಾಳೆ ಎಂಬುದು ಅತಿಯಾ ಆಯ್ಕೆಯಾಗಿದೆ' ಎಂದು ಅವರು ಹೇಳಿದ್ದರು.

ಮುಂದಿನ 3 ತಿಂಗಳೊಳಗಾಗಿ ಕೆ ಎಲ್ ರಾಹುಲ್ - ಆತಿಯಾ ಶೆಟ್ಟಿ ಮದುವೆ ಫಿಕ್ಸ್..?

ರಾಹುಲ್ ಮತ್ತು ಅತಿಯಾ ಇಬ್ಬರು ಅಧಿಕೃತವಾಗಿ ಪ್ರೇಮಿಗಳು ಎಂದು ಬಹಿರಂಗ ಪಡಿಸದಿದ್ದರೂ ಇಬ್ಬರ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡುತ್ತಲೆ ಇರುತ್ತದೆ. ಇತ್ತೀಚಿಗಷ್ಟೆ ಈ ಸ್ಟಾರ್ ಜೋಡಿ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ ಎನ್ನಲಾಗಿತ್ತು. ಮದುವೆಗೂ ಮೊದಲು ಇಬ್ಬರು ಹೊಸ ಮನೆ ಖರೀದಿ ಮಾಡಿದ್ದು ಒಟ್ಟಿಗೆ ವಾಸಿಸಲು ನಿರ್ಧರಿಸಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಮುಂಬೈನಲ್ಲಿ 4BHK ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ಪಡೆದಿದ್ದಾರೆ ಎನ್ನಲಾಗಿದೆ. ಈ ಮನೆಗೆ ತಿಂಗಳಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಿದ್ದಾರಂತೆ. ಇದೀಗ ಮದುವೆ ವಿಚಾರ ಸಿಕ್ಕಾಪಟ್ಟೆ ಸುದ್ದಿಯಾಗಿದೆ. 

Latest Videos
Follow Us:
Download App:
  • android
  • ios