Actor Ram Charan Teja News: ನಟ ಚಿರಂಜೀವಿ ಮನೆಗೆ ಒಟ್ಟಿಗೆ ಡಬಲ್ ಖುಷಿ ಸಿಕ್ಕಿದೆ. ರಾಮ್ ಚರಣ್ ತೇಜ ಹಾಗೂ ಉಪಾಸನಾ ಅವರು ಅವಳಿ ಮಕ್ಕಳಿಗೆ ಪಾಲಕರಾಗಿ ಬಡ್ತಿ ಪಡೆದಿದ್ದಾರೆ. ಆದರೆ ವೇಣು ಸ್ವಾಮಿ ಹೇಳಿದ್ದ ಭವಿಷ್ಯ ಸುಳ್ಳಾಯ್ತು.
Actor Ram Charan Teja And Upasana News: ರಾಮ್ ಚರಣ್-ಉಪಾಸನಾ ದಂಪತಿಗೆ ಅವಳಿ ಮಕ್ಕಳು ಹುಟ್ಟಿರೋದು ಗೊತ್ತೇ ಇದೆ. ಮತ್ತೊಬ್ಬ ಪುಟ್ಟ ಮೆಗಾ ವಾರಸುದಾರ ಬಂದಿದ್ದಕ್ಕೆ ಫ್ಯಾನ್ಸ್ ಕೂಡ ಖುಷಿಯಾಗಿದ್ದಾರೆ. ಆದರೆ, ಚೆರ್ರಿ ಮಕ್ಕಳ ಬಗ್ಗೆ ಹಿಂದೆ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಹೇಳಿದ್ದ ಭವಿಷ್ಯ ತಪ್ಪಾಗಿದೆ.
ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಉಪಾಸನಾ ದಂಪತಿಯ ಮನೆಯಲ್ಲಿ ಮತ್ತೊಮ್ಮೆ ಸಂತಸ ಮನೆಮಾಡಿದೆ. ಈಗಾಗಲೇ ಮಗಳು ಕ್ಲಿಂಕಾರಾ ಜೊತೆ ಪೋಷಕರಾದ ಈ ಜೋಡಿಗೆ ಈಗ ಅವಳಿ ಮಕ್ಕಳು ಹುಟ್ಟಿದ್ದರಿಂದ ಮೆಗಾ ಕುಟುಂಬದಲ್ಲಿ ಸಂಭ್ರಮ ಶುರುವಾಗಿದೆ. ಫ್ಯಾನ್ಸ್ ಜೊತೆ ಸಿನಿಮಾ ಗಣ್ಯರು ಕೂಡ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.
ಅವಳಿ ಮಕ್ಕಳಿಗೆ ಜನ್ಮ ನೀಡಿದ ಉಪಾಸನಾ – ಚಿರಂಜೀವಿ
ಉಪಾಸನಾ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಮೆಗಾಸ್ಟಾರ್ ಚಿರಂಜೀವಿ ಎಕ್ಸ್ (ಟ್ವಿಟರ್) ನಲ್ಲಿ ತಿಳಿಸಿದ್ದಾರೆ. ತಾಯಿ-ಮಕ್ಕಳು ಆರೋಗ್ಯವಾಗಿದ್ದು, ನಮ್ಮ ಕುಟುಂಬಕ್ಕೆ ಇಬ್ಬರು ಹೊಸ ಸದಸ್ಯರು ಬಂದಿರುವುದು ತುಂಬಾ ಖುಷಿ ತಂದಿದೆ ಎಂದಿದ್ದಾರೆ. ಈ ಸುದ್ದಿಯಿಂದ ಮೆಗಾ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ.
ಹಿಂದೆ ವೇಣು ಸ್ವಾಮಿ ಮಾಡಿದ್ದ ಜ್ಯೋತಿಷ್ಯದ ಮಾತುಗಳು
ಸೆಲೆಬ್ರಿಟಿ ಜ್ಯೋತಿಷಿಯಾಗಿ ಗುರುತಿಸಿಕೊಂಡಿರುವ ವೇಣು ಸ್ವಾಮಿ, ಹಿಂದೆ ರಾಮ್ ಚರಣ್-ಉಪಾಸನಾ ದಂಪತಿ ಬಗ್ಗೆ ಒಂದು ವಿಡಿಯೋ ರಿಲೀಸ್ ಮಾಡಿದ್ದರು. ಮುಖ್ಯವಾಗಿ ಮಗಳು ಕ್ಲಿಂಕಾರಾ ಭವಿಷ್ಯದ ಬಗ್ಗೆ ಮಾತಾಡಿ, ಆಕೆಯ ಜಾತಕದಲ್ಲಿ ರಾಜಯೋಗವಿದೆ, ಮೆಗಾ ಕುಟುಂಬಕ್ಕೆ ಅದೃಷ್ಟ ತರುವ ಮಗಳಾಗಿ ಬೆಳೆಯುತ್ತಾಳೆ ಎಂದಿದ್ದರು. ಚಿರಂಜೀವಿ ಮಟ್ಟದಲ್ಲೇ ಕ್ಲಿಂಕಾರಾ ಹೆಸರು, ಕೀರ್ತಿ ಗಳಿಸುತ್ತಾಳೆ ಎಂದು ಅವರು ಭವಿಷ್ಯ ನುಡಿದಿದ್ದರು.
‘ಕ್ಲಿಂಕಾರಾ ಒಬ್ಬಳೇ ಮಗಳು’ ಎಂಬ ಭವಿಷ್ಯ ತಲೆಕೆಳಗು
ಆದರೆ, ಅದೇ ಸಮಯದಲ್ಲಿ ವೇಣು ಸ್ವಾಮಿ ಮಾಡಿದ ಇನ್ನೊಂದು ಕಾಮೆಂಟ್ ಈಗ ಚರ್ಚೆಗೆ ಕಾರಣವಾಗಿದೆ. ಕ್ಲಿಂಕಾರಾ ನಂತರ ರಾಮ್ ಚರಣ್-ಉಪಾಸನಾಗೆ ಬೇರೆ ಮಕ್ಕಳಾಗುವುದಿಲ್ಲ ಎಂದು ಅವರು ಭವಿಷ್ಯ ನುಡಿದಿದ್ದರು. ಆದರೆ ಈಗ ಉಪಾಸನಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರಿಂದ ಆ ಭವಿಷ್ಯ ಸಂಪೂರ್ಣ ತಪ್ಪಾಗಿದೆ. ಇದನ್ನೇ ಇಟ್ಟುಕೊಂಡು ನೆಟ್ಟಿಗರು ವೇಣು ಸ್ವಾಮಿ ಜ್ಯೋತಿಷ್ಯ ಮತ್ತೊಮ್ಮೆ ತಪ್ಪಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ವೈರಲ್ ಆಗುತ್ತಿರುವ ವೇಣು ಸ್ವಾಮಿ ಹಳೆ ವಿಡಿಯೋ
ರಾಮ್ ಚರಣ್‌ಗೆ ಒಬ್ಬರೇ ಮಗು ಎಂದು ಹಿಂದೆ ವೇಣು ಸ್ವಾಮಿ ಹೇಳಿದ್ದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿದೆ. ಈ ಹೊಸ ಬೆಳವಣಿಗೆಯಿಂದ ಅವರ ಜ್ಯೋತಿಷ್ಯದ ಬಗ್ಗೆ ಟೀಕೆಗಳು ಹೆಚ್ಚಾಗಿವೆ. ಇನ್ನು ಈ ಬಗ್ಗೆ ವೇಣು ಸ್ವಾಮಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕು.


