"ನಮ್ಮ ಮದುವೆಯ ಆರಂಭದಲ್ಲೇ ನಮಗದು ಅರ್ಥವಾಯಿತು. ಅವರು ತುಂಬಾ ಸುರಕ್ಷಿತ ವ್ಯಕ್ತಿ. ಅಂತಹ ಪುರುಷ ಮಾತ್ರ ಮಹಿಳೆಯನ್ನು ಬೆಂಬಲಿಸುತ್ತಾನೆ. ನನ್ನ ಏಳು ಬೀಳುಗಳಲ್ಲಿ ನನ್ನೊಂದಿಗೆ ಇರುವುದು ಮತ್ತು ನಾನು ಅವರೊಂದಿಗೆ ಇರುವುದು ನಮ್ಮ ಸೀಕ್ರೇಟ್" ಎಂದು ಹೇಳಿದ್ದಾರೆ ರಾಮ್‌ ಚರಣ್ ಪತ್ನಿ   ಉಪಾಸನಾ.

ಎರಡನೇ ಮಗುವಿನ ನಿರೀಕ್ಷೆಯಲ್ಲಿ ರಾಮ್‌ ಚರಣ್- ಉಪಾಸನಾ ಜೋಡಿ!

ತೆಲುಗಿನ ಆರ್‌ಆರ್‌ ಆರ್ ಸಿನಿಮಾ ಖ್ಯಾತಿಯ ನಟ ರಾಮ್‌ ಚರಣ್ (Ram Charan) ಹಾಗು ಪತ್ನಿ ಉಪಾಸನಾ ಕೊನಿಡೆಲಾ (Upasana Konidela) ಜೋಡಿ ಈ ದೀಪಾವಳಿಯನ್ನು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ, ಕಾರಣ, ಬೆಳಕಿನ ಹಬ್ಬ ದೀಪಾವಳಿ ಅನ್ನೋದು ಒಮದು ಕಡೆಯಾದರೆ, ಈ ಜೋಡಿ ತಮ್ಮ ಎರಡನೆಯ ಮಗುವಿನ ನಿರೀಕ್ಷೆಯಲ್ಲಿ ಇರೋದು ಮತ್ತೊಂದು ಶುಭ ಸಂಗತಿ. ಈ ಕಾರಣಕ್ಕೆ ಮೆಗಾ ಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಈ ದೀಪಾವಳಿಯಲ್ಲಿ ಹೆಚ್ಚಿನ ಖುಷಿ ಮನೆ ಮಾಡಿತ್ತು.

ಇತ್ತೀಚೆಗೆ, ಟಾಲಿವುಡ್ ಸ್ಟಾರ್ ನಟ ರಾಮ್‌ ಚರಣ್ ಹಾಗೂ ಪತ್ನಿ ಉಪಾಸನಾ ಜೋಡಿ ಸಂಭ್ರಮದ ಸೀಮಂತ, ಅಂದರೆ ಬೇಬಿ ಶೋವರ್ ಸೆಲೆಬ್ರೇಟ್ ಮಾಡಿದ್ದಾರೆ. ಇಡೀ ಮೆಗಾ ಸ್ಟಾರ್ ಕುಟುಂಬ ಈ ಈವೆಂಟ್‌ನಲ್ಲಿ ಭಾಗಿಯಾಗಿ ಅಪಾರ ಹರ್ಷ ವ್ಯಕ್ತಪಡಿಸಿದೆ. ಈ ಮೊದಲು ರಾಮ್‌ ಚರಣ್ ಹಾಗೂ ಉಪಾಸನ ಕಾಮಿನೇನಿ ಜೋಡಿಗೆ ಹೆಣ್ಣುಮಗು ಇದೆ. ಇದೀಗ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಈ ಜೋಡಿ ಖುಷಿಯಾಗಿದ್ದಾರೆ.

ತಾಯಿಯ ಈ ಸಿಂಪಲ್‌ ಸಲಹೆ

ಟಾಲಿವುಡ್‌ ಸೂಪರ್‌ಸ್ಟಾರ್ ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೇಲಾ ರಿಲೇಶನ್‌ಶಿಪ್, ಆರೋಗ್ಯ ಮತ್ತು ಪ್ರೊಫೆಶನಲ್ ಲೈಫ್-ಪರ್ಸನಲ್ ಲೈಫ್ ಬ್ಯಾಲೆನ್ಸ್ ಮಾಡುವ ಬಗ್ಗೆ ಯಾವಾಗಲೂ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ತಾರೆ. ಸದ್ಯ ಕಂಟೆಂಟ್ ಕ್ರಿಯೇಟರ್ ಮಸೂಮ್ ಮಿನಾವಾಲಾ ಮೆಹ್ತಾ ಅವರೊಂದಿಗಿನ ಸಂವಾದದಲ್ಲಿ, ತಮ್ಮ ತಾಯಿಯ ಈ ಸಿಂಪಲ್‌ ಸಲಹೆಯು ತಮ್ಮ ದಾಂಪತ್ಯ ಜೀವನವನ್ನು ಸುಂದರವಾಗಿಡುವಲ್ಲಿ ಹೇಗೆ ದೊಡ್ಡ ಪಾತ್ರವನ್ನು ವಹಿಸಿದೆ ಎಂಬುದನ್ನು ಶೇರ್ ಮಾಡಿದ್ದಾರೆ.

ವಾರಕ್ಕೊಮ್ಮೆ ಡೇಟ್‌ ನೈಟ್

"ನನ್ನ ಅಮ್ಮ ವಾರಕ್ಕೊಮ್ಮೆ ಡೇಟ್‌ ನೈಟ್ ಹೋಗಬೇಕು ಎಂದು ಹೇಳುತ್ತಿದ್ದರು. ನಿಮಗೆ ಅದರ ಮಹತ್ವ ಅರ್ಥವಾಗುವುದಿಲ್ಲ, ಆದರೆ ಅದು ತುಂಬಾ ಮುಖ್ಯ. ನಾವು ಸಾಧ್ಯವಾದಷ್ಟು ಅದನ್ನು ಮಾಡಲು ಪ್ರಯತ್ನಿಸುತ್ತೇವೆ" ಎಂದು ಉಪಾಸನ ಹೇಳಿದ್ದಾರೆ.

ಆಗಾಗ್ಗೆ ಮನೆಯಲ್ಲಿಯೇ ಈ ವಾತವರಣ ಸೃಷ್ಟಿಸಿ

ಇದರರ್ಥ ಯಾವಾಗಲೂ ಹೊರಗೆ ಹೋಗುವುದು ಎಂದರ್ಥವಲ್ಲ. ಬದಲಾಗಿ ಆಗಾಗ್ಗೆ ಮನೆಯಲ್ಲಿಯೇ ಶಾಂತವಾದ ವಾತವರಣ ಸೃಷ್ಟಿಸಿ, ಬೇರೆ ಯಾವುದೇ ಗೌಜು ಗದ್ದಲವಿಲ್ಲದೆ, ಫೋನ್‌, ಟಿವಿ ಇಲ್ಲದೆ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದು. ನಮಗೆ ಪರಸ್ಪರ ಸಮಸ್ಯೆ ಇದ್ದರೆ ಖಂಡಿತವಾಗಿಯೂ ಅದರ ಬಗ್ಗೆ ಮಾತನಾಡುತ್ತೇವೆ. 'ಸಂವಹನ' ನಾವು ಇನ್ನೂ ಇಂಪ್ರೂವ್ ಮಾಡಿಕೊಳ್ಳಬೇಕಾದ ವಿಷಯವಾಗಿದೆ ಮತ್ತು ನಾವು ಮುಂದಕ್ಕೂ ಮುಂದುವರಿಸುತ್ತೇವೆ" ಎಂದು ಕೊನಿಡೇಲಾ ತಿಳಿಸಿದ್ದಾರೆ.

ಸಂವಹನ ಮತ್ತು ಗುಣಮಟ್ಟದ ಸಮಯ

ಸಂವಹನ ಮತ್ತು ಗುಣಮಟ್ಟದ ಸಮಯ ಸಂಬಂಧದ ಕೇಂದ್ರಬಿಂದುವಾಗಿದೆ ಎಂದಿರುವ ಉಪಾಸನಾ, ತಾನು ಮತ್ತು ರಾಮ್ ಚರಣ್ ಕಾರ್ಪೊರೇಟ್ ಪ್ರಪಂಚದಿಂದ ಸ್ಫೂರ್ತಿ ಪಡೆದು "ಸಂಬಂಧದ ವಿಮರ್ಶೆ" ನಡೆಸುತ್ತೇವೆ. "ಬ್ಯುಸಿನೆಸ್‌ನಲ್ಲಿ ಮಾತ್ರ ನಾವು ನಮ್ಮ ಗುರಿಗಳನ್ನು ಪರಿಶೀಲಿಸುತ್ತೇವೆ. ಸಂಬಂಧದಲ್ಲಿ ಅದನ್ನು ಏಕೆ ಮಾಡಬಾರದು?. ಪ್ರತಿ ತ್ರೈಮಾಸಿಕಕ್ಕೊಮ್ಮೆ, ನಿಮ್ಮ ಬೋರ್ಡ್‌ನಲ್ಲಿ ಮೀಟಿಂಗ್‌ ಮಾಡುವಂತೆಯೇ, ನಿಮ್ಮ ವೈಯಕ್ತಿಕ ಗುರಿಗಳು ಯಾವುವು?, ನಿಮ್ಮ ಕುಟುಂಬದ ಗುರಿಗಳು ಯಾವುವು ಮತ್ತು ನಿಮ್ಮ ಬ್ಯುಸಿನೆಸ್‌ ಗುರಿಗಳು ಯಾವುವು ಎಂಬುದನ್ನು ಅರ್ಥಮಾಡಿಕೊಳ್ಳಲು ಮೀಟಿಂಗ್‌ ನಡೆಸಬೇಕಾಗುತ್ತದೆ" ಎಂದಿದ್ದಾರೆ.

ಪತಿ ತಮ್ಮ ಬೆಸ್ಟ್‌ ಫ್ರೆಂಡ್

ಯಾವುದೇ ವಿವಾಹವು ಸವಾಲುಗಳಿಂದ ಮುಕ್ತವಾಗಿಲ್ಲ ಎಂದು ಒಪ್ಪಿಕೊಂಡಿರುವ ಉಪಾಸನಾ, ಸಮಸ್ಯೆಗಳನ್ನು ಮುಕ್ತವಾಗಿ ಪರಿಹರಿಸಿಕೊಳ್ಳುವ ಸಾಮರ್ಥ್ಯ ಮತ್ತು ಎಲ್ಲವನ್ನು ತಮ್ಮ ಕುಟುಂಬದೊಂದಿಗೆ ಹಂಚಿಕೊಳ್ಳುವುದೇ ತಮ್ಮ ಸುಖ ಸಂಸಾರದ ಗುಟ್ಟು ಎಂದಿದ್ದಾರೆ. ಅಷ್ಟೇ ಅಲ್ಲ, ಅವರು ತಮ್ಮ ಪತಿಯನ್ನು ತಮ್ಮ ಬೆಸ್ಟ್‌ ಫ್ರೆಂಡ್ ಎಂದು ಸಹ ಬಣ್ಣಿಸಿದ್ದಾರೆ.

ಜೂನ್ 2012 ರಲ್ಲಿ ವಿವಾಹ

"ನಮ್ಮ ಮದುವೆಯಾಗಿ ಆರಂಭದಲ್ಲೇ ನಮಗದು ಅರ್ಥವಾಯಿತು. ಅವರು ತುಂಬಾ ಸುರಕ್ಷಿತ ವ್ಯಕ್ತಿ. ಸುರಕ್ಷಿತ ಪುರುಷ ಮಾತ್ರ ಮಹಿಳೆಯನ್ನು ಬೆಂಬಲಿಸುತ್ತಾನೆ ಮತ್ತು ಏನಾದರೂ ಮಾಡಲು ಆಕೆಗೆ ಪ್ರೇರೇಪಿಸುತ್ತಾನೆ. ಅವರು ನನಗಾಗಿ ಮಾಡುವುದೂ ಅದನ್ನೇ. ನನ್ನ ಏಳು ಬೀಳುಗಳಲ್ಲಿ ನನ್ನೊಂದಿಗೆ ಇರುವುದು ಮತ್ತು ನಾನು ಅವರೊಂದಿಗೆ ಇರುವುದು ನಮ್ಮ ಸೀಕ್ರೇಟ್" ಎಂದು ಹೇಳಿದ್ದಾರೆ ಉಪಾಸನಾ.

ಉಪಾಸನ ಮತ್ತು ರಾಮ್ ಚರಣ್ ಅವರಿಗೆ ಮದುವೆ ಎಂದರೆ ಪರಿಪೂರ್ಣತೆಯಲ್ಲ. ಬದಲಾಗಿ ಪ್ರಾಮಾಣಿಕ ಸಂಭಾಷಣೆಗಳು ಮತ್ತು ಒಟ್ಟಿಗೆ ಬೆಳೆಯುವ ಇಚ್ಛೆ. 2023 ರಲ್ಲಿ ಮಗಳು ಕ್ಲಿನ್ ಕಾರಾ ಕೊನಿಡೇಲಾ ಜೀವನದಲ್ಲಿ ಆಗಮಿಸಿದ ಮೇಲೆ ಅವರ ಪ್ರಯಾಣವು ಇನ್ನಷ್ಟು ಅರ್ಥಪೂರ್ಣವಾಯಿತು. ಅಂದಹಾಗೆ ಈ ಜೋಡಿ ಜೂನ್ 2012 ರಲ್ಲಿ ವಿವಾಹವಾಗಿದ್ದಾರೆ. ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.

View post on Instagram