ಧಾರ್ಮಿಕ ಭಾವನೆಗಳಿಗೆ ಸಿನಿಮಾ, ಧಾರಾವಾಹಿಗಳಲ್ಲಿ ಧಕ್ಕೆಯಾದಾಗ ಅವುಗಳನ್ನು ಬ್ಯಾನ್ ಮಾಡಿ ಎಂದು ಜನ ಪ್ರತಿಭಟಿಸುತ್ತಾರೆ. ಇದೀಗ ಅಸ್ಸಾಂನ ಧಾರವಾಹಿಯೂ ಇದೇ ಕಾರಣಕ್ಕೆ ಎರಡು ತಿಂಗಳು ಬ್ಯಾನ್ ಆಗಿದೆ.

ಹಿಂದೂ ಹಿರೋಯಿನ್ ಮತ್ತು ಮುಸ್ಲಿಂ ಹೀರೋನನ್ನು ಒಳಗೊಂಡ ಧಾರವಾಹಿಯನ್ನು ಹಿಂದೂ ಸಂಘಟನೆಗಳು ಕಳೆದೊಂದು ತಿಂಗಳಿಂದ ವಿರೋಧಿಸುತ್ತಲೇ ಬಂದಿತ್ತು. ಇದೀಗ ಧಾರ್ಮಿಕ ಧಕ್ಕೆ ಮಾಡಿರುವುದರಿಂದ ಅಸ್ಸಾಂ ಪೊಲೀಸರು ಧಾರವಾಹಿಯನ್ನು ಎರಡು ತಿಂಗಳು ಬ್ಯಾನ್ ಮಾಡಿದ್ದಾರೆ.

ಬಾಯ್‌ಫ್ರೆಂಡ್ ಆತ್ಮಹತ್ಯೆ: ಖ್ಯಾತ ರಿಯಾಲಿಟಿ ಶೋ ಗಾಯಕಿ ರೇಣು ಸ್ಥಿತಿ ಗಂಭೀರ

ಗುವಾಹಟಿಯ ಪೊಲೀಸ್ ಆಯುಕ್ತ ಎಂಪಿ ಗುಪ್ತಾ ಈ ಸಂಬಂಧ ಆಗಸ್ಟ್ 24ರಂದು ಆದೇಶ ನೀಡಿದ್ದಾರೆ. ಬೇಗಂ ಜಾನ್ ಸೀರಿಯಲ್‌ ಸಮಾಜದ ಕೆಲವು ಸಮುದಾಯ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಧಾರಾವಾಹಿಯು ಒಂದು ಧರ್ಮ ಮತ್ತು ಕೆಲವು ಸಮುದಾಯದ ವಿರುದ್ಧ ಅವಹೇಳನಕಾರಿ ದೃಶ್ಯ ಅಥವಾ ಪದ ಒಳಗೊಂಡಿದೆ. ಇದು ಹಿಂಸೆಯನ್ನು ಪ್ರಚೋದಿಸುವ ಸಾಧ್ಯತೆಯಿದೆ ಎಂದು ಪೊಲೀಸ್ ಆಯುಕ್ತ ರೆಂಗೋನಿ ಟಿವಿಗೆ ಬರೆದಿದ್ದಾರೆ.

ಹಿಂದೂ ಜಾರಣ್ ಮಂಚ್‌ , ಆಲ್ ಅಸ್ಸಾಂ ಬ್ರಾಹ್ಮಣ ಯುವಕ ಮಂಡಳಿ,ಯುನೈಟೆಡ್ ಟ್ರಸ್ಟ್ ಅಸ್ಸಾಂ ಹಾಗೂ ಗುಣಜಿತ್ ಅಧಿಕಾರಿ ನೀಡಿದ ದೂರಿನ ಅನ್ವಯ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಭೂಗತ ಲೋಕದ ನಂಟು: 35 ಕೋಟಿಗಾಗಿ ನಿರ್ದೇಶಕನಿಗೆ ಬ್ಲಾಕ್‌ಮೆಲ್!

ಕೇಬಲ್  ಕಾಯಿದೆ ಅಡಿಯಲ್ಲಿ ಜಿಲ್ಲಾ ಮೇಲ್ವಿಚಾರಣಾ ಸಮಿತಿ ದೂರುಗಳನ್ನು ಪರಿಶೀಲಿಸುತ್ತಿದೆ. ಸೀರಿಯಲ್‌ನ ವಿಡಿಯೋ ಕ್ಲಿಪ್‌ಗಳನ್ನು ವೀಕ್ಷಿಸಿದ ಸಮಿತಿ ಧಾರಾವಾಹಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ಅಂಶವಿದೆ ಎಂದು ತಿಳಿಸಿದೆ ಎಂದಿದ್ದಾರೆ. ಚಾನೆಲ್‌ಗೆ ನೋಟಿಸ್ ಕಳುಹಿಸಲಾಗಿದ್ದು, ತಕ್ಷಣಕ್ಕೆ ಜಾರಿಯಾಗುವಂತೆ ಸೀರಿಯಲ್ ಬ್ಯಾನ್ ಮಾಡಲಾಗಿದೆ ಎಂದಿದ್ದಾರೆ.