ರಿಯಾಲಿಟಿ ಶೋ ಮೂಲಕ ದೇಶಾದ್ಯಂತ ಹವಾ ಸೃಷ್ಟಿಸಿದ್ದ ಯುವ ಗಾಯಕಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಾಯ್‌ಫ್ರೆಂಡ್ ಆತ್ಮಹತ್ಯೆ ಸುದ್ದಿ ತಿಳಿದು ರೇಣು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

ಜೂನ್ 2019ರಲ್ಲಿ ಓಡಿ ಹೋಗಿದ್ದ ಗಾಯಕಿ ಹಾಗೂ ಆಕೆಯ ಬಾಯ್‌ ಫ್ರೆಂಡ್ ರವಿ ರಾಜಸ್ಥಾನದ ಅಲ್ವಾರ್‌ಗೆ 5 ದಿನದ ಹಿಂದಷ್ಟೇ ಮರಳಿ ಬಂದಿದ್ದರು. ರೇಣುವಿನ ತಂದೆ ಮಗಳನ್ನು ಬಲವಂತವಾಗಿ ಕರೆದೊಯ್ದಿದ್ದಾನೆ ಎಂದು ಆರೋಪಿಸಿ ರವಿ ವಿರುದ್ಧ ದೂರು ದಾಖಲಿಸಿದ್ದರು.

ಬ್ಯಾಂಕಾಕ್ ಹೊಟೇಲ್‌ನಲ್ಲಿ 3 ದಿನ ಉಳ್ಕೊಂಡಿದ್ರು ಸುಶಾಂತ-ಸಾರಾ..!

ಈ ನಿಟ್ಟಿನಲ್ಲಿ ಇಬ್ಬರ ಹೇಳಿಕೆ ದಾಖಲಿಸಲು ಪೊಲೀಸರು ಇಬ್ಬರನ್ನೂ ಕರೆಯಿಸಿಕೊಂಡಿದ್ದರು. ಬುಧವಾರ ರಾತ್ರಿ ರವಿ ವಿಷ ಕುಡಿದಿರುವುದಾಗಿ ಹೇಳಲಾಗಿದೆ. ರಾತ್ರಿ ಆಸ್ಪತ್ರೆಗೆ ದಾಖಲಿಸಿದರೂ 11 ಗಂಟೆ ಹೊತ್ತಿಗೆ ಮೃತಪಟ್ಟಿದ್ದಾರೆ.

ಬಾಯ್‌ಫ್ರೆಂಡ್ ಸಾವಿನ ಸುದ್ದಿ ತಿಳಿದು ಗಾಯಕಿ ರೇಣು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಮಿತ್ತಲ್ ಆಸ್ಪಯತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಐಸಿಯುವಿನಲ್ಲಿ ಚಿಕಿತ್ಸೆಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ತಬಲ ಸೆಷನ್‌ಗೆ ಹೋಗುತ್ತಿದ್ದ ರವಿ ಮತ್ತು ರೇಣು ಆ ಮೂಲಕವೇ ಪರಿಚಯವಾಗಿದ್ದರು. ರವಿ ವಿವಾಹಿತರಾಗಿದ್ದು ಇಬ್ಬರು ಮಕ್ಕಳಿದ್ದಾರೆ.