ನ್ಯಾಷನಲ್ ಅವಾರ್ಡ್ ಪಡೆದ ನಟ ಆಶಿಶ್ ವಿದ್ಯಾರ್ಥಿ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಈ ಮಾಹಿತಿಯನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ನಟ ದೆಹಲಿ ಹಾಸ್ಪಿಟಲ್‌ಗೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ವಿಡಿಯೋ ಶೇರ್ ಮಾಡಿದ ನಟ, ಗುರುವಾರ ಸ್ವಲ್ಪ ಅಸ್ವಸ್ಥತೆ ಕಾಡಿತು. ಆಮೇಲೆ ಕೊರೋನ ಪಾಸಿಟಿವ್ ಬಂದಿದೆ.

ಕಂಗನಾ ರಣಾವತ್ ವಿರುದ್ಧ ವಂಚನೆ, ಕಾಪಿರೈಟ್ ಕೇಸ್: FIR ದಾಖಲು

ನಾನು ಆಸ್ಪತ್ರೆಗೆ ಹೋಗುತ್ತಿದ್ದೇನೆ ಎಂದಿದ್ದಾರೆ. ದೆಹಲಿ, ವಾರಣಾಸಿ ಮತ್ತು ಮುಂಬೈನಲ್ಲಿ ತಮ್ಮ ಕಾಂಟಾಕ್ಟ್‌ಗೆ ಬಂದವರೆಲ್ಲ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಸೂಚಿಸಿದ್ದಾರೆ.

ನಾನು ಆರಾಮವಾಗಿದ್ದೇನೆ, ನಿಜವಾದ ಬದುಕಿಗೆ ಸ್ವಾಗತ. ಕೇರ್ ತಗೊಳ್ಳಿ, ಥಾಂಕ್ಯೂ ಎಂದು ಬರೆದಿದ್ದಾರೆ. ಈ ಪಾಸಿಟಿವ್ ನನಗೆ ಇಷ್ಟವಿಲ್ಲ. ಕೊರೋನಾಗೆ ಪಾಸಿಟಿವ್ ಬರುವುದು ನನಗಿಷ್ಟವಿಲ್ಲ. ನನ್ನ ಜೊತೆ ಸಂಪರ್ಕದಲ್ಲಿದ್ದವರು ಪರೀಕ್ಷೆ ಮಾಡಿಸಿಕೊಳ್ಳಿ. ನನ್ನಲ್ಲಿ ಈಗ ಕೊರೋನಾ ಲಕ್ಷಣವಿಲ್ಲ. ನಿಮ್ಮ ಪ್ರೀತಿ ಮತ್ತು ವಿಶ್ ಬೆಲೆಕಟ್ಟಲಾಗದ್ದು ಎಂದು ಬರೆದೊದ್ದಾರೆ.