'ನಾನೊಬ್ಬ ಮಸ್ಲಿಂ ಅಂತಾ ಆರ್ಯನ್ ಹೆಮ್ಮೆಯಿಂದ ಹೇಳ್ತಾನೆ...'ಮಗನ ಧರ್ಮ ಆಯ್ಕೆ ಬಗ್ಗೆ ಮುಕ್ತವಾಗಿ ಮಾತನಾಡಿದ ಶಾರುಖ್ ಖಾನ್ ಪತ್ನಿ!
ಮೊದಲ ಸಲ ಶಾರುಖ್ ಖಾನ್ ಮತ್ತು ತಾನು ಪಾಲಿಸುವ ಧರ್ಮ ಯಾವುದು ಹಾಗೇ ಮಗ ಯಾಕೆ ಹೆಮ್ಮೆಯಿಂದ ನಾನು ಮುಸ್ಲಿಂ ಎಂದು ಹೇಳಿಕೊಂಡು ಓಡಾಡುತ್ತಾನೆ ಎಂದು ರಿವೀಲ್ ಮಾಡಿ ಗೌರಿ....
ಲವ್ ಇಸ್ ಬ್ಲೈಂಡ್ ಅನ್ನೋದು ಪದೇ ಪದೇ ಬಾಲಿವುಡ್ ಸಿನಿಮಾಗಳು ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಪ್ರೂವ್ ಮಾಡುತ್ತಿದ್ದಾರೆ. ಮುಂದೊಂದು ದಿನ ನಾನು ಸ್ಟಾರ್ ನಟನಾಗುತ್ತೀನಿ ಅನ್ನೋದನ್ನು ಲೆಕ್ಕಿಸದೆ ಗೌರಿನ ಪ್ರೀತಿಸಿದ್ದು ಶಾರುಖ್. ಮದುವೆ ಆದ ಮೇಲೆ ಧರ್ಮ ಬದಲಾಯಿಸಬೇಕು ಅನ್ನೋ ಯೋಚನೆ ಬಾರದು ಅನ್ ಕಂಡಿಷನಲ್ ಕೊಟ್ಟಿದ್ದು ಗೌರಿ. ಇದಾದ ಮೇಲೆ ಹುಟ್ಟಿದ್ದ ಗೊಂದಲವೇ ಮಕ್ಕಳು ಯಾವ ಧರ್ಮ ಪಾಲಿಸುತ್ತಾರೆ ಎಂದು. ಗೌರಿ ಮತ್ತು ಶಾರುಖ್‌ಗೆ ಮೂವರು ಮಕ್ಕಳು - ಆರ್ಯನ್ ಖಾನ್, ಸುಹಾನಾ ಖಾನ್ ಮತ್ತು ಅಬ್ರಾಹ್ಮ ಖಾನ್.
ಕೆಲವು ವರ್ಷಗಳ ಹಿಂದೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಗೌರಿ ಖಾನ್ ಭಾಗಿಯಾಗಿದ್ದರು ಆಗ ತಮ್ಮ ಮಕ್ಕಳು ಯಾವ ಧರ್ಮವನ್ನು ಪಾಲಿಸುತ್ತಾರೆ, ಯಾವ ಧರ್ಮವನ್ನು ಪಾಲಿಸಲು ಇಚ್ಚಿಸುತ್ತಾರೆ ಹಾಗೂ ಅವರ ಮನಸ್ಸಿನಲ್ಲಿ ಏನೇಲ್ಲಾ ಓಡುತ್ತದೆ ಎಂದು ಹಂಚಿಕೊಂಡಿದ್ದರು. 'ಎರಡು ಧರ್ಮಗಳ ನಡುವೆ ಬ್ಯಾಲೆನ್ಸ್ ಇದೆ. ನಾನು ಶಾರುಖ್ ಖಾನ್ ಧರ್ಮವನ್ನು ಗೌರವಿಸುತ್ತೀನಿ ಹಾಗಂತ ನಾನು ಧರ್ಮ ಬದಲಾಯಿಸಬೇಕು ಕನ್ವರ್ಟ್ ಆಗಬೇಕು ಅಂತೇನು ಇಲ್ಲ. ಮತಾಂತರದಲ್ಲಿ ನನಗೆ ಯಾವುದೇ ನಂಬಿಕೆ ಇಲ್ಲ. ಪ್ರತಿಯೊಬ್ಬರು ತಮ್ಮಗೆ ಇಷ್ಟವಾಗುವ ಧರ್ಮವನ್ನು ಪಾಲಿಸಬೇಕು ಅದು ನಮ್ಮ ಹಕ್ಕು ನಮ್ಮ ಸ್ವಾತಂತ್ರ್ಯ. ಹಾಗಂತ ಯಾವುದೇ ರೀತಿಯಲ್ಲಿ ಅಗೌರವ ತೋರಿಸಬಾರದು. ಶಾರುಖ್ ಖಾನ್ ಇದುವರೆಗೂ ನನ್ನ ಧರ್ಮವನ್ನು ಅಗೌರವಿಸಿಲ್ಲ' ಎಂದು ಗೌರಿ ಖಾನ್ ಮಾತನಾಡಿದ್ದರು.
ಶಾರುಖ್ ಖಾನ್ ಮುಸ್ಲಿಂ ಹಾಗೂ ಗೌರಿ ಹಿಂದು ಆಗಿರುವ ಕಾರಣ ಮಕ್ಕಳು ಯಾವ ಧರ್ಮವನ್ನು ಪಾಲಿಸುತ್ತಾರೆ ಅನ್ನೋದು ಕರಣ್ ಪ್ರಶ್ನೆ ಆಗಿತ್ತು. 'ಶಾರುಖ್ ಖಾನ್ ಪಕ್ಕಾ ಫಾಲೋವರ್ಸ್ ನನ್ನ ಹಿರಿಯ ಮಗ ಆರ್ಯನ್ ಖಾನ್ ಹೀಗಾಗಿ ಶಾರುಖ್ ನಡೆಸಿಕೊಂಡು ಬರುವುದನೇ ಆತ ಕೂಡ ಮಾಡುವುದು ಅಲ್ಲದೆ ಆತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ ನಾನು ಮುಸ್ಲಿಂ ಅಂತ' ಎಂದು ಗೌರಿ ಖಾನ್ ಹೇಳಿದ್ದರು. ಆರ್ಯನ್ ಖಾನ್ ಈ ರೀತಿ ಹೇಳುವುದಕ್ಕೆ ಗೌರಿ ಮನೆಯಲ್ಲಿ ಹೇಗೆ ರಿಯಾಕ್ಟ್ ಮಾಡುತ್ತಾರೆ ಎಂದು ಮರು ಪ್ರಶ್ನೆ ಮಾಡಿದಾಗ 'ನಾನು ಮುಸ್ಲಿಂ ಎಂದು ನನ್ನ ತಾಯಿಗೆ ಆರ್ಯನ್ ಹೇಳುತ್ತಾನೆ ಆಗ ಅಕೆ ನೀನು ಏನು ಹೇಳುತ್ತಿದ್ಯಾ ಎಂದು ಜೋರು ಮಾಡುತ್ತಾರೆ ಆದರೆ ಯಾವುದೇ ಕಾರಣಕ್ಕೂ ಬೇಸರ ಮಾಡಿಕೊಳ್ಳುವುದಿಲ್ಲ. ಇನ್ನು ಹೇಳಬೇಕು ಅಂದ್ರೆ ಇದನ್ನು ಆಕೆ ಕೂಡ ಡೀಲ್ ಮಾಡುತ್ತಿದ್ದಾಳೆ ಆದರೆ ಇದು ಸತ್ಯ' ಎಂದಿದ್ದಾರೆ ಗೌರಿ.
2028ರವರೆಗೂ ಯಶ್ ದೆಸೆ ಚೆನ್ನಾಗಿದೆ, ರಿಷಬ್ ಶೆಟ್ಟಿ ಕಾಂತಾರ 2 ಲಕ್ ಕೊಡುತ್ತಾ? ನಟ ನಾಗರಾಜ್ ಕೋಟೆ ನುಡಿದ ಭವಿಷ್ಯ
ಆರ್ಯನ್ ಖಾನ್ ಎಷ್ಟೇ ಬ್ಯುಸಿಯಾಗಿದ್ದರು ತಮ್ಮ ನೈಟ್ ಪ್ರೇಯರ್‌ಗಳನ್ನು ಮಿಸ್ ಮಾಡುವುದಿಲ್ಲವಂತೆ...'ಆರ್ಯನ್ ಖಾನ್ ರಾತ್ರಿ ಸಮಯದಲ್ಲಿ ಪ್ರಾರ್ಥನೆ ಮಾಡಿನೇ ಮಲಗುವುದು..ಮೊದಲು ಅಮ್ಮ ಮಾಡುವ ಪ್ರಾರ್ಥನೆ ಮಾಡುತ್ತೀನಿ ಆನಂತರ ಅಪ್ಪ ಮಾಡುವ ಪ್ರಾರ್ಥನೆ ಮಾಡುತ್ತೀನಿ ಎನ್ನುತ್ತಾನೆ' ಎಂದು ಗೌರಿ ಹೇಳಿದ್ದಾರೆ.