ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಅರ್ಪಿತಾ ಮೊದಲ ಬಾರಿಗೆ ತಮ್ಮ ಕುಟುಂಬದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ಖಾನ್‌ ಕುಟುಂಬದ ಪರಿಚಯ ಇಲ್ಲಿದೆ....

ಖಾನ್‌ ಕುಟುಂಬದ ಮುದ್ದು ಮಗಳು ಅರ್ಪಿತಾ ಎರಡನೇ ಮಗುವಿನ ನಿರೀಕ್ಷೆಯಲಿದ್ದಾರೆ. 2014 ರಲ್ಲಿ ಆಯುಷ್‌ ಶರ್ಮಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಕೆಲವೇ ವರ್ಷಗಳಲ್ಲಿ ಮನೆಗೆ ಅಹಿಲ್ ಶರ್ಮವನ್ನು ಬರ ಮಾಡಿಕೊಂಡರು. ಈ ವೇಳೆ ಕುಟುಂಬಸ್ಥರೆಲ್ಲಾ ಒಟ್ಟಾಗಿ ಸೇರಿಕೊಂಡು ಸಂಭ್ರಮಿಸುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಬಾಲಿವುಡ್ ಸುಲ್ತಾನ್ ಸಲ್ಮಾನ್ ಚಿತ್ರದಲ್ಲಿ ನಮ್ಮ 'ಕಾಮಿಡಿ ಕಿಲಾಡಿ'ಗಳು!

ಫೋಟೋದಲ್ಲಿ ಅರ್ಪಿಕಾ, ಆಯುಷ್, ಅರ್ಬಾಜ್ ಖಾನ್, ಸಾಹಿಲ್ ಖಾನ್, ಹಿಲೆನ್, ಅಲಿಜ್ನಿ , ಅತುಲ್, ಸಲೀಂ ಮತ್ತು ಇನ್ನಿತರ ಕುಟುಂಬಸ್ಥರು ಬಿಗ್‌ ಫ್ರೇಮ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋ ಇದು.

View post on Instagram

ಇನ್ನು ಕೆಲ ದಿನಗಳ ಹಿಂದೆ ಅರ್ಪಿತಾ ಮತ್ತು ಆಯುಷ್ ಶರ್ಮಾ 5 ನೇ ಮದುವೆ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಪತಿ ಬಗ್ಗೆ ಬರೆದುಕೊಂಡಿದ್ದಾರೆ. 'ನಾವು ಎಲ್ಲವನ್ನೂ ಒಟ್ಟಿಗೆ ಹೊಂದಿಲ್ಲದಿರಬಹುದು ಆದರೆ, ಒಟ್ಟಿಗೆ ನಾವು ಎಲ್ಲವನ್ನೂ ಹೊಂದಿದ್ದೇವೆ. Happy 5th Anniversary my Love. ಯಾವುದೇ ಏರು ಪೇರು ಇಲ್ಲದೆ ಕುಟುಂಬವನ್ನು ಸಮಾನವಾಗಿ ನಡೆಸಿಕೊಂಡು ಹೋಗುತ್ತಿರುವ ನಿನಗೆ ನಾನು ಎಷ್ಟು ಥ್ಯಾಂಕ್ಸ್‌ ಹೇಳಿದರೂ ಸಾಲದು. ಫ್ರೆಂಡ್‌ ಆಗಿ, ಬಾಯ್‌ ಫ್ರೆಂಡ್ ಆಗಿ ಆ ನಂತರ ಪತಿಯಾಗಿ ಆಮೇಲೆ ನನ್ನ ಮಗನಿಗೆ ಮೆಚ್ಚುಗೆಯ ತಂದೆಯಾಗಿ ನಿನ್ನ ಜರ್ನಿ ಅದ್ಭುತವಾಗಿತ್ತು' ಎಂದು ಬರೆದುಕೊಂಡು ಪ್ರೀತಿ ವ್ಯಕ್ತಪಡಿಸಿದ್ದರು.

View post on Instagram