ಬಾಲಿವುಡ್ ಬಾಕ್ಸ್‌ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಹಾಗೂ ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ದಬಾಂಗ್-3' ಚಿತ್ರದ ಕನ್ನಡ ವರ್ಷನ್‌ ಡಬ್ಬಿಂಗ್ ಪ್ರಾರಂಭವಾಗಿದೆ.

ಸಲ್ಮಾನ್ ಖಾನ್ ಬೇರ್ ಬಾಡಿಯಲ್ಲಿ ಫೈಟ್ ಮಾಡುವ ಸೀನ್ ರಿವೀಲ್?

 

ಜೀ ಕನ್ನಡದ ಟಾಪ್ ರೇಟೆಡ್ ರಿಯಾಲಿಟಿ ಶೋ 'ಕಾಮಿಡಿ ಕಿಲಾಡಿಗಳು' ಸ್ಪರ್ಧಿಗಳಾದ ಶಿವರಾಜ್‌.ಕೆ.ಆರ್.ಪೇಟೆ, ದಿವ್ಯಾ ಹಾಗೂ ಗೋವಿಂದೇ ಗೌಡ ದಬಾಂಗ್‌-3 ಚಿತ್ರದಲ್ಲಿರುವ ಪ್ರಮುಖ ಪಾತ್ರಗಳಿಗೆ ಧ್ವನಿ ನೀಡಿದ್ದಾರೆ.

 

ಕನ್ನಡ ವರ್ಷನ್‌ಗೆ ಯಾರ ಧ್ವನಿ ಸೂಕ್ತವಾಗುತ್ತದೆ ಎಂದು ಚಿತ್ರತಂಡ ಯೋಚಿಸಿ ಇವರನ್ನು ಆಯ್ಕೆ ಮಾಡಿದೆ. ಅಷ್ಟೇ ಅಲ್ಲದೇ ವೀಣಾ ಸುಂದರ್, ಚಂದ್ರಕಲಾ ಹಾಗೂ ರವಿಶಂಕರ್ ಗೌಡ ಸೇರಿ ಹಲವರು ಕಲಾವಿದರು ಈ ಚಿತ್ರಕ್ಕೆ ದನಿಯಾಗಿದ್ದಾರೆ. 

ಖ್ಯಾತ ನಟನ ಪತ್ನಿಗೆ ಕಿಚ್ಚ ಸುದೀಪ್ ಫಿದಾ!

 

ಈ ಹಿಂದೆ ಟ್ರೇಲರ್ ಲಾಂಚ್ ಕಾರ್ಯಕ್ರಮ ಮುಂಬೈನ ಖಾಸಗಿ ಹೊಟೇಲ್‌ನಲ್ಲಿ ನಡೆಸಲಾಗಿದ್ದು ಸಲ್ಮಾನ್ ಖಾನ್, ಸೋನಾಕ್ಷಿ ಸಿನ್ಹಾ ಹಾಗೂ ಇನ್ನಿತರ ಪ್ರಮುಖ ಪಾತ್ರಧಾರಿಗಳು ಭಾಗಿಯಾಗಿದ್ದರು.

 

ಹಿಂದಿ ಹಾಗೂ ಕನ್ನಡದ ಜತೆಗೆ ಡಬಾಂಗ್-3 ಬಹು ಭಾಷೆಗಳಲ್ಲಿ ತೆರೆಗೆ ಬರುತ್ತಿರುವ ಚಿತ್ರ. ಆ ಕಾರಣಕ್ಕಾಗಿಯೇ ಅದರ ಎಲ್ಲ ಅವತರಣಿಕೆಯ ಟ್ರೇಲರ್ ಸಹ ಲಾಂಚ್ ಆಗಿದೆ.

ಸಲ್ಲು ಭಾಯ್ ವಿರುದ್ಧ ತೊಡೆ ತಟ್ಟಿದ ಸುದೀಪ್; ಅರೇ ಏನಾಯ್ತು ಕಿಚ್ಚನಿಗೆ?

 

ಈ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದು, ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಹಾಗೂ ಸ್ನೇಹಿತ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಜತೆ ಜತೆಯಾಗಿ ನಟಿಸುತ್ತಿರುವುದರಿಂದ ಮತ್ತಷ್ಟು ಕೂತೂಹಲ ಕೆರಳಿಸಿದೆ. ಈಗಾಗಲೇ ಈ ಚಿತ್ರ ತಂಡ ವಿಭಿನ್ನ ಶೈಲಿಯಲ್ಲಿ ಚಿತ್ರ ಪ್ರಚಾರ ಆರಂಭಿಸಿದೆ.

 

ಅಲ್ಲದೇ ಕನ್ನಡ ಚಿತ್ರದಲ್ಲಿಯೂ ನಟಿಸಬೇಕೆಂಬ ಆಸೆ ಇದೆ ಎಂದು ಸಲ್ಮಾನ್ ಹೇಳಿದ್ದಾರೆ.