'ಅರ್ಜುನ್ ರೆಡ್ಡಿ' ಚಿತ್ರ ವಿಜಯ್ ದೇವರಕೊಂಡಗೆ ಮೈಲಿಗಲ್ಲಾದರೂ, ಆರಂಭದಲ್ಲಿ ಸಾಯಿ ಪಲ್ಲವಿಗೆ ಆ ಪಾತ್ರ ನೀಡಲು ಯೋಚಿಸಲಾಗಿತ್ತು. ಆದರೆ, ಸಾಯಿ ಪಲ್ಲವಿ ಸಂಪ್ರದಾಯಸ್ಥ ಉಡುಗೆ ತೊಡುತ್ತಾರೆಂದು ಭಾವಿಸಿ ಶಾಲಿನಿ ಪಾಂಡೆ ಆಯ್ಕೆಯಾದರು. ಚಿತ್ರದ ಯಶಸ್ಸಿನ ಬಳಿಕ ಸಾಯಿ ಪಲ್ಲವಿ ಪಾತ್ರವನ್ನು ಮೆಚ್ಚಿದರು. ನಿರ್ದೇಶಕ ವಂಗಾ ಕೂಡ ಸಾಯಿ ಪಲ್ಲವಿಯ ಸಂಪ್ರದಾಯಸ್ಥ ಉಡುಗೆಯನ್ನು ಶ್ಲಾಘಿಸಿದರು.
ವಿಜಯ್ ದೇವರಕೊಂಡ (Vijay Deverakonda) ಕೆರಿಯರ್‌ನಲ್ಲಿ 'ಅರ್ಜುನ್ ರೆಡ್ಡಿ (Arjun Reddy)' ಸಿನಿಮಾ ಒಂದು ಮೈಲಿಗಲ್ಲು ಎಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವೇ ಇಲ್ಲ. ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ನಟ ವಿಜಯ್ ದೇವರಕೊಂಡ ಹೊಸ ಟಾಲಿವುಡ್‌ನಲ್ಲಿ ಹೊಸ ಅಲೆಯನ್ನು ಸೃಷ್ಟಿಸಿಬಿಟ್ಟರು. ಜೊತೆಗೆ, ಈ ಚಿತ್ರದ ಮೂಲಕ ಸಿನಿಮಾಗೂ ಹೊಸ ಟ್ರೆಂಡ್ ಸೃಷ್ಟಿಯಾಯ್ತು. ಅರ್ಜುನ್ ರೆಡ್ಡಿ ಚಿತ್ರದ ಮೂಲಕ ಟಾಲಿವುಡ್‌ನಲ್ಲಿ ಹೊಸ ಸ್ಟಾರ್ ಉದಯವಾಯ್ತು!
ಆದರೆ. ಅಚ್ಚರಿ ಎಂಬಂತೆ, ಅರ್ಜುನ್ ರೆಡ್ಡಿ ಚಿತ್ರದಲ್ಲಿ ನಟಿಸಿದ ನಟಿ ಶಾಲಿನಿ ಪಾಂಡೆ (Shalini Pandey) ಅವರಿಗೆ ಈ ಸಿನಿಮಾ ಸೂಪರ್ ಸಕ್ಸಸ್ ಅಷ್ಟೇನೂ ಲಾಭ ತಂದುಕೊಡಲಿಲ್ಲ ಎನ್ನಬಹುದು. ಕಾರಣ, ಅರ್ಜುನ್ ರೆಡ್ಡಿ ಸಿನಿಮಾ ಟೋಟಲೀ ಹೀರೋ ಓರಿಯಂಟೆಡ್ ಎನ್ನುವುದು ಒಂದು ಕಡೆಯಾದರೆ, ಅದು ಶಾಲಿನಿ ಪಾಂಡೆ ದುರಾದೃಷ್ಟ ಎನ್ನಬಹುದು ಎನ್ನಾಗುತ್ತಿದೆ. ಕಾರಣ, ಈ ಚಿತ್ರದಲ್ಲಿ ಚಾನ್ಸ್ ಸಿಕ್ಕಿರೋದೇ ಶಾಲಿನಿ ಪಾಂಡೆಗೆ ಅದೃಷ್ಟ ಎನ್ನಬೇಕು. ಕಾರಣ, ಈ ಕಥೆ ನೋಡಿ, ಅರ್ಥವಾಗುತ್ತದೆ..
ಹನುಮಂತ ನಾಟಕ ಮಾಡ್ತಾನೆ ಅನ್ನೋರು ನೋಡ್ಬೇಕಂತೆ ಇದು.. ಏನಂತೆ 'ಬಿಗ್ ಬಾಸ್' ಮ್ಯಾಟರ್?
ಹೌದು, 'ಅರ್ಜುನ್ ರೆಡ್ಡಿ' ಸಿನಿಮಾಗೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ಮೊದಲು ಆಯ್ಕೆ ಮಾಡಿಕೊಂಡಿದ್ದು ನಟಿ ಸಾಯಿ ಪಲ್ಲವಿಯನ್ನು. ಅರ್ಜುನ್ ರೆಡ್ಡಿ ಕಥೆ ಮಾಡಿಕೊಂಡ ಸಂದೀಪ್ ರೆಡ್ಡಿ ವಂಗಾ, ಈ ಪಾತ್ರಕ್ಕೆ ಮಲಯಾಳಂ ಬೆಡಗಿ, ದಕ್ಷಿಣ ಭಾರತದ ಸ್ಟಾರ್ ನಟಿ ಸಾಯಿ ಪಲ್ಲವಿ (Sai Pallavi) ಅವರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅಪ್ರೋಚ್ ಕೂಡ ಮಾಡಿದ್ದಾರೆ. ಆದರೆ, ಕೇರಳದ ಕೋಆರ್ಡಿನೇಟರ್, ಕಥೆ, ಪಾತ್ರದ ಬಗ್ಗೆ ಹೇಳುವುದಕ್ಕೆ ಮೊದಲೇ, 'ನಟಿ ಸಾಯಿ ಪಲ್ಲವಿ ಅವರನ್ನು ಮರೆತುಬಿಡಿ, ಆಕೆ ತುಂಬಾ ಸಂಪ್ರದಾಯಸ್ಥೆ ತರಹ ಡ್ರೆಸ್ ಮಾಡ್ತಾರೆ, ಇಂಥ ಪಾತ್ರ ಮಾಡೋದೇ ಇಲ್ಲ' ಎಂದಿದ್ದಾರೆ.
ಕೋಆರ್ಡಿನೇಟರ್ ಮಾತನ್ನು ಕೇಳಿದ ನಿರ್ದೇಶಕರಾದ ವಂಗಾ ಅವರು ಮತ್ತೆ ಮರುಮಾತನ್ನಾಡದೇ ಈ ಚಿತ್ರಕ್ಕೆ ಶಾಲಿನಿ ಪಾಂಡೆ ಅವರನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿ ತೆರೆಗೆ ತಂದಿದ್ದಾರೆ. ಸಿನಿಮಾ ಸೂಪರ್ ಹಿಟ್ ಆಗಿದೆ. ಅಚ್ಚರಿ ಎಂಬಂತೆ, ಈ ಸಿನಿಮಾವನ್ನು ನೋಡಿದ ನಟಿ ಸಾಯತಿ ಪಲ್ಲವಿಗೆ ಈ ಬಗ್ಗೆ ಯಾವುದೇ ಅರಿವೂ ಇರಲಿಲ್ಲ. ನಟಿ ಸಾಯಿ ಪಲ್ಲವಿ ಈ ಬಗ್ಗೆ ಸಿನಿಮಾ ಸಕ್ಸಸ್ ಬಳಿಕ ಮಾತನ್ನಾಡಿದ್ದು ಕೇಳಿದರೆ ಯಾರಾದ್ರೂ ಶಾಕ್ ಆಗ್ಲೇಬೇಕು!
ಹೆಂಡ್ತಿ ಕಾಟನೂ ತಪ್ಪುತ್ತೆ, ಗರ್ಲ್‌ಫ್ರೆಂದೂ ಬಿಟ್ಟೋಗಲ್ಲ; ಯೋಗರಾಜ್ ಭಟ್ರ ಹೇಳಿದ್ದು ಕೇಳಿ ಸಾಕು!
ಹಾಗಿದ್ರೆ ನಟಿ ಸಾಯಿ ಪಲ್ಲವಿ ಅರ್ಜುನ್ ರೆಡ್ಡಿ ಸಿನಿಮಾದ ಸಕ್ಸಸ್ ಬಗ್ಗೆ ಹೇಳಿರುವುದು ಏನು? ನಟಿ ಸಾಯಿ ಪಲ್ಲವಿ 'ಈ ಸಿನಿಮಾವನ್ನು ನೋಡಿದರೆ, ಸಿನಿಮಾದ ಈ ಪಾತ್ರ ಮಾಡೋದಕ್ಕೆಂದೇ ಅಂತಿಮವಾಗಿ ಕಲಾವಿದರನ್ನು ಆಯ್ಕೆ ಮಾಡಲಾಗಿದೆ ಎನ್ನುವಂತಿದೆ' ಎಂದಿದ್ದಾರೆ. ಅಷ್ಟರಮಟ್ಟಿಗೆ ನಟಿ ಸಾಯಿ ಪಲ್ಲವಿಗೆ ಈ ಚಿತ್ರದ ಬಗ್ಗೆ ಒಂದು ಜಡ್ಜ್‌ಮೆಂಟ್ ಸಿಕ್ಕಿದೆ. 'ಇಂತಹ ಪಾತ್ರವನ್ನು ಎಲ್ಲರೂ ಮಾಡೋಕೆ ಅಸಾಧ್ಯ, ಮಾಡತಕ್ಕಂತ ಕಲಾವಿದರನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ' ಎಂಬರ್ಥದಲ್ಲಿ ಮಾತನ್ನಾಡಿದ್ದಾರೆ ಸಾಯಿ ಪಲ್ಲವಿ!
ಅದೆಲ್ಲಕ್ಕಿಂತ ಮಿಗಿಲಾಗಿ, ನಟಿ ಸಾಯಿ ಪಲ್ಲವಿ ಬಗ್ಗೆ 'ಅರ್ಜುನ್ ರೆಡ್ಡಿ' ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. 'ನಟಿ ಸಾಯಿ ಪಲ್ಲವಿ ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಸಂಪ್ರದಾಯಸ್ಥ ಉಡುಪಿನಲ್ಲೇ ಕಾಣಿಸಿಕೊಳ್ಳುವ ಮೂಲಕ ಒಂದು ಘನತೆ ಕಾಪಾಡಿಕೊಂಡಿದ್ದಾರೆ. ಅದು ನಿಜವಾಗುಯೂ ಸಾಹಸವೇ ಸರಿ' ಎಂದಿದ್ದಾರೆ.
