Asianet Suvarna News Asianet Suvarna News

ಜಾಹ್ನವಿ, ಖುಷಿ ಇರದಿದ್ರೆ ಅಪ್ಪನ ಹೇಟ್ ಮಾಡ್ತಿದ್ರಂತೆ ಅರ್ಜುನ್

  • ಅಪ್ಪನ ಮದುವೆಯಾದ ಶ್ರೀದೇವಿ ಬಗ್ಗೆ ಅಸಮಾಧಾನ, ಆದ್ರೆ ತಂಗಿಯರಂದ್ರೆ ಇಷ್ಟ
  • ಜಾಹ್ನವಿ, ಖುಷಿ ಇರದಿದ್ರೆ ಬಹುಶಃ ಅಪ್ಪನ ಹೇಟ್ ಮಾಡ್ತಿದ್ನೇನೋ ಎಂದ ನಟ

 

Arjun Kapoor says he would have resented Boney Kapoor had it not been for Janhvi and Khushi dpl
Author
Bangalore, First Published Aug 3, 2021, 11:01 AM IST
  • Facebook
  • Twitter
  • Whatsapp

ಬಾಲಿವುಡ್‌ನಲ್ಲಿ ವೈವಾಹಿಕ ಸಂಬಂಧಗಳು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಹೇಗೆ ಹೇಗೋ ಪರಸ್ಪರ ಸಂಬಂಧಿಕರಾಗಿರುವ ಬಹಳಷ್ಟು ಬಾಲಿವುಡ್ ಸೆಲೆಬ್ರಿಟಿಗಳಿದ್ದಾರೆ. ಇವರಲ್ಲಿ ಬೋನಿ ಕಪೂರ್ ಫ್ಯಾಮಿಲಿಯೂ ಒಂದು. ಮೊದಲ ಪತ್ನಿಗೆ ವಿಚ್ಛೇದನೆ ಕೊಟ್ಟು ಬಾಲಿವುಡ್ ಟಾಪ್ ಲೇಡಿ ಸೂಪರ್‌ಸ್ಟಾರ್ ಶ್ರಿದೇವಿಯನ್ನು ಮದುವೆಯಾಗಿದ್ದರು ಬೋನಿ ಕಪೂರ್. ಮೊದಲ ಹೆಂಡತಿಯಲ್ಲಿ ಇಬ್ಬರು ಮಕ್ಕಳು. ಇದರಲ್ಲಿ ಅರ್ಜುನ್ ಕಪೂರ್ ತಂದೆಯ ಬಗ್ಗೆ ವಿಶೇಷ ಭಾವನೆ ಇಲ್ಲದೆಯೇ ಬೆಳೆದರು. ತಾಯಿ ಹಾಗೂ ತಾಯಿಯ ಅಮ್ಮ, ಅಜ್ಜಿಯೇ ಅರ್ಜುನ್‌ಗೆ ಆಪ್ತರಾಗಿದ್ದರು.

ಬೋನಿ ಕಪೂರ್ ಶ್ರೀದೇವಿಯವರನ್ನು ಮದುವೆಯಾದಾಗಲೂ ನಟ ಶ್ರೀದೇವಿಯನ್ನು ತುಂಬ ಹೇಟ್ ಮಾಡುತ್ತಿದ್ದರು. ತನ್ನ ತಂದೆಯನ್ನು ಕಸಿದುಕೊಂಡ ಮಹಿಳೆಯಾಗಿಯೇ ಕಂಡಿದ್ದರು. ಆದರೆ ಶ್ರೀದೇವಿ ಸಾವನ್ನಪ್ಪಿದ ಸಂದರ್ಭ ಅವರ ಕುಟುಂಬ ಒಂದಾಯಿತು. ಬೋನಿ ಕಪೂರ್ ಮೊದಲನೇ ಹೆಂಡತಿ ಮಕ್ಕಳೂ ಎರಡನೇ ಹೆಂಡತಿ ಮಕ್ಕಳೂ ಆಪ್ತರಾದರು. ಈ ಸಂದರ್ಭ ಅರ್ಜುನ್ ಕಪೂರ್ ತಂದೆಯ ಜೊತೆ ನಿಂತಿದ್ದರು. ಹಾಗೆಯೇ ಅರ್ಜುನ್‌ಗೆ ತಂದೆ ಬೋನಿ ಕಪೂರ್ ಎರಡನೇ ಪತ್ನಿಯ ಮಕ್ಕಳು ಜಾಹ್ನವಿ ಹಾಗೂ ಖುಷಿ ಅಂದ್ರೆ ಅಚ್ಚುಮೆಚ್ಚು.

ಸೆಕ್ಸ್‌ಗಾಗಿ ಆಹಾರ ಬಿಡ್ತೀನಿ ಎಂದ ಅರ್ಜುನ್ ಕಪೂರ್

ಜಾಹ್ನವಿ ಮತ್ತು ಖುಷಿ ಇರದಿದ್ದರೆ ತಾನು ಬಹಳಷ್ಟು ವಿಷಯಗಳನ್ನು ಹೇಟ್ ಮಾಡುತ್ತಿದ್ದೆ. ತನ್ನ ಅಪ್ಪ ನಿರ್ಮಾಪಕ ಬೋನಿ ಕಪೂರ್ ಜೊತೆ ಮತ್ತೆ ಒಂದಾಗುತ್ತಿರಲಿಲ್ಲ ಎಂದು ಅರ್ಜುನ್ ಹೇಳಿದ್ದಾರೆ. ಶ್ರೀದೇವಿ ಜೊತೆ ಸಂಬಂಧ ಶುರುವಾದಾಗ ಬೋನಿ ಕಪೂರ್ ಅವರು ಆಗಲೇ ಮೋನಾ ಶೌರಿಯನ್ನು ಮದುವೆಯಾಗಿದ್ದರು. ಇತ್ತೀಚೆಗೆ ನಟ ಸಂದರ್ಶನದಲ್ಲಿ ತಂದೆಯ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದು, ತನ್ನ ತಂದೆಯ ಜೊತೆ ಮತ್ತೆ ಒಂದಾಗಿದ್ದಕ್ಕೆ ಕಾರಣ ಜಾಹ್ನವಿ ಹಾಗೂ ಖುಷಿ ಕಪೂರ್ ಎಂದಿದ್ದಾರೆ. ಖುಷಿ ಹಾಗೂ ಜಾಹ್ನವಿಯಿಂದ ನನ್ನ ತಂದೆಯನ್ನು ಬೇರೊಂದು ದೃಷ್ಟಿಯಲ್ಲಿ ನೋಡುವುದಕ್ಕೆ ಸಾಧ್ಯವಾಯ್ತು. ಹಾಗೆಯೇ ತಂದೆಯನ್ನು ಮತ್ತಷ್ಟು ಹೆಚ್ಚು ಪ್ರೀತಿಸಲು ಸಾಧ್ಯವಾಯಿತು ಎಂದಿದ್ದಾರೆ. 

ತನ್ನ ಅಮ್ಮನಿಗೆ ಕೈಕೊಟ್ಟು ನಟಿ ಶ್ರೀದೇವಿಯನ್ನು ಮದುವೆಯಾದ ತಂದೆ: ನಟ ಅರ್ಜುನ್ ಹೇಳಿದ್ದಿಷ್ಟು..!

ನನ್ನ ತಂದೆಯ ಜೊತೆಗಿರಬೇಕೆಂದೆ ಬಯಸಿದಷ್ಟು ನಾನವರ ಜೊತೆ ಇರಲಿಲ್ಲ. ನಾನು ನನ್ನ ತಂದೆಯ ಹಾಗೆಯೇ ಎನ್ನುವುದನ್ನು ಕೇಳಿದ್ದೇನೆ. ಆದರೆ ನನಗೆ ಹಾಗನಿಸಿರಲಿಲ್ಲ, ಆದರೆ ಖುಷಿ ಹಾಗೂ ಜಾಹ್ನವಿಯನ್ನು ಭೇಟಿಯಾಗಿ ಆ ತಡೆಯನ್ನು ಮುರಿದು ತಂದೆಯೊಂದಿಗೆ ಚಂದದ ಸಂಬಂಧ ಹೊಂದಲು ಸಾಧ್ಯವಾಯಿತು. ಜಾಹ್ನವಿ ಮತ್ತು ಖುಷಿ ಇರದಿದ್ದರೆ ನಾನು ನನ್ನ ತಂದೆಯೊಂದಿಗೆ ಸೇರಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.

 
 
 
 
 
 
 
 
 
 
 
 
 
 
 

A post shared by Arjun Kapoor (@arjunkapoor)

Follow Us:
Download App:
  • android
  • ios