56 ವರ್ಷದ ಅರ್ಬಾಜ್​ ಖಾನ್​, 33 ವರ್ಷದ ಶುರಾ ಖಾನ್​ರನ್ನು ಡಿಸೆಂಬರ್​ನಲ್ಲಿ ವಿವಾಹವಾದರು. ಶುರಾ ಮೇಕಪ್​ ಕಲಾವಿದೆ ಮತ್ತು ಈಗ ಗರ್ಭಿಣಿ ಎಂಬ ವದಂತಿ ಹಬ್ಬಿದೆ. ಅರ್ಬಾಜ್​ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದ ವಿಡಿಯೋ ವೈರಲ್​ ಆಗಿದೆ. ಶುರಾರಿಗೆ ಹಿಂದಿನ ವಿವಾಹದಿಂದ ಮಗಳಿದ್ದಾಳೆ. ವಯಸ್ಸಿನ ಅಂತರದಿಂದ ಈ ಜೋಡಿ ಟ್ರೋಲ್​ ಆಗುತ್ತಿದೆ.

 ನಟ ಸಲ್ಮಾನ್​ ಖಾನ್​ ಸಹೋದರ, ನಟಿ ಮಲೈಕಾ ಶರಾವತ್​ ಮಾಜಿ ಪತಿ, ರೂಪದರ್ಶಿ ಜಾರ್ಜಿಯಾ ಆಂಡ್ರಿಯಾನಿ ಮಾಜಿ ಲಿವ್​ ಇನ್​ ಪಾರ್ಟನರ್​ ಅರ್ಬಾಜ್​ ಖಾನ್​ ಶುರಾ ಖಾನ್​ ಎನ್ನುವವರನ್ನು 2023ರ ಡಿಸೆಂಬರ್​ನಲ್ಲಿ ಮದುವೆಯಾಗಿದ್ದು, ಲೈಫ್​ ಎಂಜಾಯ್​ ಮಾಡುತ್ತಿದ್ದಾರೆ. 56ನೇ ವಯಸ್ಸಿನಲ್ಲಿ ತಮಗಿಂತ 22 ವರ್ಷ ಚಿಕ್ಕವಳಾದ 33 ವರ್ಷದ ಶುರಾ ಖಾನ್​ ಅವರ ಕೈಹಿಡಿದಿದ್ದಾರೆ. ಶುರಾ ಖಾನ್​ ಮೇಕಪ್ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದಾರೆ. ಶುರಾ ಖಾನ್ ಮತ್ತು ಅರ್ಬಾಜ್​ ಖಾನ್​ ಅವರು ಪಾಟ್ನಾ ಶುಕ್ಲಾ ಸೆಟ್‌ನಲ್ಲಿ ಭೇಟಿಯಾದರು. ಅಲ್ಲಿಂದ ಇವರ ನಡುವೆ ಪ್ರೀತಿ ಅರಳಿದೆ ಎನ್ನಲಾಗಿದೆ. ಶುರಾ ಖಾನ್​ ಅವರು, ರವೀನಾ ಟಂಡನ್ ಮತ್ತು ಅವರ ಮಗಳು ರಾಶಾ ಥದಾನಿ ಅವರ ಮೇಕಪ್ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾರೆ. 

ಇದೀಗ ಹೊಸ ವಿಷ್ಯವೊಂದು ರಿವೀಲ್​ ಆಗಿದೆ. ಅದೇನೆಂದರೆ, ಶುರಾ ಖಾನ್​ ಈಗ ಗರ್ಭಿಣಿ ಎನ್ನುವ ಸುದ್ದಿ. ಶುರಾ ಖಾನ್ ಗರ್ಭಿಣಿಯಾಗಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪತ್ನಿಯನ್ನು ಅರ್ಬಾಜ್​ ಖಾನ್​ ಹೆರಿಗೆ ಚಿಕಿತ್ಸಾಲಯಕ್ಕೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದೆ. ಇದರ ವಿಡಿಯೋ ಒಂದು ವೈರಲ್​ ಆಗಿತ್ತು. ಅರ್ಬಾಜ್​ ಖಾನ್​ ಮತ್ತು ಶುರಾ ಹೋಗುವ ಸಂದರ್ಭದಲ್ಲಿ ಪಾಪರಾಜಿಗಳು ಕ್ಯಾಮೆರಾ ಹಿಡಿದು ನಿಂತಾಗ, ಕೋಪಗೊಂಡ ಅರ್ಬಾಜ್​, ಪತ್ನಿಯನ್ನು ಪಕ್ಕಕ್ಕೆ ಸರಿಸಿ ಆಕೆ ಕಾಣದಂತೆ ತಡೆದಿದ್ದಾರೆ. ಈ ಸಂದರ್ಭದಲ್ಲಿ ಶುರಾ ಖಾನ್​ ಗರ್ಭಿಣಿ ಇದ್ದಿರಬಹುದು ಎನ್ನುವ ಗಾಳಿಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಅಥವಾ ಹೇಳಿಕೆ ಬಂದಿಲ್ಲ. 

ಅರ್ಬಾಜ್​ ಖಾನ್​ ಹಾಲಿ ಪತ್ನಿ ಡ್ರೆಸ್​ ಮೇಲೆ ನೆಟ್ಟಿಗರ ಕಣ್ಣು! ಮಾಜಿ ಪತ್ನಿ ಮಲೈಕಾಗೆ ಪೈಪೋಟಿನಾ ಕೇಳೋದಾ?

ಶುರಾ ಖಾನ್ ಅವರಿಗೆ ಈಗಾಗಲೇ ಹಿಂದಿನ ಮದುವೆಯಿಂದ 8 ವರ್ಷದ ಮಗಳಿದ್ದಾಳೆ. ಅಂದಹಾಗೆ, ಅರ್ಬಾಜ್​ ಖಾನ್​ ಅವರ ಮೊದಲ ಪತ್ನಿ ಮಲೈಕಾ ಅರೋರಾ ಅವರಿಂದ ಹುಟ್ಟಿದ ಮಗ ಅರ್ಹಾನ್​ ಖಾನ್​ಗೂ ಅರ್ಬಾಜ್​ ಈಗಿನ ಪತ್ನಿ ಶುರಾ ಖಾನ್​ಗೂ ಹನ್ನೆರಡು ವರ್ಷ ವಯಸ್ಸಿನ ಅಂತರವಿದೆ. ಹಾಗೆ ನೋಡಿದ್ರೆ ಸಂಬಂಧದಲ್ಲಿ ಇವರಿಬ್ಬರೂ ಅಮ್ಮ-ಮಗ ಆಗ್ಬೇಕು. ಅಮ್ಮ-ಮಗನಿಗೆ 12 ವರ್ಷ ಡಿಫರೆನ್ಸ್​ ಎಂದು ತಮಾಷೆಗಳ ಸುರಿಮಳೆಯೇ ಆಗುತ್ತಿದೆ. ದುಡ್ಡಿದ್ದರೆ ಎಲ್ಲವೂ ಸಾಧ್ಯ ಎಂದು ಹಲವರು ಹೇಳಿದರೆ, ಬಾಲಿವುಡ್​ ಮಾತ್ರವಲ್ಲ ಇಲ್ಲಿ ಕೆಲವು ಕಡೆಗಳಲ್ಲಿ ಇಂಥ ದೃಶ್ಯಗಳು ಸಾಮಾನ್ಯವಾಗಿವೆ. ಅಜ್ಜಂದಿರ ಅಪ್ರಾಪ್ತೆಯರನ್ನು ಮದುವೆಯಾಗುವುದು ನಡೆದೇ ಇದೆ. ಅಂಥ ಸಂದರ್ಭದಲ್ಲಿ ಇದೇನೂ ದೊಡ್ಡ ವಿಷಯವಲ್ಲ ಎನ್ನುತ್ತಿದ್ದಾರೆ.

ಅಷ್ಟಕ್ಕೂ, ಇಂದಿಗೂ ವಯಸ್ಸಿನ ಅಂತರದ ಕಾರಣದಿಂದ ಟ್ರೋಲ್​ ಎದುರಿಸುತ್ತಲೇ ಇದೆ ಈ ಜೋಡಿ. ಇವರ ವಯಸ್ಸಿನ ಅಂತರ ನೋಡಿ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಜೋಡಿ ಸಕತ್​ ಟ್ರೋಲ್​​ ಕೂಡ ಆಗುತ್ತಿದೆ. ಮದುವೆ ಮನೆಗೆ ಬರುವಾಗಿನಿಂದಲೂ ಹಲವು ವಿಡಿಯೋಗಳಲ್ಲಿ ಶುರಾ ಖಾನ್​ ಪಾಪರಾಜಿಗಳ ಕ್ಯಾಮೆರಾ ಎದುರು ನೇರವಾಗಿ ಮುಖಕೊಡದೇ ಮುಖ ಮುಚ್ಚಿಕೊಳ್ಳುತ್ತಲೇ ಇರುತ್ತಾರೆ. ಟ್ರೋಲ್​ ಆಗುವುದನ್ನು ತಪ್ಪಿಸಲು ಅವರು ಹಾಗೆ ಮಾಡುತ್ತಾರೆ ಎನ್ನುವ ಮಾತಿದೆ. ಮದುವೆಯಾದ ಮೇಲೆ ಹನಿಮೂನ್​ಗೆ ಹೋದಾಗ ಏರ್​ಪೋರ್ಟ್​ನಲ್ಲಿ ಜೋಡಿ ಕಾಣಿಸಿಕೊಂಡಾಗಲೂ ಶುರಾ ಅವರು, ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಬೀಳದಂತೆ ಮುಖ ಮುಚ್ಚಿಕೊಂಡಿದ್ದರು. ಮುಖ ಕಾಣಿಸದಂತೆ ಮಾಡಲು ಕ್ಯಾಪ್​ ಧರಿಸಿ ಬಂದಿದ್ದರು. ಅವರು ಕ್ಯಾಮೆರಾಕ್ಕೆ ಕಾಣದಂತೆ ಅರ್ಬಾಜ್​ ರಕ್ಷಣೆ ಮಾಡುತ್ತಲೇ ಇರುತ್ತಾರೆ. 

ಡ್ರೆಸ್​ ಸರಿಮಾಡಿಕೊಳ್ಳೊಷ್ಟ್ರಲ್ಲಿ ಆಗಬಾರದ್ದು ಆಗೋಯ್ತು! ಎಲ್ಲಾ ಆದ್ಮೇಲೆ ಇನ್ನೇನು ಮಾಡೋದು ಕೇಳ್ತಿದ್ದಾರೆ ಟ್ರೋಲಿಗರು