Asianet Suvarna News Asianet Suvarna News

ಆಸ್ಕರ್ ಗೆದ್ದ ಬಳಿಕ 'ಜೈ ಹೋ..' ಗಾಯಕರನ್ನು ಮರೆತಿದ್ದೆ; AR ರೆಹಮಾನ್‌

ಎ ಆರ್ ರೆಹಮಾನ್ ಸ್ಲಮ್‌ಡಾಗ್ ಮಿಲಿಯನೇರ್‌ ಚಿತ್ರಕ್ಕೆ ಆಸ್ಕರ್ ಗೆದ್ದು ಬೀಗುವ ಮೂಲಕ ವಿಶ್ವಮಟ್ಟದಲ್ಲಿ ಸದ್ದು ಮಾಡಿದ್ದರು. ಅಂದು ಆಸ್ಕರ್ ವೇದಿಕೆಯಲ್ಲಿ ಪ್ರತಿಷ್ಠಿತ  ಆಸ್ಕರ್ ಟ್ರೋಫಿ  ಎತ್ತಿಹಿಡಿದ ಬಳಿಕ ಸಹ ಗಾಯಕರಿಗೆ ಧನ್ಯವಾದ ಹೇಳುವುದನ್ನೆ ಮರೆತಿತ್ತಿದ್ದರಂತೆ. ಈ ಬಗ್ಗೆ ರೆಹಮಾನ್ ಈಗ ಬಹಿರಂಗ ಪಡಿಸಿದ್ದಾರೆ. 
 

AR Rahman says he forgot to thank Jai Ho singers on Oscars stage sgk
Author
Bengaluru, First Published Jun 22, 2022, 1:33 PM IST

ಭಾರತದ ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್(AR Rehman) ಯಾರಿಗೆ ತಾನೆ ಗೊತ್ತಿಲ್ಲ. ಎ ಆರ್ ರೆಹಮಾನ್ ಹಾಡು ಕೇಳಲು ಲಕ್ಷಾಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಅಷ್ಟು ದೊಡ್ಡ ಮಟ್ಟದ ಅಭಿಮಾನಿಗಳನ್ನು ಹೊಂದಿದ್ದಾರೆ. ಎ ಆರ್ ರೆಹಮಾನ್ ಸ್ಲಮ್‌ಡಾಗ್ ಮಿಲಿಯನೇರ್‌ ಚಿತ್ರಕ್ಕೆ ಆಸ್ಕರ್ ಗೆದ್ದು ಬೀಗುವ ಮೂಲಕ ವಿಶ್ವಮಟ್ಟದಲ್ಲಿ ಸದ್ದು ಮಾಡಿದ್ದರು. ಅಂದು ಆಸ್ಕರ್ ವೇದಿಕೆಯಲ್ಲಿ ಪ್ರತಿಷ್ಠಿತ  ಆಸ್ಕರ್ ಟ್ರೋಫಿ  ಎತ್ತಿಹಿಡಿದ ಬಳಿಕ ಸಹ ಗಾಯಕರಿಗೆ ಧನ್ಯವಾದ ಹೇಳುವುದನ್ನೆ ಮರೆತಿತ್ತಿದ್ದರಂತೆ. ಈ ಬಗ್ಗೆ ರೆಹಮಾನ್ ಈಗ ಬಹಿರಂಗ ಪಡಿಸಿದ್ದಾರೆ. 

ವಿಶ್ವ ಸಂಗೀತ ದಿನದ (world music day) ಅಂಗವಾಗಿ ಎ ಆರ್ ರೆಹಮಾನ್  ಅವರು ವಿಶೇಷ ವಿಡಿಯೋವನ್ನು ಹಂಚಿಕೊಂಡಿದ್ದರು. ವಿಡಿಯೋದಲ್ಲಿ ರೆಹಮಾನ್ ಈ ವಿಚಾರವನ್ನು ಬಹಿರಂಗ ಪಡಿಸಿದರು. 'ಆಸ್ಕರ್ ವೇದಿಕೆಯಲ್ಲಿ ಪ್ರಶಸ್ತಿ ಪಡೆದಾಗ, ಜೈ ಹೋ ಹಾಡಿನ ಮೂಲ ಗಾಯಕರಿಗೆ ಧನ್ಯವಾದ ಹೇಳುವುದನ್ನೇ ಮರೆತಿದ್ದೆ ಮತ್ತು ಸುಖ್ವಿಂದರ್ ಅವರ ಧ್ವನಿ ಆ ಹಾಡನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ' ಎಂದು ಹೇಳಿದರು.

ಎ ಆರ್ ರೆಹಮಾನ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಧನ್ಯವಾದ ಹೇಳುವುದರ ಮೂಲಕ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಅದನ್ನು ಖ್ಯಾತ ಗಾಯಕ ಸುಖ್ವಿಂದರ್ ಸಿಂಗ್ ಅವರಿಗೆ ಅರ್ಪಿಸಿದ್ದಾರೆ. ಸುಮಾರು 25 ವರ್ಷಗಳಿಂದ ಅವರಿಬ್ಬರು ಜೊತೆಯಾಗಿ ಹಂಚಿಕೊಂಡಿದ್ದ ಸವಿನೆನಪುಗಳನ್ನು ನೆನಪಿಸಿಕೊಂಡ ರೆಹಮಾನ್, ಅವರು ಮೊದಲು ಬುಲ್ಲೆ ಷಾ ಹಾಡಿಗೆ ತಕ್ಷಕ್ ಚಿತ್ರಕ್ಕಾಗಿ ಸಹಕರಿಸಿದರು, ನಂತರ ಅದನ್ನು ದಿಲ್ ಸೆ ಚಿತ್ರಕ್ಕಾಗಿ ಚೈಯಾ ಚೈಯಾ ಎಂದು ಹೆಸರು ಬದಲಾಯಿಸಲಾಯಿತು ಎಂದರು.

ಎ.ಆರ್ ರೆಹಮಾನ್ ಪುತ್ರಿಯ ಮದುವೆ ಆರತಕ್ಷತೆ ಸಂಭ್ರಮದಲ್ಲಿ ಸಿನಿ ಗಣ್ಯರು; ಯಾರೆಲ್ಲ ಭಾಗಿಯಾಗಿದ್ದರು?

ರೆಹಮಾನ್ ಅವರು ತಮ್ಮ ಅತ್ಯಂತ ಜನಪ್ರಿಯ ಹಾಡುಗಳಲ್ಲಿ ಒಂದಾದ ಸ್ಲಮ್‌ಡಾಗ್ ಮಿಲಿಯನೇರ್‌ನ ಜೈ ಹೋ ಹಾಡಿಗೆ ಸುಖ್ವಿಂದರ್ ಅವರ ಅಪಾರ ಕೊಡುಗೆಯನ್ನು ನೆನಪಿಸಿಕೊಂಡರು, ಆದರೆ ಅವರು ಆಸ್ಕರ್ ಟ್ರೋಫಿಯನ್ನು ಸ್ವೀಕರಿಸಿದಾಗ ಗಾಯಕರಾದ ಸುಖ್ವಿಂದರ್ ಸಿಂಗ್, ತನ್ವಿ ಶಾ, ಮಹಾಲಕ್ಷ್ಮಿ ಅಯ್ಯರ್ ಮತ್ತು ವಿಜಯ್ ಪ್ರಕಾಶ್ ಅವರೆಲ್ಲರಿಗೂ ಧನ್ಯವಾದ ಹೇಳಲು ಮರೆತಿದ್ದರಂತೆ ಅದಕ್ಕಾಗಿ ವಿಶೇಷ ದಿನವಾದ ವಿಶ್ವ ಸಂಗೀತ ದಿನಾಚರಣೆಯಂದು ಖ್ಯಾತ ಗಾಯಕರಿಗೆ ವಿಡಿಯೋ ಮೂಲಕ ದನ್ಯವಾದ ಹೇಳಿದ್ದಾರೆ.

'ನಾನು ಆಸ್ಕರ್‌ನಲ್ಲಿ ಎಲ್ಲರಿಗೂ ಧನ್ಯವಾದ ಹೇಳುವಾಗ ಗಾಬರಿಯಾಗಿದ್ದೆ, ಅದ್ಯಾಕೊ ಗೊತ್ತಿಲ್ಲಾ ನನ್ನ ಮನಸ್ಸಿನಲ್ಲಿರುವ ಎಲ್ಲಾ ಗೊಂದಲಗಳಿಂದಾಗಿ ನಾನು ಗಾಯಕರ ಹೆಸರನ್ನು ಬಿಟ್ಟುಬಿಟ್ಟೆ. ಮತ್ತು ಮುಖ್ಯ ಭಾಗವನ್ನು ಹಾಡಿದ ಸುಖ್ವಿಂದರ್ ಸಿಂಗ್ ಅವರಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ಏಕೆಂದರೆ ಸುಖ್ವಿಂದರ್ ಅವರ ವಿಶಿಷ್ಟ ಧ್ವನಿ ಹಾಡನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಿತು ಮತ್ತು ಇನ್ನುಳಿದ ಗಾಯಕರ ತಾಳ್ಮೆ, ಪ್ರೀತಿ ಮತ್ತು ಅವರ ಸಂಗೀತಕ್ಕೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ' ಎಂದು ಅವರು ಹೇಳಿದರು.

ರೆಹಮಾನ್ ಅವರು, 'ಕೆಲವು ಕಲಾವಿದರಲ್ಲಿ ಅಲೆಮಾರಿತನ ಮತ್ತು ಒಂಟಿತನದ ಭಾವನೆ ಇರುತ್ತದೆ. ಯಾರೇ ನಿರ್ದೇಶಕನಾದರು, ಕೆಲವು ಕಲಾವಿದರಿಗೆ ಗೆರೆ ಅಥವಾ ಗಡಿಯನ್ನು ಹಾಕಲು ಸಾಧ್ಯವಿಲ್ಲ, ಮತ್ತು ಸುಖ್ವಿಂದರ್ ಅಂತಹ ಕಲಾವಿದರಲ್ಲಿ ಒಬ್ಬರು. ಇದು ಯಾವಾಗಲೂ ಮಿತಿಯಿಲ್ಲದ ಶಕ್ತಿಯಿಂದ ಎಲ್ಲಾ ಕೇಳುಗರ ಮನವನ್ನು ಹುರಿದುಂಬಿಸುತ್ತೆ ಎಂದರೆ ಅದು ತಪ್ಪಾಗಲಿಕ್ಕಿಲ್ಲ ಎಂದಿದ್ದಾರೆ.

ಭಾರತದ ಹೆಮ್ಮೆಯ ಸಂಗೀತ ನಿರ್ದೇಶಕ AR ರೆಹಮಾನ್ ಅವರ ಜನಪ್ರಿಯ ಜೈ ಹೋ ಹಾಡಿಗಾಗಿ ಆಸ್ಕರ್ ಮತ್ತು ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.

Follow Us:
Download App:
  • android
  • ios