ಭಾರೀ ಚರ್ಚೆಗೊಳಗಾಗಿದ್ದ, ಅತ್ಯಂತ ಹಳೆಯ ವಿವಾದ ಅಯೋಧ್ಯಾ ರಾಮಮಂದಿರ ತಾರ್ಕಿಕ ಅಂತ್ಯ ಕಂಡಿದೆ. ಅಯೋಧ್ಯೆ ಕಡೆಗೂ ರಾಮನ ಪಾಲಾಗಿದೆ.  ರಾಮಮಂದಿರ ವಿಚಾರವೊಂದನ್ನು ಇಟ್ಟುಕೊಂಡು ಸಿನಿಮಾವೊಂದು ಬರಲಿದೆ ಎನ್ನಲಾಗಿದೆ. 

'ತಲೈವಿ' ಲುಕ್‌ ರಿವೀಲ್; ಕಂಗನಾ ವಿರುದ್ಧ ನೆಟ್ಟಿಗರು ಆಕ್ರೋಶ!

ಎಂದಿಗಿಂತ ಸ್ವಲ್ಪ ವಿಭಿನ್ನ ರೀತಿಯಲ್ಲಿ ಆಲೋಚಿಸುವ, ಐತಿಹಾಸಿಕ ಹಿಟ್ ಚಿತ್ರಗಳನ್ನು ನೀಡುವ ಕಂಗನಾ ರಾಣಾವತ್ 'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ನಿರ್ದೇಶಿಸಿ ಸಕ್ಸಸ್ ಕಂಡಿದ್ದರು. ಈಗ ರಾಮಮಂದಿರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ರಾಮಜನ್ಮಭೂಮಿ- ಬಾಬ್ರಿ ಮಸೀದಿ ವಿವಾದ ಕೇಸ್ ಇಟ್ಟುಕೊಂಡು ' ಅಪರಾಜಿತ ಅಯೋಧ್ಯಾ' ಎನ್ನುವ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 

ನವೆಂಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

 

ಕಳೆದ ಒಂದು ಶತಕಗಳಿಂದ ರಾಮಮಂದಿರ ಬೂದಿ ಮುಚ್ಚಿದ ಕೆಂಡದಂತಿತ್ತು. ರಾಮನ ಜನ್ಮ, ತ್ಯಾಗಕ್ಕೆ ಸಾಕ್ಷಿಯಾಗಿದ್ದ ಈ ಭೂಮಿ ಬಗ್ಗೆ ಕೇಳುತ್ತಲೇ ಬೆಳೆದವು. ಇದೀಗ ರಾಮಮಂದಿರ ತಾರ್ಕಿಕ ಅಂತ್ಯ ಕಂಡಿದೆ' ಎಂದು ಕಂಗನಾ ಹೇಳಿದ್ದಾರೆ. 

ಪ್ರಪೋಸ್ ರಿಜೆಕ್ಟ್; ಕಂಗನಾ ಅಕ್ಕ ಮೇಲೆ ಆ್ಯಸಿಡ್ ಆಟ್ಯಾಕ್!

ಕೆವಿ ವಿಜಯೇಂದ್ರ ಪ್ರಸಾದ್ ಚಿತ್ರಕಥೆ ಬರೆಯಲಿದ್ದಾರೆ. ಕಂಗನಾ ಈ ಚಿತ್ರದಲ್ಲಿ ನಟಿಸುತ್ತಾರಾ, ಇಲ್ವಾ ಎಂಬುದು ಇನ್ನೂ ಪಕ್ಕಾ ಆಗಿಲ್ಲ.