ಬಾಲಿವುಡ್ ಮೋಸ್ಟ್ ಡಿಮ್ಯಾಂಡಬಲ್ ನಟಿ ಕಂಗನಾ ಪರ್ಸನಲ್ ಅಕೌಂಟ್ ಗಳನ್ನು ಅವರ ಅಕ್ಕ ರಂಗೋಲಿ ನೋಡಿಕೊಳ್ಳುತ್ತಾರೆ. ಕಂಗನಾಳ ಪರ್ಸನಲ್ ಸೆಕ್ರೇಟರಿ ಎಂದರೆ ತಪ್ಪಾಗಲಿಕ್ಕಿಲ್ಲ. ಇಬ್ಬರ ನಡುವೆ ಅಷ್ಟೊಂದು ಅನ್ಯೋನ್ಯತೆ ಇದೆ. ಕಂಗನಾ ಹಿಂದಿರುವ ಶಕ್ತಿ ರಂಗೋಲಿಯ ಕಾಲೇಜು ಕಹಾನಿ ಮನಮಿಡಿಯುವಂತಿದೆ.

ಕಂಗನಾಳಷ್ಟೇ ಸುಂದರಿ ಆಕೆಯ ಅಕ್ಕ ರಂಗೋಲಿ. ಕಾಲೇಜು ದಿನಗಳಲ್ಲಿ ಆಕೆಯ ಹಿಂದ ಬಿದ್ದ ಹುಡುಗರು ಒಬ್ರಾ ಇಬ್ಬರಾ? ರಾಶಿ ರಾಶಿ ಪ್ರಪೋಸಲ್ ಗಳು ಬರುತ್ತಿದ್ದವು. ಅದರಲ್ಲಿ ಒಬ್ಬನ ಪ್ರಪೊಸಲ್‌ ರಿಜೆಕ್ಟ್‌ ಮಾಡಿದ ಕಾರಣಕ್ಕೆ ರಂಗೋಲಿ ಮುಖಕ್ಕೆ 1 ಲೀಟರ್ ಆ್ಯಸಿಡ್‌ ಎರಚಿದ ಘಟನೆಯನ್ನು ಫೋಟೋದೊಂದಿಗೆ ಟ್ಟಿಟರ್‌ನಲ್ಲಿ ರಂಗೊಲಿ ಶೇರ್ ಮಾಡಿಕೊಂಡಿದ್ದಾರೆ.

 

 

ಕಾಲೇಜು ದಿನಗಳ ಸುಂದರ ಫೋಟೋವೊಂದನ್ನು ಶೇರ್ ಮಾಡಿದ ರಂಗೋಲಿ ಅದರೊಂದಿಗೆ ಯಾರೂ ಊಹಿಸಿರದ ಘಟನೆಯೊಂದನ್ನು ಹೇಳಿದ್ದಾರೆ. 'ಈ ಫೋಟೋ ತೆಗೆದ ಕೂಡಲೇ ಪ್ರಪೊಸಲ್‌ ರಿಜೆಕ್ಟ್‌ ಮಾಡಿದ ಹುಡುಗನೊಬ್ಬ ನನ್ನ ಮುಖದ ಮೇಲೆ 1 ಲೀಟರ್ ಆ್ಯಸಿಡ್ ಎರಚಿದ. ಇದರಿಂದ 54 ಸರ್ಜರಿಗಳನ್ನು ಮಾಡಿಕೊಳ್ಳುವ ಪರಿಸ್ಥಿತಿ ಎದುರಾಯಿತು. ಅಷ್ಟೇ ಅಲ್ಲದೇ ನನ್ನ ತಂಗಿ ಕಂಗನಾ ಮೇಲೆಯೂ ದೌರ್ಜನ್ಯ ಮಾಡುತ್ತಿದ್ದರು. ಆಕೆ ಸಾಯುವಷ್ಟರ ಮಟ್ಟಿಗೆ ಹೊಡೆಯುತ್ತಿದ್ದರು. ಈ ಘಟನೆ ನನ್ನ ಮನಸ್ಸನ್ನು ಬಹಳ ಘಾಸಿಗೊಳಿಸಿತು.

 

ನಮ್ಮ ದೇಶದಲ್ಲಿ ಯಾಕೆ ಈ ಪರಿಸ್ಥಿತಿ ಎದುರಾಗಿದೆ? ನಮ್ಮ ತಂದೆ ತಾಯಿ ಸುಂದರವಾದ, ಬುದ್ಧಿವಂತ, ಧೈರ್ಯವಂತ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಕ್ಕಾ? ಚಿಕ್ಕ ವಯಸ್ಸಿನ ಅದೆಷ್ಟೋ ಹೆಣ್ಣುಮಕ್ಕಳು ಇಂತಹ ಕಷ್ಟಗಳನ್ನು ಎದುರಿಸಬೇಕಾಗಿದೆ. ನಾವೆಲ್ಲಾ ಒಟ್ಟಾಗಿ ಇದನ್ನು ದೂರ ಮಾಡಬೇಕಿದೆ. ನಮ್ಮ ಮಕ್ಕಳನ್ನು ಕಾಪಾಡಬೇಕಿದೆ' ಎಂದು ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ 53 ಸರ್ಜರಿ ಆದರೂ ರಂಗೋಲಿಯ ಕಿವಿಯನ್ನು ಅದರ ಮೊದಲ ಆಕಾರಕ್ಕೆ ತರಲು ಸಾದ್ಯವಾಗಿಲ್ಲ. ಕಣ್ಣಿನ ರೆಟಿನಾವನ್ನು ಟ್ರಾನ್ಸ್ ಪ್ಲಾಂಟ್ ಮಾಡಿದ್ದಾರೆ. ಹಾಗೂ ಸ್ತನದ ಭಾಗ ಬಹುತೇಕ ಘಾಸಿಕೊಂಡಿದ್ದು ಮಗನಿಗೆ ಹಾಲುಣಿಸುವಾಗ ಕಷ್ಟವಾಗುತ್ತಿತ್ತು. ಈಗಲೂ ಆಕೆಗೆ ಕತ್ತು ತಿರುಗಿಸಲು ಆಗುವುದಿಲ್ಲ. ಅದರಿಂದ ಆಗುವ ನೋವಿಗೆ ಈಗಲೂ ಚರ್ಮ ತುರಿಕೆ ಉಂಟಾಗುತ್ತದೆ. ಆ ನೋವು ಸಾವಿಗೆ ಸಮ ಎಂದು ಟ್ಟೀಟ್ ಮಾಡಿದ್ದಾರೆ.

‘ಸೆಕ್ಸ್ ಬೇಕು ಅನ್ನಿಸಿದರೆ ತಡಿಬೇಡಿ, ಕ್ರಿಯೆಗೆ ಮಕ್ಕಳನ್ನು ಪಾಲಕರೇ ಪ್ರೇರೇಪಿಸಬೇಕು’

ರಂಗೋಲಿಯ ಹಿಂದಿನ ಈ ಕಥೆಯನ್ನು ಕೇಳಿದಾಗ ಮನಮಿಡಿಯದೇ ಇರುವುದಿಲ್ಲ. ಪ್ರತಿಯೊಬ್ಬರ ಜೀವನದಲ್ಲೂ ಇಂತಹ ಒಂದು ಕಥೆ ಇದ್ದೇ ಇರುತ್ತದೆ.