Asianet Suvarna News Asianet Suvarna News

ಪತಿ ವಿರಾಟ್​​ ಕೊಹ್ಲಿಗೆ ಚಿಯರ್​ ಮಾಡಲು ಸ್ಟೇಡಿಯಂಗೆ ಬಂದ ಅನುಷ್ಕಾ ಶರ್ಮಾ ಡ್ರೆಸ್​ ಇಷ್ಟು ದುಬಾರಿನಾ?

ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್​ ಪಂದ್ಯದಲ್ಲಿ ಪತಿ ವಿರಾಟ್​​ ಕೊಹ್ಲಿಗೆ ಚಿಯರ್​ ಮಾಡಲು  ಬಂದ ಅನುಷ್ಕಾ ಶರ್ಮಾ ಡ್ರೆಸ್​ ಇಷ್ಟು ದುಬಾರಿನಾ?
 

Anushka Sharmas blue and white printed dress at the World Cup final costs suc
Author
First Published Nov 21, 2023, 2:21 PM IST

 ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್​ ಪಂದ್ಯ ಮುಗಿದು ಎರಡು ದಿನಗಳೇ ಕಳೆದಿದ್ದು, ಭಾರತದ ಸೋಲಿನ ನೋವಿನಿಂದ ಹಲವರು ಇಂದಿಗೂ ಹೊರಬಂದಿಲ್ಲ. ಪಂದ್ಯದ ಸೋಲಿಗೆ ಹಲವು ರೀತಿಯಲ್ಲಿ ವಿಶ್ಲೇಷಣೆ ನಡೆಯುತ್ತಿರುವ ನಡುವೆಯೇ ವಿರಾಟ್​ ಕೊಹ್ಲಿ ಅವರ ಪತ್ನಿ ನಟಿ, ಅನುಷ್ಕಾ ಶರ್ಮಾ ಅವರ ಡ್ರೆಸ್​ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಕತ್​ ಸುದ್ದಿಯಾಗುತ್ತಿದೆ. ಫೈನಲ್ಸ್​ನಲ್ಲಿ ವಿರಾಟ್‌ ಕೊಹ್ಲಿ ಅರ್ಧಶತಕ ಸಿಡಿಸಿದ ಬಳಿಕ ಅವರ ಬಗ್ಗೆ ಹೆಚ್ಚು ನಿರೀಕ್ಷೆ ಹುಟ್ಟುಹಾಕಿತ್ತು. ಇಷ್ಟಾಗುತ್ತಿದ್ದಂತೆಯೇ ಕ್ಯಾಮೆರಾ ಕಣ್ಣು ಅನುಷ್ಕಾ ಶರ್ಮಾ ಅವರ ಮೇಲೆ ಸಹಜವಾಗಿ ಬಿದ್ದಿತ್ತು. ಆ ಸಮಯದಲ್ಲಿ ಎಲ್ಲರ ಕಣ್ಣು ಅವರ ಡ್ರೆಸ್​ ಮೇಲೆ ಬಿದ್ದದ್ದಂತೂ ಸುಳ್ಳಲ್ಲ.  ನೀಲಿ ಮತ್ತು ಬಿಳಿ ಬಣ್ಣದ ಡ್ರೆಸ್​​ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು. ಕ್ರಿಕೆಟ್​ ಪ್ರೇಮಿಗಳು ಅತ್ತ ಕ್ರಿಕೆಟ್​ನತ್ತ ದೃಷ್ಟಿ ಹರಿಸಿದ್ದರೆ, ಒಂದಿಷ್ಟು ಮಂದಿ ನಟಿಯ ಬಟ್ಟೆಯ ಬಗ್ಗೆಯೂ ಚರ್ಚೆ ಮಾಡುತ್ತಿದ್ದರು. ಸಿಂಪಲ್​ ಆಗಿ ಕಾಣಿಸಿಕೊಂಡಿದ್ದರೂ ಈ ಬಟ್ಟೆಯ ರೇಟ್​ ಎಷ್ಟು ಇರಬಹುದು ಎಂದು ಭಾರಿ ಚರ್ಚೆ ಮಾಡುತ್ತಿದ್ದರು.

ಹೀಗೆ ಚರ್ಚೆ ಮಾಡಲು ಬಹುದೊಡ್ಡ ಕಾರಣವಿದೆ. ಅದೇನೆಂದರೆ, ಫೈನಲ್​ಗೂ ಮುಂಚೆ ನಡೆದ ಸೆಮಿ ಫೈನಲ್​ ಮ್ಯಾಚ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧ ಭಾರತ ಕಣಕ್ಕೆ ಇಳಿದಿತ್ತು. ಆಗ ವಿರಾಟ್​ ಕೊಹ್ಲಿ ಅವರು 117 ರನ್​ ಗಳಿಸಿದ್ದರು. ಅತ್ತ ಅವರ ಭರ್ಜರಿ ಆಟದ ಬಗ್ಗೆ ಚರ್ಚೆಯಾಗುತ್ತಿದ್ದರೆ, ಇತ್ತ ಆಗಲೂ ಸ್ಟೇಡಿಯಂಗೆ ಬಂದಿದ್ದ ಅನುಷ್ಕಾ  ಶರ್ಮಾರ ಬಟ್ಟೆಯ ಚರ್ಚೆ ಆಗುತ್ತಿತ್ತು. ಕೊನೆಗೂ ಅವರ ತೊಟ್ಟ ಬಟ್ಟೆಯ ಬೆಲೆ ರಿವೀಲ್​ ಆಗಿ ಫ್ಯಾನ್ಸ್​ ಹುಬ್ಬೇರಿಸಿದ್ದರು. ಬಿಳಿ ಬೇಸ್ ಶರ್ಟ್ ಮೇಲೆ ಡಾರ್ಕ್ ಹಸಿರು ಬಣ್ಣದ ಹೂವಿನ ಪ್ರಿಂಟ್ ಇತ್ತು. ಈ ಫ್ಲೋರಲ್ ಪ್ರಿಂಟ್ ಗಾತ್ರದ ಶರ್ಟ್ ಬೆಲೆ 19,500 ರೂಪಾಯಿ ಬೆಲೆ ಎಂದು ಕಂಡುಹಿಡಿದಿದ್ದರು ಅಭಿಮಾನಿಗಳು. ನೋಡಲು ತುಂಬಾ ಸಿಂಪಲ್​ ಎಂದುಕೊಂಡಿದ್ದ ಈ ಡ್ರೆಸ್​ಗೆ ಇಷ್ಟೆಲ್ಲಾ ಬೆಲೆನಾ ಎಂದುಕೊಂಡಿದ್ದರು.

ವಿಶ್ವ ಕಪ್​ ಸೋಲಲು ಅಮಿತಾಭ್​ ಬಚ್ಚನ್​ ಕಾರಣವಂತೆ! ನಟನ ಕಾಲೆಳೆಯುತ್ತಿದ್ದಾರೆ ಫ್ಯಾನ್ಸ್​!

ಸೆಮಿ ಫೈನಲ್​ಗೇ ಇಷ್ಟು ದುಬಾರಿ ಬೆಲೆಯ ಡ್ರೆಸ್​ ಹಾಕಿರುವಾಗ ಫೈನಲ್​ಗೆ ಇನ್ನೂ ಬೆಲೆ ಬಾಳುವ ಡ್ರೆಸ್​ ಹಾಕಬಹುದು ಎಂದೇ ಅನುಷ್ಕಾ ಫ್ಯಾನ್ಸ್​ ಅಂದುಕೊಂಡಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಗಿದೆ. ನೀಲಿ ಮತ್ತು ಬಿಳಿ ಬಣ್ಣದ ಡ್ರೆಸ್​​ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದ ಅನುಷ್ಕಾ ಅವರು ಫೈನಲ್​ನಲ್ಲಿ ಹಾಕಿರುವ ಡ್ರೆಸ್​ ಬೆಲೆ 7,250. ಅನುಷ್ಕಾ ಧರಿಸಿರುವ ವಸ್ತ್ರವು ಸ್ವದೇಶಿ ಲೇಬಲ್ ನಿಕೋಬಾರ್‌ನಿಂದ ಬಂದಿದ್ದು ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ ಫ್ಯಾನ್ಸ್​. ಸೆಲೆಬ್ರಿಟಿಗಳು ದುಬಾರಿ ಬೆಲೆಯ ಬಟ್ಟೆ ಧರಿಸುವುದು ಹೊಸ ವಿಷಯವೇನಲ್ಲ ಎನ್ನುವುದು ಸತ್ಯವಾದರೂ ಅವರ ಫ್ಯಾನ್ಸ್​ ಬಿಡಲ್ಲ. ಸದಾ ಬಟ್ಟೆಯ ಮೇಲೇ ಅವರ ಕಣ್ಣು ನೆಟ್ಟಿರುತ್ತದೆ. ಸೆಮಿಫೈನಲ್​ಗಿಂತಲೂ ದುಬಾರಿ ಬಟ್ಟೆ ಹಾಕಿದ್ದರೆ ಫೈನಲ್​ ಪಂದ್ಯವನ್ನೂ ಭಾರತ ಗೆಲ್ಲುತ್ತಿತ್ತು ಎಂದು ಕೆಲವು ತರ್ಲೆಗಳು ಕಮೆಂಟ್​ನಲ್ಲಿ ಹೇಳುತ್ತಿದ್ದಾರೆ. 

ಅಂದಹಾಗೆ ಈ ಜೋಡಿ 2017ರ ಡಿಸೆಂಬರ್​ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಮದುವೆಯಾಗಿ ಈಗ ಐದನೇ ವರ್ಷದ ಸಂಭ್ರಮದಲ್ಲಿದೆ ಜೋಡಿ. ಅನುಷ್ಕಾ ಮತ್ತು ವಿರಾಟ್ ಲವ್ ಸ್ಟೋರಿ ತುಂಬಾ ಆಸಕ್ತಿದಾಯಕವಾಗಿದೆ. 2013 ರಲ್ಲಿ ಶಾಂಪೂ ಜಾಹೀರಾತಿನ ಸಂದರ್ಭದಲ್ಲಿ ಅನುಷ್ಕಾ ಮತ್ತು ವಿರಾಟ್ ಭೇಟಿಯಾದರು. ಮೊದಲು ಸ್ನೇಹ, ನಂತರ ಪ್ರೀತಿ ಮೊಳಗಿತು. ನಂತರ  ಅವರ ಸಂಬಂಧ ಮುರಿದು ಕೂಡ ಬಿತ್ತು. ಆದರೂ ಈ ಜೋಡಿ ಪ್ರೀತಿಯಲ್ಲಿ ಸಕ್ಸಸ್ ಆಗಿ ಮದುವೆಯಾಗಿದೆ.  ಈಗ ಇವರು ವಮಿಕಾಗೆ ಪಾಲಕರಾಗಿದ್ದಾರೆ.

ವಿಶ್ವ ಕಪ್​ ಫೈನಲ್​ನಲ್ಲಿ ಹೃದಯ ಗೆದ್ದ ಶಾರುಖ್​ ಖಾನ್​! ಆಶಾ ಭೋಸ್ಲೆ ಜತೆಗಿನ ವಿಡಿಯೋ ವೈರಲ್

Follow Us:
Download App:
  • android
  • ios