ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಜೀವನದ ಹಲವು ಫೋಟೋ, ವಿಡಿಯೋಗಳ ಮೂಲಕ ಫ್ಯಾನ್ಸ್‌ಗೆ ಸರ್ಪೈಸ್ ಕೊಡುತ್ತಲೇ ಇರುತ್ತಾರೆ. ದಂಪತಿ ಇತ್ತೀಚೆಗೆ ತಮ್ಮ ಮಗಳು ವಮಿಕಾ ಅವರನ್ನು ಸ್ವಾಗತಿಸಿದ್ದಾರೆ. ಹಾಗೆಯೇ ಮಗಳನ್ನು ಸಾಮಾಜಿಕ ಮಾಧ್ಯಮದಿಂದ ದೂರವಿರಿಸಲು ನಿರ್ಧರಿಸಿದ್ದಾರೆ.

ದಂಪತಿ ನಿಜವಾಗಿಯೂ ತಮ್ಮ ಜೀವನದ ವಿವರಗಳನ್ನು ಬಹಿರಂಗಪಡಿಸುವುದಿಲ್ಲ, ಆದರೆ ಅವರ ಅಭಿಮಾನಿಗಳನ್ನು ರಂಜಿಸಲು ಕೆಲವು ಪೋಸ್ಟ್‌ಗಳನ್ನು, ವಿಡಿಯೋ, ಫೋಟೋ, ಸ್ಟೋರಿಗಳನ್ನು ತಪ್ಪದೆ ಶೇರ್ ಮಾಡುತ್ತಿರುತ್ತಾರೆ.

ಅನುಷ್ಕಾ ಕನಸು: ಬೀದಿ ಪ್ರಾಣಿಗಳ ಆಶ್ರಯತಾಣ ಆರಂಭಿಸಿದ ಕೊಹ್ಲಿ 

ಅನುಷ್ಕಾ ಶರ್ಮಾ ಹಂಚಿಕೊಂಡ ಇತ್ತೀಚಿನ ವೀಡಿಯೊವೊಂದರಲ್ಲಿ ಫೋಟೋಶೂಟ್ ಸಮಯದಲ್ಲಿ ನಟಿ ವಿರಾಟ್ ಕೊಹ್ಲಿಯನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ. ನಟಿಯ ಮೊದಲ ಪ್ರಯತ್ನ ಯಶಸ್ವಿಯಾಗಿದೆ ಮತ್ತು ವಿರಾಟ್ ಕೊಹ್ಲಿ ಅಚ್ಚರಿಪಡೋದನ್ನು ಕಾಣಬಹುದು.

ವಿರಾಟ್ ಅವರ ಒತ್ತಾಯದ ಮೇರೆಗೆ ನಟಿ ಎರಡನೇ ಬಾರಿಗೆ ಪ್ರಯತ್ನಿಸುತ್ತಾರೆ. ನಂತರ ಅವಳಿಗೆ ಸಹಾಯ ಮಾಡದಂತೆ ಕೇಳಿಕೊಳ್ಳುತ್ತಾರೆ. ವೀಡಿಯೊ ಮುದ್ದಾಗಿದ್ದು ಫ್ಯಾನ್ಸ್ ಖುಷಿಯಾಗಿದ್ದಾರೆ.