Asianet Suvarna News Asianet Suvarna News

ಅನುಷ್ಕಾ ಮುಖದಲ್ಲಿ ಹೊಸ ಕಳೆ: ಆ್ಯಡ್ ಶೂಟ್‌ಗೆ ಬಂದ ನಟಿ ಕಂಡಿದ್ದು ಹೀಗೆ

ಇತ್ತೀಚೆಗಷ್ಟೇ ತಂದೆ ಕ್ಲಿಕ್ಕಿಸಿದ ಚಾಯ್ ಟೈಂ ಫೋಟೋ ಶೇರ್ ಮಾಡಿದ ನಟಿ ಅನುಷ್ಕಾ ಶರ್ಮಾ ಅವರ ಇನ್ನೊಂದು ಫೋಟೋ ವೈರಲ್ ಆಗಿದೆ. ಗ್ರೀನ್ ಗೌನ್‌ನಲ್ಲಿ ಸಖತ್ ಕ್ಯೂಟ್ ಕಂಡಿದ್ದಾರೆ ಕೊಹ್ಲಿ ಪತ್ನಿ

Anushka Sharma is pregnant and glowing as she steps out for an ad shoot dpl
Author
Bangalore, First Published Nov 22, 2020, 6:07 PM IST

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮುಂಬೈನಲ್ಲಿ ಶೂಟಿಂಗ್‌ಗಾಗಿ ಹೊರ ಬಂದಿದ್ದಾರೆ. ಇತ್ತೀಚೆಗಷ್ಟೇ ನಟಿ ದುಬೈನಿಂದ ಹಿಂದಿರುಗಿ ಬಂದಿದ್ದರು. ಐಪಿಎಲ್ 2020ರಲ್ಲಿ ಪತಿ ಕೊಹ್ಲಿಗೆ ಸಾಥ್‌ ಕೊಡೋಕೆ ನಟಿ ದುಬೈಗೆ ತೆರಳಿದ್ದರು.

ತಮ್ಮ ವ್ಯಾನಿಟಿ ವ್ಯಾನ್‌ನಿಂದ ನಟಿ ಹೊರ ಬರುತ್ತಿರುವ ಫೋಟೋ ಈಗ ವೈರಲ್ ಆಗಿದೆ. ನಟಿ ಮೇಕಪ್ ಆರ್ಟಿಸ್ಟ್, ಹೇರ್ ಸ್ಟೈಲಿಸ್ಟ್ ಎಲ್ಲರೂ ಕೊರೋನಾ ಮಾರ್ಗ ಸೂಚಿಗಳನ್ನು ಪಾಲಿಸಿದ್ದರು.

ತಾಯಿಯಾಗಲಿರೋ ಮಗಳ ಫೋಟೋ ಕ್ಲಿಕ್ ಮಾಡಿದ್ರು ಅನುಷ್ಕಾ ತಂದೆ, ಹೇಗಿದೆ ನೋಡಿ

ಟೀಲ್ ಗ್ರೀನ್ ಸಿಂಗಲ್ ಶೋಲ್ಡರ್ ಗೌನ್ ಧರಿಸಿದ್ದ ನಟಿ ಫ್ಲಾಟ್ ಚಪ್ಪಲಿ ಧರಿಸಿದ್ದರು. ಅವರೂ ಫೇಸ್‌ಮಾಸ್ಕ್‌ ಧರಿಸಿದ್ದರು. ಇತ್ತೀಚೆಗಷ್ಟೇ ನಟಿ ಸೆಟ್‌ನಿಂದ ದೂರವಿದ್ದು ಸೆಟ್‌ನ್ನು ಎಷ್ಟು ಮಿಸ್ ಮಾಡ್ಕೊಳ್ತಿದ್ರು ಎಂಬುದನ್ನು ತಿಳಿಸಿದ್ದರು.

ಆಗಸ್ಟ್‌ನಲ್ಲಿ ವಿರಾಟ್ ಮತ್ತು ಅನುಷ್ಕಾ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಹೇಳಿದ್ದರು. 2021ರ ಜನವರಿಯಲ್ಲಿ ಮಗು ಹುಟ್ಟುವ ನಿರೀಕ್ಷೆ ಇದೆ. ಅನುಷ್ಕಾ ಪ್ರೆಗ್ನೆನ್ಸಿ ಗ್ಲೋನಲ್ಲಿ ಮಿಂಚುತ್ತಿದ್ದಾರೆ.

Follow Us:
Download App:
  • android
  • ios