ವೈರಲ್ ಆದ ಬಚ್‌ಪನ್ ಕಾ ಪ್ಯಾರ್ ಹಾಡಿಗೆ ಅನುಷ್ಕಾ ಫಿದಾ ಮಲಗೋಕು ಆಗ್ತಿಲ್ವಂತೆ ಕೊಹ್ಲಿ ಪತ್ನಿಗೆ
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಬಚ್‌ಪನ್ ಕಾ ಪ್ಯಾರ್ ಹಾಡು ಸಖತ್ ವೈರಲ್ ಆಗಿದೆ. ಸಹ್‌ದೇವ್ ದಿರ್ಡೋ ಎಂಬ ಬಾಲಕ ಶಾಲೆಯಲ್ಲಿ ಹಾಡಿದ ಈ ಹಾಡು ಇನ್‌ಸ್ಟಾಗ್ರಾಂ ಸೇರಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಲೈಕ್ಸ್ ಗಿಟ್ಟಿಸಿಕೊಳ್ಳುತ್ತಿದೆ.
ಒಂದೇ ರಾತ್ರಿಯಲ್ಲಿ ಇಂಟರ್‌ನೆಟ್ ನೆನ್ಸೇಷನ್ ಆಗಿದೆ ಈ ಹಾಡು. ಉಳಿದೆಲ್ಲರಂತೆ ನಟಿ ಅನುಷ್ಕಾ ಶೆಟ್ಟಿ ಕೂಡಾ ಈ ಹಾಡಿಗೆ ಮರುಳಾಗಿದ್ದಾರೆ.
Happy Birthday Sanju: ಅಧೀರನ ಸ್ಪೆಷಲ್ ಪೋಸ್ಟರ್ ರಿಲೀಸ್

ರಾತ್ರಿ ಶಾಂತಿಯಿಂದ ಮಲಗೋಕೆ ಹೋದ್ರೂ ಈ ಹಾಡೇ ಕಾಡುತ್ತಿದೆ ಎಂದಿದ್ದಾರೆ ಕೊಹ್ಲಿ ಪತ್ನಿ. ಈ ಹಾಡು ಒರಿಜಿನಲ್ ಆಗಿ ಹಾಡಿದ್ದು ಕಮಲೇಶ್ ಬರೋಟ್. ಬಾಲಕ ಈ ಹಾಡನ್ನು ಶಾಲೆಯಲ್ಲಿ ಶಿಕ್ಷಕರು ಮತ್ತು ಸಹಪಾಠಿಗಳಿಗಾಗಿ ಹಾಡಿ ಫೇಮಸ್ ಆಗಿದ್ದಾನೆ.
ಸಹದೇವ್‌ನನ್ನು ಇತ್ತೀಚೆಗೆ ಛತ್ತೀಸ್‌ಗಡ್ ಸಿಎಂ ಕೂಡಾ ಗೌರವಿಸಿದ್ದಾರೆ. ಬಾಲಕನನ್ನು ಸಂಪರ್ಕಿಸಿದ ರ್ಯಾಪರ್ ಬಾದ್ ಶಾ ಕೂಡಾ ಬಾಲಕನನ್ನು ಸಂಪರ್ಕಿಸಿ ಬಾಲಿವುಡ್‌ನಲ್ಲಿ ಹಾಡಲು ಕರೆದಿದ್ದಾರೆ ಎನ್ನಲಾಗಿದೆ. ಸದ್ಯ ನಟಿ ಪತಿ ಹಾಗೂ ಮಗಳು ವಮಿಕಾಳೊಂದಿಗೆ ಇಂಗ್ಲೆಂಡ್‌ನಲ್ಲಿದ್ದಾರೆ.
