Asianet Suvarna News Asianet Suvarna News

ಅನುಷ್ಕಾ ಶರ್ಮಾ ಬೇಬಿ ಬಂಪ್​ ಷೋ ಹಿಂದೆ ಇಷ್ಟೆಲ್ಲಾ ಕಥೆಯಿದ್ಯಾ? ಫೋಟೋದ ಅಸಲಿಯತ್ತೇನು?

ಅನುಷ್ಕಾ ಶರ್ಮಾ ಬೇಬಿ ಬಂಪ್​ ಷೋ ಹಿಂದೆ ಇಷ್ಟೆಲ್ಲಾ ಕಥೆಯಿದ್ಯಾ? ವಿರಾಟ್​ ಕೊಹ್ಲಿ ಜೊತೆಗೆ ಹೊಟ್ಟೆ ತೋರಿಸ್ತಿರೋ ಫೋಟೋದ ಅಸಲಿಯತ್ತೇನು?
 

Anushka Sharma Cradles Baby Bump show The Truth Behind Viral Pic suc
Author
First Published Dec 15, 2023, 3:46 PM IST

ಸೆಲೆಬ್ರಿಟಿಗಳ ಮೇಲೆ ಸದಾ ಪಾಪರಾಜಿಗಳ ಕಣ್ಣು ನೆಟ್ಟಿರುತ್ತದೆ. ಅದರಲ್ಲಿಯೂ ಮದುವೆ, ಮಕ್ಕಳ ವಿಷಯದಲ್ಲಂತೂ ಇನ್ನಿಲ್ಲದ ಇಂಟರೆಸ್ಟ್​. ಅದೇ ರೀತಿ ಇತ್ತೀಚೆಗೆ ಬಹಳ ಚರ್ಚೆಯಲ್ಲಿರುವ ವಿಷಯ ಏನೆಂದರೆ, ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟರ್​ ವಿರಾಟ್​ ಕೊಹ್ಲಿ (Virat Kohli) ಅವರು ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇದ್ದಾರೆ ಎಂಬುದು.  ಕೆಲವು ದಿನಗಳಿಂದ ಸುದ್ದಿ ಕೇಳಿಬರುತ್ತಲೇ ಇದೆ. ಆದರೆ ಈ ವಿಚಾರವನ್ನು ಇದುವರೆಗೆ ದಂಪತಿ ಹೇಳಿಲ್ಲ. ಕೆಲ ದಿನಗಳ ಹಿಂದೆ  ಕ್ರಿಕೆಟ್​ ಮ್ಯಾಚ್​ ನಡೆಯುತ್ತಿದ್ದ ಸಂದರ್ಭದಲ್ಲಿ ಪತಿಯನ್ನು ಸಪೋರ್ಟ್​ ಮಾಡಲು ಅನುಷ್ಕಾ (Anushka Sharma)  ಅಹಮದಾಬಾದ್​ಗೆ ಹೋಗಿದ್ದರು. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಅನುಷ್ಕಾ ಶರ್ಮಾ ಹೊರಬರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವೀಡಿಯೊದಲ್ಲಿ, ಅನುಷ್ಕಾ ಶರ್ಮಾ ಸಂಪೂರ್ಣ ಭದ್ರತೆಯ ನಡುವೆ ಕಪ್ಪು ಉಡುಪಿನಲ್ಲಿ ವಿಮಾನ ನಿಲ್ದಾಣದಿಂದ ಹೊರ ಬರುತ್ತಿರುವುದನ್ನು ಕಾಣಬಹುದು. ನಂತರ ಅವರು ತಮ್ಮ ಕಾರಿನ ಬಳಿಗೆ ಹೋದರು ಮತ್ತು ನಂತರ ಹೋಟೆಲ್‌ಗೆ ಹೊರಟರು. 

‘ಜೀರೋ’ ಸಿನಿಮಾ ತೆರೆಕಂಡ ಬಳಿಕ ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಈಗಾಗಲೇ ಒಪ್ಪಿಕೊಂಡ ‘ಚಕ್ದಾ ಎಕ್ಸ್​ಪ್ರೆಸ್​’ ಸಿನಿಮಾದ ಬಿಡುಗಡೆ ತಡವಾಗುತ್ತಿದೆ. ಎರಡನೇ ಮಗು ಪಡೆಯುವ ಉದ್ದೇಶದಿಂದಲೇ ಅವರು ನಟನೆಯಿಂದ ದೂರ ಉಳಿದುಕೊಂಡಿದ್ದಾರೆ ಎಂಬುದು ಹಲವರ ಊಹೆ. ಅದಾದ ಬಳಿಕ ಸ್ಟೇಡಿಯಂಗೆ ಬಿಳಿಯ ಮಿನಿ ಡ್ರೆಸ್​ನಲ್ಲಿ ನಟಿ ಕಾಣಿಸಿಕೊಂಡಿದ್ದು, ಅವರ ಬೇಬಿ ಬಂಪ್​ ಕಾಣಿಸುವಂತಿದೆ. ತುಂಬಾ ರಶ್​ ಇದ್ದುದರಿಂದ ವಿರಾಟ್​ ಕೊಹ್ಲಿ ಕೂಡ ಪತ್ನಿಯನ್ನು ಸೂಕ್ಷ್ಮವಾಗಿ ಕರೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ಇದೇ ಕಾರಣಕ್ಕೆ ಅವರು ಗರ್ಭಿಣಿ ಇರಬಹುದು ಎಂದು ಫ್ಯಾನ್ಸ್​ ಊಹಿಸಿದ್ದರು.  

ಉರ್ಫಿಯನ್ನು ಮದ್ವೆಯಾಗ್ತಾರಂತೆ ಬಿಗ್​ಬಾಸ್​ನಿಂದ ಹೊರಹಾಕಲ್ಪಟ್ಟ ಯುಟ್ಯೂಬರ್​! ಉಸ್ಸಪ್ಪಾ ಅಂದ ಫ್ಯಾನ್ಸ್​

ಇದಾದ ಬಳಿಕ ಅನುಷ್ಕಾ ಹೊರಗಡೆ ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಳ್ಳದ ಕಾರಣ, ಈಕೆ ಎರಡನೆಯ ಮಗುವಿನ ನಿರೀಕ್ಷೆಯಲ್ಲಿ ಇರುವುದು ನಿಜ ಎಂದೇ ಹೇಳಲಾಗಿತ್ತು.  ಆದರೆ ಇದೀಗ ಈ ಜೋಡಿಯ ಫೋಟೋ ಒಂದು ವೈರಲ್​ ಆಗಿದ್ದು, ಇದು ಅನುಷ್ಕಾ ಗರ್ಭಿಣಿ ಹೌದೋ, ಅಲ್ಲವೋ ಎಂಬ ಬಗೆಗಿನ ಊಹಾಪೋಹಗಳಿಗೆ ತೆರೆ ಎಳೆದಿದೆ. ಇದರಲ್ಲಿ ಇಬ್ಬರೂ  ಖುಷಿ ಖುಷಿಯಾಗಿ ಪೋಸ್​ ನೀಡಿದ್ದಾರೆ. ಇದರಲ್ಲಿಯೂ ಅನುಷ್ಕಾ ಶರ್ಮಾ ಬೇಬಿ ಬಂಪ್​ ನೋಡಬಹುದು. ಆಕೆ ಹೊಟ್ಟೆಯ ಮೇಲೆ ಕೈಯಿಟ್ಟಿದ್ದಾರೆ. ಇಷ್ಟು ನೋಡುತ್ತಿದ್ದಂತೆಯೇ ನಟಿ ಗರ್ಭಿಣಿ ಸುದ್ದಿ ನಿಜ ಎಂದು ಹೇಳಲಾಗುತ್ತಿದೆ. ಆದರೆ ಅಸಲಿಯತ್ತೇ ಬೇರೆ. ಏನೆಂದರೆ, ಇದು ತೀರಾ ಹಳೆಯ ಫೋಟೋ. ಅಂದರೆ,  2018ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕ್ಲಿಕ್ಕಿಸಿದ ಫೋಟೋ. ಅದೇ ಪುನಃ ವೈರಲ್​  ಆಗಿದೆ. ಈ ಸಂದರ್ಭದಲ್ಲಿ ನಟಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಅದನ್ನೇ ತಿರುಚಿ ಮತ್ತೆ ಹಾಕಲಾಗಿದೆ. 

ಸಾಯಿಬಾಬಾ... ನನ್ನ ಕೋರಿಕೆ ಈಡೇರಿಸು... ಶಿರಡಿಯಲ್ಲಿ ಪುತ್ರಿ ಜೊತೆ ಶಾರುಖ್​ ವಿಶೇಷ ಪೂಜೆ!
 

Follow Us:
Download App:
  • android
  • ios