ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕುಟುಂಬಸ್ಥರು ಸದ್ಯ ನಟಿ ರಿಯಾ ಚಕ್ರವರ್ತಿ ವಿರುದ್ಧ ಕಾನೂನು ಹೋರಾಟಕ್ಕಿಳಿದಿದ್ದಾರೆ. ನಿರ್ಭಯಾ ತಾಯಿ ಸುಶಾಂತ್ ಕುಟುಂಬದ ಬೆಂಬಲಕ್ಕೆ ನಿಂತಿದ್ದಾರೆ.

ಸುಶಾಂತ್ ತಂದೆ ಕೆಕೆ ಸಿಂಗ್ ಬಿಹಾರ ಪಟ್ನಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸುವುದರೊಂದಿಗೆ ಸುಶಾಂತ್ ಸಾವಿಗೆ ನ್ಯಾಯ ದೊಡಕಿಸುವ ಕಾನೂನು ಹೋರಾಟ ಆರಂಭವಾಗಿದೆ.

ಸುಶಾಂತ್ ಸಿಂಗ್ ಸಾವು; ವಿಡಿಯೋ ಬಿಡುಗಡೆ ಮಾಡಿದ ಅಂಕಿತಾ ಲೋಕಂಡೆ

ಸುಶಾಂತ್ ಕುಟುಂಬಕ್ಕೆ ತಮ್ಮ ಬೆಂಬಲ ಸೂಚಿಸಿದ ನಿರ್ಭಯಾ ತಾಯಿ, ಸುಶಾಂತ್ ಸಹೋದರಿ ಕಾನೂನಿಗಾಗಿ ಹೋರಾಡುತ್ತಿರುವುದು ನೋಡುವಾಗ ಬೇಸರವಾಗುತ್ತದೆ. ಸತ್ಯ ಹೊರಬರುತ್ತದೆ ಎಂಬ ನಂಬಿಕೆ ಕುಟುಂಬಸ್ಥರಲ್ಲಿರಬೇಕು ಎಂದಿದ್ದಾರೆ. ಮುಂಬೈ ಪೊಲೀಸ್ ಸುಶಾಂತ್ ಬೆಂಬಲಕ್ಕೆ ನಿಲ್ಲಬೇಕೆಂದು ಅವರು ಕೇಳಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ವಿಡಿಯೋ ಮೂಲಕ ಮಾತನಾಡಿದ ಸುಶಾಂತ್ ಸಹೋದರಿ ಶ್ವೇತಾ ಸುಶಾಂತ್ ಪ್ರಕರಣ ಸಿಬಿಗೆ ವಹಿಸುವಲ್ಲಿ ಎಲ್ಲರೂ ಬೆಂಬಲಿಸಬೇಕು ಎಂದು ಕೇಳಿಕೊಂಡಿದ್ದರು.