Pawan Singh : ಪವನ್ ಸಿಂಗ್, ಅಂಜಲಿ ರಾಘವ್ ಕ್ಷಮೆ ಕೇಳಿ, ಪ್ರಕರಣದಿಂದ ಬಚಾವ್ ಆಗುವ ಪ್ರಯತ್ನ ಮಾಡಿದ್ದಾರೆ. ನಟನನ್ನು ಕ್ಷಮಿಸಿದ್ರೂ ಅಂಜಲಿ ನಿರ್ಧಾರ ಬದಲಾಗಿಲ್ಲ. ಈ ಮಧ್ಯೆ ಪವನ್ ಸಿಂಗ್ ಪತ್ನಿಯ ಪೋಸ್ಟ್ ವೈರಲ್ ಆಗಿ ಹೊಸ ಸುದ್ದಿ ಮಾಡಿದೆ.
ಭೋಜಪುರಿ ಸಿನಿಮಾ ಸೂಪರ್ ಸ್ಟಾರ್ ಪವನ್ ಸಿಂಗ್ (Bhojpuri movie superstar Pawan Singh) ಸೊಂಟ ಮುಟ್ಟಿದ್ದ ಪ್ರಕರಣ ಸುಖಾಂತ್ಯ ಕಂಡಂತಿದೆ. ಹರ್ಯಾಣಿ ನಟಿ ಅಂಜಲಿ ರಾಘವ್ (Anjali Raghav) ಸೊಂಟ ಮುಟ್ಟಿದ್ದ ಪವನ್ ಸಿಂಗ್ ವಿಡಿಯೋ ಒಂದು ವೈರಲ್ ಆಗಿತ್ತು. ಪವನ್ ಸಿಂಗ್ ಕೆಲ್ಸವನ್ನು ಅನೇಕರು ಖಂಡಿಸಿದ್ದರು. ಅಂಜಲಿ ರಾಘವ್ ಬಗ್ಗೆಯೂ ಅನೇಕರು ಕಮೆಂಟ್ ಮಾಡಿದ್ದರು. ಈಗ ಪವನ್ ಸಿಂಗ್, ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ ಅಂಜಲಿ ರಾಘವ್ ಕ್ಷಮೆ ಕೇಳಿದ್ದಾರೆ. ಪವನ್ ಸಿಂಗ್ ಅವ್ರನ್ನು ದೊಡ್ಡ ಮನಸ್ಸಿನಿಂದ ಅಂಜಲಿ ಕ್ಷಮಿಸಿದ್ದಾರೆ.
ಕ್ಷಮೆ ಕೇಳಿದ ಪವನ್ ಸಿಂಗ್ : ಸೊಂಟ ಮುಟ್ಟಿದ ಪ್ರಕರಣ ಗಂಭೀರವಾಗ್ತಿದ್ದಂತೆ ಪವನ್ ಸಿಂಗ್, ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಿದ್ದಾರೆ. ಅಂಜಲಿ ರಾಘವ್ ಮತ್ತು ಅವರ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಉದ್ದೇಶಪೂರ್ವಕವಾಗಿ ನಡೆದಿಲ್ಲ. ಹಾಡಿನ ಶೂಟಿಂಗ್ ಸಮಯದಲ್ಲಿ ಮಾಡಿದ ತಪ್ಪು ಎಂದು ಪವನ್ ಸಿಂಗ್ ಹೇಳಿದ್ದಾರೆ. ಯಾರನ್ನೂ ನೋಯಿಸುವುದು ನನ್ನ ಉದ್ದೇಶ ಆಗಿರ್ಲಿಲ್ಲ, ಪ್ರತಿಯೊಬ್ಬ ಮಹಿಳಾ ಕಲಾವಿದೆಯನ್ನು ಗೌರವಿಸುತ್ತೇನೆ ಎಂದಿದ್ದಾರೆ. ಪವನ್ ಸಿಂಗ್ ತಮ್ಮ ಪೋಸ್ಟ್ನಲ್ಲಿ ಅಂಜಲಿ ರಾಘವ್ ಉತ್ತಮ ಕಲಾವಿದೆ ಎಂದಿದ್ದಾರೆ.
ತುಳುನಾಡಿನಲ್ಲಿ ಯಶಸ್ಸು ಕಾಣುತ್ತಿರುವ 'ಕಾಂತಾರ' ಖ್ಯಾತಿ ಸ್ವರಾಜ್ ಶೆಟ್ಟಿ 'ನೆತ್ತರುಕೆರೆ' ಸಿನಿಮಾ!
ಪವನ್ ಸಿಂಗ್ ಕ್ಷಮಿಸಿದ್ರೂ ಬದಲಾಗಲಿಲ್ಲ ಅಂಜಲಿ ನಿರ್ಧಾರ : ಪವನ್ ಸಿಂಗ್ ಅವರನ್ನು ಕ್ಷಮಿಸಿರೋದಾಗಿ ಅಂಜಲಿ ಹೇಳಿದ್ದಾರೆ. ಮನುಷ್ಯ ತಪ್ಪು ಮಾಡೋದು ಸಹಜ. ಕ್ಷಮೆ ಕೇಳಿದಾಗ ಅವರನ್ನು ಕ್ಷಮಿಸಬೇಕು. ಪವನ್ ಸಿಂಗ್ ಉತ್ತಮ ಕಲಾವಿದ ಎಂದು ಅಂಜಲಿ ರಾಘವ್ ಹೇಳಿದ್ದಾರೆ. ನಾನು ಎಲ್ಲವನ್ನೂ ನಗ್ತಾ ಸ್ವೀಕರಿಸಿದ್ದೇನೆ ಅಂದ್ಕೊಂಡಿದ್ರೆ ತಪ್ಪು. ಸಾರ್ವಜನಿಕ ಪ್ರದೇಶದಲ್ಲಿ ಒಪ್ಪಿಗೆ ಇಲ್ಲದೆ ಮುಟ್ಟೋದು ತಪ್ಪು. ನಾನು ಭೋಜಪುರಿ ಇಂಡಸ್ಟ್ರಿಯಲ್ಲಿ ಕೆಲ್ಸ ಮಾಡೋದಿಲ್ಲ ಅಂತ ಅಂಜಲಿ ರಾಘವ್ ಬರೆದಿದ್ದಾರೆ.
ಏನು ಈ ಪ್ರಕರಣ ? : ಪವನ್ ಸಿಂಗ್ ಜೊತೆ ಅಂಜಲಿ ಹೊಸ ಸಾಂಗ್ ನಲ್ಲಿ ಕಾಣಿಸಿಕೊಳ್ತಿದ್ದಾರೆ. ಶೂಟಿಂಗ್ ಮುಗಿದಿದ್ದು, ಪ್ರಮೋಷನ್ ನಡೆಯುತ್ತಿದೆ. ಪ್ರಮೋಷನ್ ಕಾರ್ಯಕ್ರಮದಲ್ಲಿ ಪವನ್ ಸಿಂಗ್, ಅಂಜಲಿ ಸೊಂಟ ಮುಟ್ಟಿದ್ದಾರೆ. ವಿಡಿಯೋ ವೈರಲ್ ಆದ್ಮೇಲೆ ಅಂಜಲಿ, ಪವನ್ ಸಿಂಗ್ ಕ್ರಮ ಖಂಡಿಸಿ, ಭೋಜಪುರಿ ಇಂಡಸ್ಟ್ರಿ ಬಿಡೋದಾಗಿ ಹೇಳಿದ್ರು.
ಪವನ್ ಕಲ್ಯಾಣ್ ಜೊತೆ ಒಂದು ಹಿಟ್ ಸಿನಿಮಾ ಕೊಟ್ಟು ವಿದೇಶಕ್ಕೆ ಹಾರಿದ್ದೇಕೆ ಅಕ್ಕಿನೇನಿ ನಾಗಾರ್ಜುನ ಮೊಮ್ಮಗಳು?
ಗಮನ ಸೆಳೆದ ಪವನ್ ಸಿಂಗ್ ಎರಡನೇ ಪತ್ನಿ ಪೋಸ್ಟ್ : ಸೋಶಿಯಲ್ ಮೀಡಿಯಾದಲ್ಲಿ ಪವನ್ ಸಿಂಗ್ ಎರಡನೇ ಪತ್ನಿ ಜ್ಯೋತಿ ಸಿಂಗ್ ಭಾವುಕ ಪೋಸ್ಟ್ ಹಾಕಿದ್ದಾರೆ. ಕೆಲ ತಿಂಗಳಿಂದ ಪವನ್ ಸಿಂಗ್, ಸಂಪರ್ಕ ಮಾಡಲು ಸಾಧ್ಯವಾಗ್ತಿಲ್ಲ. ಈ ಎಲ್ಲ ಕಾರಣದಿಂದ ಪ್ರಾಣ ತೆಗೆದುಕೊಳ್ಳುವಂತ ಆಲೋಚನೆ ಬರ್ತಿದೆ ಅಂತ ಬರೆದಿದ್ದಾರೆ. ಜ್ಯೋತಿ ಸಿಂಗ್, ಪವನ್ ಸಿಂಗ್ ಎರಡನೇ ಪತ್ನಿ. ಅವರ ಮೊದಲ ಪತ್ನಿ ಹೆಸರು ಪ್ರಿಯಾಕುಮಾರಿ ಸಿಂಗ್. 2018ರಲ್ಲಿ ಪವನ್ ಸಿಂಗ್, ಜ್ಯೋತಿ ಸಿಂಗ್ ಅವರನ್ನು ಮದುವೆ ಆಗಿದ್ದಾರೆ. ಆದ್ರೆ ಕಳೆದ ಎರಡು ತಿಂಗಳಿಂದ ಜ್ಯೋತಿ ಸಿಂಗ್ ಸಂಪರ್ಕಕ್ಕೆ ಪವನ್ ಸಿಕ್ಕಿಲ್ಲ. ಅನೇಕ ಬಾರಿ ಸಂಪರ್ಕಕ್ಕೆ ಪ್ರಯತ್ನಿಸಿದ್ದೇನೆ. ಕಚೇರಿಗೆ ಹೋಗಿದ್ದೇನೆ. ಅಲ್ಲಿಯೂ ಭೇಟಿಯಾಗ್ಲಿಲ್ಲ. ನನ್ನ ಫೋನ್ ರಿಸೀವ್ ಮಾಡ್ತಿಲ್ಲ. ಪವನ್ ಸಿಂಗ್ ಸಿಬ್ಬಂದಿ, ಕಚೇರಿ ಒಳಗೆ ಹೋಗಲು ಬಿಡ್ತಿಲ್ಲ ಎಂದು ಜ್ಯೋತಿ ಸಿಂಗ್ ಪೋಸ್ಟ್ ನಲ್ಲಿ ಹೇಳಿದ್ದಾರೆ. ವೈಯಕ್ತಿಕ ವಿಷ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹೇಳುವ ಅಗತ್ಯ ಇರಲಿಲ್ಲ. ಆದ್ರೆ ಪವನ್ ಸಿಂಗ್ ಜೊತೆ ಮಾತನಾಡಲು ನನಗೆ ಇದನ್ನು ಬಿಟ್ಟು ಬೇರೆ ದಾರಿ ಕಾಣಲಿಲ್ಲ ಅಂತ ಜ್ಯೋತಿ ಹೇಳಿದ್ದಾರೆ. 2022ರಲ್ಲಿ ಪವನ್ ಸಿಂಗ್, ಜ್ಯೋತಿಗೆ ವಿಚ್ಛೇದನ ನೀಡಲು ಮುಂದಾಗಿದ್ದು, ಪ್ರಕರಣ ಇನ್ನೂ ಕೋರ್ಟ್ ನಲ್ಲಿದೆ. ಅಲ್ಲಿಂದ ಇಬ್ಬರೂ ಬೇರೆ ವಾಸ ಮಾಡ್ತಿದ್ದಾರೆ.
