Asianet Suvarna News Asianet Suvarna News

'ಅವೆಂಜರ್ಸ್' ನಟ ಜೆರ್ಮಿ ಕಾರು ಅಪಘಾತ, ಸ್ಥಿತಿ ಗಂಭೀರ; ಶೀಘ್ರ ಗುಣಮುಖರಾಗಿ ಎಂದು ಅನಿಲ್ ಕಪೂರ್ ಪ್ರಾರ್ಥನೆ

ಹಾಲಿವುಡ್ ಖ್ಯಾತ ನಟ, 'ಅವೆಂಜರ್' ಖ್ಯಾತಿಯ ಜೆರ್ಮಿ ರನ್ನರ್‌ಗೆ ಅಪಘಾತವಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

Anil Kapoor wishes speedy recovery to hollywood Actor Jeremy Renner sgk
Author
First Published Jan 2, 2023, 6:05 PM IST

ಹಾಲಿವುಡ್ ಖ್ಯಾತ ನಟ, 'ಅವೆಂಜರ್ಸ್' ಖ್ಯಾತಿಯ ಜೆರ್ಮಿ ರನ್ನರ್‌ಗೆ ಅಪಘಾತವಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. 'ಅವೆಂಜರ್ಸ್' ಸರಣಿಯಲ್ಲಿ ಹ್ಯಾಕ್ ಐ ಪಾತ್ರ ನಿರ್ವಹಿಸುತ್ತಿದ್ದ ಜೆರ್ಮಿ ದಟ್ಟ ಮಂಜಿನ ನಡುವೆ ಕಾರು ಚಲಾಯಿಸುತ್ತಿರುವಾಗ ಅಪಘಾತಕ್ಕೀಡಾಗಿದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಅಪಘಾತವಾದ ತಕ್ಷಣವೇ ಏರ್ ಲಿಫ್ಟ್ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೆರ್ಮಿ ಅಪಘಾತದ ಬಳಿಕ ಅವರ ವಕ್ತಾರರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸ್ಥಿತಿ ಗಂಭೀರವಾಗಿದೆ ಆದರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಂಜಾನೆ ತೀವ್ರ ಮಂಜಿನ ನಡುವೆ ಕಾರು ಚಲಾಯಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ. 

ನಟ ಜೆರ್ಮಿ ರನ್ನರ್ ಎರಡು ಬಾರಿ ಆಸ್ಕರ್ ನಾಮ ನಿರ್ದೇಶಿತರಾಗಿದ್ದರು. ರೆನ್ನರ್ ಅವರು ದಿ ಮೇಯರ್ ಆಫ್ ಕಿಂಗ್‌ಸ್ಟೌನ್ ಮತ್ತು ಮಾರ್ವೆಲ್‌ ಸರಣಿಗಳು ಹಾಗೂ ಅವೆಂಜರ್ಸ್ ಮತ್ತು ಕ್ಯಾಪ್ಟನ್ ಅಮೇರಿಕಾ ಸಿನಿಮಾಗಳಲ್ಲಿ ನಟಿಸಿ ವಿಶ್ವ ಮಟ್ಟದ ಖ್ಯಾತಿ ಗಳಿಸಿದ್ದರು. 

Johnny Deep ಮಾನನಷ್ಟ ಮೊಕದ್ದಮೆ ಕೇಸ್‌; 10 ಲಕ್ಷ ಕೊಡಲು ಒಪ್ಪಿದ ಅಂಬರ್ ಹರ್ಡ್‌

ಜೆರ್ಮಿ ವಾಸಿಸುತ್ತಿದ್ದ ನೆವಾಡಾದಲ್ಲಿ ಹಲವು ದಿನಗಳಿಂದ ಹಿಮಪಾತವಾಗುತ್ತಿದೆ. ಡಿಸೆಂಬರ್ ಕೊನೆಯ ವಾರ ಮತ್ತು ಜನವರಿ ಪ್ರಾರಂಭದಲ್ಲಿ ಸಿಕ್ಕಾಪಟ್ಟೆ ಹಿಮಪಾತ ವಾಗುತ್ತದೆ.  ಹಿಮದಿಂದ ಮುಚ್ಚಿ ಹೋಗಿರುತ್ತದೆ. ಸಂಚಾರಕ್ಕೆ ಸಾಕಷ್ಟು ಅಡೆತಡೆಗಳು ಎದುರಾಗುತ್ತೆ. ಈ ಸಂದರ್ಭದಲ್ಲಿ ಜೆರ್ಮಿ ಕಾರು ಚಲಾಯಿಸಿ ಅಪಘಾತ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ತೀವ್ರ ಗಾಯಗೊಂಡಿದ್ದ ಜೆರ್ಮಿ ಅವರನ್ನು ರಸ್ತೆ ಸಂಚಾರ ಸಾಧ್ಯವಾಗದ ಕಾರಣ ಏರ್ ಲಿಫ್ಟ್ ಮಾಡಲಾಗಿದೆ. 

ದಿನ ರಾತ್ರಿ ಸೆಕ್ಸ್ ಇಲ್ಲ ಅಂದ್ರೆ ಬೆಳಗ್ಗೆ ಎದ್ದಾಗ ತೃಪ್ತಿಯೇ ಇರಲ್ಲ; ಗಾಯಕಿ ರಿಹಾನಾ

ಜೆರ್ಮಿ ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಮತ್ತು ಅನೇಕ ಸಿನಿಮಾ ಗಣ್ಯರು ಹಾರೈಸುತ್ತಿದ್ದಾರೆ. ಬಾಲಿವುಡ್ ಸ್ಟಾರ್ ಅನಿಲ್ ಕಪೂರ್ ಕೂಡ ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸಿದ್ದಾರೆ. ಜೆರ್ಮಿ ಜೊತೆಗಿನ ಫೋಟೋ ಶೇರ್ ಮಾಡಿ ಬೇಗ ಗುಣಮುಖರಾಗಿ ಎಂದು ಹೇಳಿದ್ದಾರೆ. ಅಂದಹಾಗೆ ಅನಿಲ್ ಕಪೂರ್ ಮತ್ತು ಜೆರ್ಮಿ ಇಬ್ಬರೂ ವೆಬ್ ಸೀರಿಸ್ ನಲ್ಲಿ ಒಟ್ಟಿಗೆ ನಟಿಸಿದ್ದಾರೆ. ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಮೊದಲು ಇಬ್ಬರೂ ಟಾಮ್ ಕ್ರೂಸ್ ಅವರ ಮಿಷನ್: ಇಂಪಾಸಿಬಲ್, ಘೋಸ್ಟ್ ಪ್ರೋಟೋಕಾಲ್‌ನಲ್ಲಿ ನಟಿಸಿದ್ದರು. ಆದರೆ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿರಲಿಲ್ಲ.

Follow Us:
Download App:
  • android
  • ios