ಜಾನಿ ಡಿಪ್ ಮತ್ತು ಪತ್ನಿ ಆಂಬರ್ ಹರ್ಡ್‌ ಪರಸ್ಪರ ಮಾನನಷ್ಟ ಮೊಕದ್ದಮೆ ಹೊಡಿದ್ದು ಇಬ್ಬರಿಗೂ ಗೆಲುವು ಸಿಕ್ಕಿದೆ.  

2022ರ ಆರಂಭದಲ್ಲಿ ಹಾಲಿವುಡ್‌ ಖ್ಯಾತ ನಟ ಕಮ್ ನಿರ್ದೇಶಕ ಜಾನಿ ಡಿಪ್‌ ಮತ್ತು ಮಾಜಿ ಪತ್ನಿ ಆಂಬರ್ ಹರ್ಡ್‌ ಪರಸ್ಪರ ಮಾನನಷ್ಟ ಮೊಕದ್ದಮೆ ಮತ್ತು ಕೌಟುಂಬಿಕ ಹಿಂಸೆ ಆರೋಪ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಕೇಸಲ್ಲಿದ್ದ ಟ್ವಿಸ್ಟ್‌ ಏನೆಂದರೆ ಪತ್ನಿ ವಿರುದ್ಧ ಜಾನಿ ಡಿಪ್ ಮಾನನಷ್ಟ ಮೊಕದ್ದಮೆ ಕೇಸ್‌ ಗೆದ್ದರೆ, ಪತಿ ವಿರುದ್ಧ ಆಂಬರ್ ಹರ್ಡ್‌ ಸಲ್ಲಿಸಿದ್ದ ಕೌಟುಂಬಿಕ ದೌರ್ಜನ್ಯ ಪ್ರಕರಣ ಗೆದ್ದಿದ್ದರು. ಈ ಕೇಸ್‌ನ ಗೆದ್ದು ಜಾನಿ 116 ಕೋಟಿ ರೂಪಾಯಿ ಪರಿಹಾರ ಗಿಟ್ಟಿಸಿಕೊಂಡರೆ ಅಂಬರ್‌ ಹರ್ಡ್‌ 15 ಕೋಟಿ ಪರಿಹಾರ ಪಡೆದುಕೊಂಡರು. 

ಡಿಸೆಂಬರ್ 19, 2022ರಂದು ಮಾನನಷ್ಟ ಮೊಕದ್ದಮೆಯನ್ನು ಇತ್ಯರ್ಥ ಪಡಿಸಲಾಗಿದೆ ಹೀಗಾಗಿ ಆಂಬರ್ ಹರ್ಡ್‌ 1 ಮಿಲಿಯನ್ ಅಂದ್ರೆ 10 ಲಕ್ಷ ರೂಪಾಯಿ ಹಣವನ್ನು ಜಾನಿ ಡಿಪ್‌ಗೆ ನೀಡಲು ಒಪ್ಪಿಕೊಂಡಿದ್ದಾರಂತೆ. ಈ ವಿಚಾರದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 

ಅಂಬರ್ ಪೋಸ್ಟ್‌:

'ಇದನ್ನು ನಾನು ಆಯ್ಕೆ ಮಾಡಿದಲ್ಲ ಅನ್ನೋ ವಿಚಾರವನ್ನು ನಾನು ಮೊದಲು ತಿಳಿಸಬೇಕು. ಈ ಕ್ಷಣದವರೆಗೂ ನಾನು ಸತ್ಯದ ಪರ ನಿಲ್ಲುತ್ತಿರುವ ಏಕೆಂದರೆ ಸತ್ಯವನ್ನು ನಾಷ ಮಾಡಲಾಗಿದೆ. ಸೋಷಿಯಲ್ ಮೀಡಿಯಾದಿಂದ ನಾನು ಸ್ವೀಕರಿಸುತ್ತಿರುವ ನಿಂದನೆಗಳು ಸರಿ ಅಲ್ಲ ಏನೂ ತಪ್ಪಿಲ್ಲದ ಮಹಿಳೆಯರನ್ನು ಆರೋಪಿಗಳಾಗಿ ಬಿಂಬಿಸಲಾಗುತ್ತಿದೆ. 6 ವರ್ಷಗಳಿಂದ ಎಳೆದುಕೊಂಡು ಬರುತ್ತಿರುವ ವಿಚಾರಕ್ಕೆ ಅಂತಿಮ ಹಾಡುವ ಸಮಯ ಬಂದಿದೆ.

ಅಮೆರಿಕಾ ಲೀಗಲ್‌ ಸಿಸ್ಟಮ್‌ ಮೇಲೆ ನಾನು ಗೌರವ ಕಳೆದುಕೊಂಡಿರುವೆ. ನನ್ನ ವೈಯಕ್ತಿ ಜೀವನದ ವಿಚಾರ ಜನರಿಗೆ ಇಲ್ಲಿ ಮನೋರಂಜನೆಯಾಗಿದೆ. ನ್ಯಾಯಾಧೀಶರು ಮುಂದೆ ನಿಂತಾಗ ನನಗೆ ಸರಿಯಾಗಿ ಅವಕಾಶ ಸಿಗಲಿಲ್ಲ. ಸರಿಯಾಗಿ ನಡೆದಿರುವ ಕ್ಷಣಗಳನ್ನು ತೋರಿಸಿಲ್ಲ ಅಲ್ಲಿ ನಡೆದ ವಿರುದ್ಧ ಘಟನೆಯ ವಿಡಿಯೋಗಳನ್ನು ಮಾತ್ರ ಮಾಧ್ಯಮಗಳಿಗೆ ನೀಡಲಾಗಿತ್ತು. ಇದರಿಂದ ನಾನು ಕೌಟುಂಬಿಕ ದೌರ್ಜನ್ಯ ಮತ್ತು ಹಿಂಸೆಗೆ ಒಳಗಾಗಿರುವ ವಿಚಾರವನ್ನು ಜನರು ಮರೆತು ಬೇರೇನೋ ಮಾತನಾಡಲು ಶುರು ಮಾಡಿದ್ದರು. USನಲ್ಲಿ ಅಪೀಯರಲ್‌ ಯಶಸ್ವಿಯಾಗಿದ್ದರೆ ಮತ್ತೊಮ್ಮೆ ಟ್ರೈಯಲ್ ತೆಗೆದುಕೊಳ್ಳುತ್ತಿದ್ದರು ಆಗ ಕೇಸ್ ಮುಚ್ಚುತ್ತಿದ್ದರು. ಇದೇ ನಡೆಯುವುದಾದರೆ ನಾನು ಯಾಕೆ ಟ್ರೈಯಲ್ ತೆಗೆದುಕೊಳ್ಳಬೇಕು ಮೂರನೇ ಸತಿ ಅದೇ ಅವಮಾನ ಅನುಭವಿಸಬೇಕು. ಇಲ್ಲಿ ನನ್ನ ಫ್ರೀಡಂ ಕಸಿದುಕೊಂಡಿದ್ದಾರೆ ಸುಖಸುಮ್ಮನೆ ಬಿಲ್ ಕಟ್ಟುವುದಕ್ಕೆ ಅಗಲ್ಲ. ಸತ್ಯ ಮಾತನಾಡುವುದಕ್ಕೆ ಮಹಿಳೆಯರು ಇಲ್ಲ ಹಣ ಕೊಡಬೇಕು ಅಲ್ಲದೆ ಕೆಟ್ಟ ಹೆಸರು ಪಡೆಯಬೇಕು. 

ನನ್ನ ಜೀವನದಲ್ಲಿ ಸಮಯ ತುಂಬಾನೇ ಮುಖ್ಯ ಒಳ್ಳೆ ಕೆಲಸ ಮಾಡುವುದರಲ್ಲಿ ತೊಡಗಿಸಿಕೊಳ್ಳಬೇಕು. 

ಪತ್ನಿ ವಿರುದ್ಧ ಮಾನನಷ್ಟ ಕೇಸ್ ಗೆದ್ದ Hollywood ನಟ ಜಾನಿ ಡಿಪ್, ನೊಂದ ಪತ್ನಿ

ಜಾನಿ - ಆಂಬರ್ ಸಂಬಂಧ:

2011ರಲ್ಲಿ ದಿ ರಮ್ ಡೈರಿ ಸಿನಿಮಾದಲ್ಲಿ ಆಂಬರ್ ಹರ್ಡ್‌ ಮತ್ತು ಜಾನಿ ಜೊತೆಯಾಗಿ ನಟಿಸಿದ್ದರು. 2015 ಫೆಬ್ರವರಿಯಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನೂರಾರು ಕಾರಣಗಳಿಂದ 2016ರಲ್ಲಿ ಆಂಬರ್ ವಿಚ್ಛೇದನ ಪಡೆಯಲು ಮುಂದಾದರು, ವಿಚ್ಛೇದನಕ್ಕೆ ಸಲಿಸುವಾಗ ಅಂಬರ್ ಹರ್ಡ್‌ ವರ್ಬಲಿ ಮತ್ತು ಫಿಸಿಕಲಿ ನನ್ನ ಮೇಲೆ ಹಲ್ಲೆಯಾಗಿದೆ ಎಂದು ದೂರು ನೀಡಿದ್ದರು. 2016ರಲ್ಲಿ ಡಿವೋರ್ಸ್‌ ಸ್ಟೇಟ್‌ಮೆಂಟ್ ಪ್ರಕಾರ 7 ಮಿಲಿಯನ್ ಡಾಲರ್‌ ಕೊಡಲಾಗಿತ್ತು.2017 ಜನವರಿಯಲ್ಲಿ ಸಂಪೂರ್ಣವಾಗಿ ಸಂಬಂಧ ಕಳೆದುಕೊಂಡರು. ಈ ಹಣವನ್ನು ಮಕ್ಕಳ ಆಸ್ಪತ್ರೆಗೆ ಆಂಬರ್‌ ದಾನ ಮಾಡಿದ್ದರು.