ಸಹರ್ ತಬರ್ ಅವರಿಗೆ ಕೇವಲ 19 ವರ್ಷ. ಅವಳ ತಮಾಷೆ ಅವಳನ್ನು ಜೈಲಿಗೆ ತಳ್ಳಿತು. ಅವಳ ತಾಯಿ ತನ್ನ ಮುಗ್ಧ ಮಗಳನ್ನು ಬಿಡುಗಡೆ ಮಾಡಲು ಪ್ರತಿದಿನ ಅಳುತ್ತಾಳೆ. ಪ್ರಿಯ ಏಂಜಲೀನಾ ಜೋಲೀ, ನಮಗೆ ಇಲ್ಲಿ ನಿಮ್ಮ ಧ್ವನಿ ಬೇಕು. ನಮಗೆ ಸಹಾಯ ಮಾಡಿ ಎಂದು ಆಕೆಯ ಬಿಡುಗಡೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಲಾಗಿತ್ತು.
ಹಾಲಿವುಡ್ ನಟಿ (Hollywood Actress) ಏಂಜೆಲಿಯಾ ಜೋಲಿಯನ್ನು (Angelina Jolie) ಹೋಲುವ ಭಯಾನಕ ಫೋಟೋಗಳನ್ನು ಪೋಸ್ಟ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪ್ರಸಿದ್ಧಿ ಹೊಂದಿದ್ದ ಇರಾನ್ (Iran) ಮಹಿಳೆ ಜೈಲಿನಿಂದ ಬಿಡುಗಡೆಯಾದ ನಂತರ ತನ್ನ ನೈಜ ಮುಖವನ್ನು ಬಹಿರಂಗಪಡಿಸಿದ್ದಾಳೆ. ಸಹರ್ ತಬರ್ ಅವರನ್ನು 2019 ರ ಅಕ್ಟೋಬರ್‌ನಲ್ಲಿ "ಭ್ರಷ್ಟಾಚಾರ" (Corruption) ಮತ್ತು "ದೇವನಿಂದನೆ" (Blasphemy) ಆರೋಪದ ಮೇಲೆ ಬಂಧಿಸಲಾಯಿತು ಮತ್ತು 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ ಕಳೆದ ತಿಂಗಳು ಮಹ್ಸಾ ಅಮಿನಿಯ (Mahsa Amini) ಸಾವಿನಿಂದ ಪ್ರಚೋದಿಸಲ್ಪಟ್ಟ ಇರಾನ್‌ನಲ್ಲಿ ವ್ಯಾಪಕ ಪ್ರತಿಭಟನೆಗಳ ನಂತರ 14 ತಿಂಗಳ ನಂತರ ಆಕೆಯನ್ನು ಬಿಡುಗಡೆ ಮಾಡಲಾಯಿತು.
ತಬರ್ ಅವರು ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿರುವುದಾಗಿ ವ್ಯಾಪಕವಾಗಿ ನಂಬಲಾಗಿತ್ತು, ಇದು ಆಕೆಯನ್ನು ಏಂಜಲೀನಾ ಜೋಲಿಯ ದೆವ್ವದ ಆವೃತ್ತಿಯಂತೆ ಕಾಣುವಂತೆ ಮಾಡಿತ್ತು. ಆದರೆ, ಜೈಲಿನಿಂದ ಬಿಡುಗಡೆಯಾದ ನಂತರ, 21 ವರ್ಷ ವಯಸ್ಸಿನ ಮಹಿಳೆ ಈ ವಾರ ಕ್ಯಾಮರಾಗಳಿಗೆ ತನ್ನ ನೈಜ ಮುಖವನ್ನು ತೋರಿಸಿದಳು ಎಂದು ಇಂಡಿಪೆಂಡೆಂಟ್‌ನ ವರದಿ ಹೇಳಿದೆ.
ಆಕೆಯನ್ನು ಬಿಡುಗಡೆ ಮಾಡಲು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಿದ್ದರು. ಈ ಪೈಕಿ ಕಾರ್ಯಕರ್ತ ಮಸಿಹ್ ಅಲಿನೆಜಾದ್ ಕೂಡ ಒಬ್ಬರು. ಸಹರ್ ತಬರ್ ಅವರಿಗೆ ಕೇವಲ 19 ವರ್ಷ. ಅವಳ ತಮಾಷೆ ಅವಳನ್ನು ಜೈಲಿಗೆ ತಳ್ಳಿತು. ಅವಳ ತಾಯಿ ತನ್ನ ಮುಗ್ಧ ಮಗಳನ್ನು ಬಿಡುಗಡೆ ಮಾಡಲು ಪ್ರತಿದಿನ ಅಳುತ್ತಾಳೆ. ಪ್ರಿಯ ಏಂಜಲೀನಾ ಜೋಲೀ, ನಮಗೆ ಇಲ್ಲಿ ನಿಮ್ಮ ಧ್ವನಿ ಬೇಕು. ನಮಗೆ ಸಹಾಯ ಮಾಡಿ." ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.
ಇದನ್ನು ಓದಿ: ಇರಾನ್‌ನಲ್ಲಿ ತಣ್ಣಗಾಗದ ಹಿಜಾಬ್ ಹೋರಾಟ: ಭದ್ರತಾ ಸಿಬ್ಬಂದಿಯ ಥಳಿತಕ್ಕೆ 15 ವರ್ಷದ ಬಾಲಕಿ ಬಲಿ
ತಾನು ಮೂಗಿಗೆ ಸರ್ಜರಿ ಮಾಡಿಸಿಕೊಂಡಿದ್ದೇನೆ, ಜತೆಗೆ ಲಿಪ್ ಫಿಲ್ಲರ್‌ಗಳು ಮತ್ತು ಲಿಪೋಸಕ್ಷನ್‌ನಂತಹ ಕೆಲವು ಕಾಸ್ಮೆಟಿಕ್ ಕಾರ್ಯವಿಧಾನಗಳಿಗೆ ಒಳಗಾಗಿದ್ದೇನೆ. ಆದರೆ, ವೈರಲ್ ಆದ ಫೋಟೋಗಳು, ಫೋಟೋಶಾಪ್‌ನಲ್ಲಿ ಮೇಕಪ್ ಮತ್ತು ಎಡಿಟಿಂಗ್‌ನ ಪರಿಣಾಮ ಎಂದು ಹೇಳಿಕೊಂಡಿದ್ದಾಳೆ. ಆಕೆಯ ಫೋಟೋಗಳಿಂದಾಗಿ, ಸಾಮಾಜಿಕ ಮಾಧ್ಯಮದಲ್ಲಿ ಅವಳನ್ನು "ಜೋಂಬಿ ಏಂಜೆಲೀನಾ ಜೋಲಿ" ಎಂದು ಕರೆಯಲಾಯಿತು. "ಇನ್‌ಸ್ಟಾಗ್ರಾಮ್‌ನಲ್ಲಿ ನೀವು ನೋಡಿದ್ದು ನಾನು ಚಿತ್ರವನ್ನು ರಚಿಸಲು ಬಳಸಿದ ಕಂಪ್ಯೂಟರ್ ಎಫೆಕ್ಟ್‌ಗಳು" ಎಂದು ಆಕೆ ಹೇಳಿದ್ದಾಳೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ತಬರ್‌ನ ನಿಜವಾದ ಹೆಸರು ಫತೆಮೆಹ್ ಕಿಶ್‌ವಾಂದ್ ಎಂದು ತಿಳಿದುಬಂದಿದ್ದು, ಆಕೆ ತಾನು ಯಾವಾಗಲೂ ಪ್ರಸಿದ್ಧಳಾಗಿರಬೇಕೆಂದು ಬಯಸುತ್ತಾಳೆ. ಈ ಹಿನ್ನೆಲೆ ಜಗತ್ತಿನ ಗಮನ ಸೆಳೆಯಲು ಆಕೆ ಆ ರೀತಿ ಗಮನ ಸೆಳೆಯಲು ಆಯ್ಕೆ ಮಾಡಿಕೊಂಡಿದ್ದಳು. ಇದಕ್ಕೆ ಸೈಬರ್‌ಸ್ಪೇಸ್ ಸುಲಭವಾದ ಮಾರ್ಗವನ್ನು ಒದಗಿಸಿದೆ ಎಂದು ಮಹಿಳೆ ಹೇಳಿದಳು. ಹಾಗೂ, ನಟಿಯಾಗುವುದಕ್ಕಿಂತ ಇದು ತುಂಬಾ ಸುಲಭವಾಗಿದೆ ಎಂದೂ ಆಕೆ ಹೇಳಿದ್ದಾಳಂತೆ.
ಇದನ್ನೂ ಓದಿ: World’s Dirtiest Man: 67 ವರ್ಷದಿಂದ ಸ್ನಾನ ಬಿಟ್ಟಿದ್ದ ವ್ಯಕ್ತಿ ಸ್ನಾನ ಮಾಡಿದ ಬಳಿಕ ಸಾವು!
ಚಿತ್ರಗಳನ್ನು "ತಮಾಷೆ"ಗಾಗಿ ರಚಿಸಲಾಗಿತ್ತು ಎಂದು ತಬರ್ ಹೇಳಿದ್ದು, ಮತ್ತು ಈ ಬಗ್ಗೆ ಆಕೆ ವಿಷಾದವನ್ನೂ ವ್ಯಕ್ತಪಡಿದ್ದಾಳೆ. "ನನ್ನ ತಾಯಿ ನನಗೆ ನಿಲ್ಲಿಸಲು ಹೇಳುತ್ತಿದ್ದರು, ಆದರೆ ನಾನು ಅವರ ಮಾತು ಕೇಳಲಿಲ್ಲ." ಎಂದೂ ತಬರ್ ಬೇಸರ ವ್ಯಕ್ತಪಡಿಸಿದ್ದಾರೆ.
