ಸದಾ ಸುದ್ದಿಯಲ್ಲಿರುವ ನಿರೂಪಕಿ ಅನಸೂಯ ಪತಿ ಏನಂತಾರೆ? ದೇಹ ಶೋ ಆಫ್‌ ಮಾಡುವುದು ಸ್ಟೈಲ್ ಅಂತಾರಾ?

ತೆಲುಗು ಕಿರುತೆರೆ ಲೋಕದ ಜನಪ್ರಿಯ ನಿರೂಪಕಿ ಅನಸೂಯ ಭಾರದ್ವಾಜ್‌ ಇತ್ತೀಚಿಗೆ ಸಿನಿಮಾಗಳಲ್ಲೂ ಮಿಂಚುತ್ತಿದ್ದಾರೆ. ಹಾಟ್ ಆಂಡ್ ಗ್ಲಾಮರ್ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಈ ಸುಂದರಿಗೆ ಮದುವೆ ಆಗಿದೆ. ಆಂಟಿ, ತುಂಟಿ, ಬ್ಯೂಟಿ ಆಂಡ್ ಹಾಟಿ ಎಂದು ಕಾಮೆಂಟ್ ಮಾಡುವ ಪುಂಡರಿಗೆ ಈಗಾಗಲೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇತ್ತೀಚಿಗೆ ಸಿಂಬಾ ಸಿನಿಮಾದ ಕಾರ್ಯಕ್ರಮದಲ್ಲಿ ಅನಸೂಯ ಮಾಧ್ಯಮಗಳಿಗೆ ಎದುರಾದಾಗ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

'ರಿಪೀಟೇಶನ್‌ ಒಂದು ಕಾರಣದಿಂದ ನಾನು ಸಾಕಷ್ಟು ಆಫರ್‌ಗಳನ್ನು ಕೈ ಬಿಡುತ್ತಿರುವುದು. ನನಗೆ ಬಂದಿರುವ ಪಾತ್ರಗಳೇ ಮತ್ತೆ ಬರುತ್ತಿರುವ ಕಾರಣ ನೋ ಎನ್ನುತ್ತಿರುವೆ. ರಂಗಮ್ಮನತ್ತ ರೀತಿಯ ಪಾತ್ರಗಳು ನನಗೆ ಬಹಳ ಬಂದವು. ತೆಲುಗು ನಟಿಯಾಗಿ ಬೇರೆ ಭಾಷೆಗಳಲ್ಲಿ ನನಗೆ ಆಫರ್‌ ಸಿಗುತ್ತಿರುವುದಕ್ಕೆ ತುಂಬಾನೇ ಖುಷಿಯಾಗಿರುವೆ' ಎಂದು ಪಾತ್ರಗಳ ಆಯ್ಕೆ ಬಗ್ಗೆ ಅನಸೂಯ ಮಾತನಾಡಿದ್ದಾರೆ. 

ಅವರಿಬ್ಬರ ಕಿತ್ತಾಟ ಹೊಸತೇನಲ್ಲ ಈಗ ಎಲ್ಲರಿಗೂ ಗೊತ್ತಾಗಿದೆ ಅಷ್ಟೇ: ಧ್ರುವ ಸರ್ಜಾ ಸ್ಪಷ್ಟನೆ

'ನಾನು ಎಲ್ಲಾ ಪಾತ್ರ ಒಪ್ಪಿಕೊಳ್ಳಲ್ಲ. ನಾನು ನನ್ನ ಗ್ಲಾಮರ್‌ ಪ್ರೊಜೆಕ್ಟ್‌ ಮಾಡಬೇಕು ಎಂದುಕೊಂಡಿರುವೆ. ನಾನು ಮೇಂಟೇನ್ ಮಾಡುವಷ್ಟು ದಿನ ಹೀಗೆ ಶೋ ಆಫ್‌ ಮಾಡುತ್ತೀನಿ. ಈ ವಿಷಯದಲ್ಲಿ ನನಗೆ ನಾಚಿಕೆಯಿಲ್ಲ ಯಾಕಂದರೆ ಇದು ನನ್ನ ಬಾಡಿ ಇದು ನಾನು ನನ್ನಂತೆ ಯಾರೂ ಇಲ್ಲ ಅಂದುಕೊಳ್ಳುತ್ತೀನಿ....' ಎಂದು ಅನಸೂಯ ಹೇಳಿದ್ದಾರೆ. 

'ನನ್ನ ಪತಿ ಈ ವಿಚಾರಗಳ ಬಗ್ಗೆ ಏನೂ ಹೇಳುವುದಿಲ್ಲ. ಒಳ್ಳೆ ಅವಕಾಶಗಳು ಬಂದರೆ ಭಾರೀ ಸ,ಭಾವನೆಯನ್ನೇ ಕೇಳ್ತೀನಿ ಬಿಡಲ್ಲ ಇನ್ನು ನನ್ನ ಸಿನಿಮಾ ವಿಚಾರದಲ್ಲಿ ಪತಿ ತಲೆ ಹಾಕುವುದಿಲ್ಲ ಅವರು ಬಂಗಾರದ ಮನುಷ್ಯ' ಎಂದಿದ್ದಾರೆ ಅನಸೂಯ.

ಎದೆ ಮೇಲೆ 'Love' ಟ್ಯಾಟು ಹಾಕಿಸಿಕೊಂಡ ನಟಿ ಶ್ರದ್ಧಾ ಶ್ರೀನಾಥ್; ಯಾರು ಆ ಲವರ್?

'ನನ್ನನ್ನು ಆಂಟಿ ಎಂದು ಕರೆಯುವುದಕ್ಕೆ ಇಂಪಾರ್ಟೆನ್ಸ್ ಕೊಡುವುದಿಲ್ಲ. ಸಿನಿಮಾಗಳೊಂದಿಗೆ ಹೇಗೆ ಮೆಸೇಜ್ ಕೊಡುತ್ತಾರೆ ಅದೇ ರೀತಿ ತಿಳಿಸಬೇಕು ಎಂದು ನಾನು ಪ್ರತಿಕ್ರಿಯೇ ನೀಡಿದೆ. ಲೈಮ್‌ ಲೈಟ್‌ನಲ್ಲಿ ಇದ್ದಾಗ ನಾವು ಸರಿಯಾಗಿ ಇರಬೇಕು ಆದರೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಇರ್ತಾರೆ. ಕೆಲವೊಮ್ಮೆ ಮಿತಿಮೀರಿದಾಗ ಅರ್ಥವಾಗುತ್ತದೆ ಆಗ ಯಾರೂ ಮಾತನಾಡುವುದಿಲ್ಲ ಅದಕ್ಕೆ ನಾನೇ ಮಾತನಾಡಬೇಕು' ಎಂದು ಅನಸೂಯ ಮಾತನಾಡಿದ್ದಾರೆ.