Asianet Suvarna News Asianet Suvarna News

ಹಾವೇ ಸ್ವರ್ಗ ಎಂದು ಹೆಬ್ಬಾವನ್ನು ಎತ್ತಿ ಮುದ್ದಾಡಿದ್ದ ನಟಿ ಅನನ್ಯಾ ಪಾಂಡೆಗೆ ಶಾಕ್​! ಫೋಟೋ ಡಿಲೀಟ್​

ಹಾವೇ ಸ್ವರ್ಗ ಎಂದು ಹೆಬ್ಬಾವನ್ನು ಎತ್ತಿ ಮುದ್ದಾಡಿದ್ದ ನಟಿ ಅನನ್ಯಾ ಪಾಂಡೆಗೆ ಶಾಕ್​ ನೀಡಿದ ನೆಟ್ಟಿಗರು. ನಟಿ ಫೋಟೋ ಡಿಲೀಟ್​ ಮಾಡಿದ್ದಾರೆ.  ಆಗಿದ್ದೇನು? 
 

Ananya Panday DELETES Photos With Snakes From  Ambanis Kids Birthday Bash suc
Author
First Published Nov 26, 2023, 6:43 PM IST

ಸದಾ ಹಾಟ್​, ಬೋಲ್ಡ್​ ಲುಕ್​ನಿಂದಲೇ ಫೇಮಸ್​ ಆಗಿರೋ ನಟಿ ಅನನ್ಯಾ ಪಾಂಡೆ, ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿದ್ದಾರೆ.  ಆಗಾಗ್ಗೆ ತಮ್ಮ ಬೋಲ್ಡ್​ ಫೋಟೋಶೂಟ್​ಗಳನ್ನು ಶೇರ್​ ಮಾಡಿ ಹಲವು ಬಾರಿ ಟ್ರೋಲ್​ಗೆ ಒಳಗಾಗುವುದೂ ಇದೆ. ಅದೇನೇ ಇದ್ದರೂ, ಕೆಲ ದಿನಗಳ ಹಿಂದೆ  ಫ್ಯಾನ್ಸ್​ ಶಾಕ್​ ಆಗುವಂಥ ಫೋಟೋ ಶೇರ್​ ಮಾಡಿಕೊಂಡಿದ್ದರು. ಹೆಬ್ಬಾವಿನ  ಜೊತೆ ಫೋಟೋಗೆ ನಗು ನಗುತ್ತಾ ಪೋಸ್ ಕೊಟ್ಟಿದ್ದರು. ಮುಖೇಶ್ ಅಂಬಾನಿಯವರ ಮೊಮ್ಮಕ್ಕಳಾದ ಆದಿಯಾ ಮತ್ತು ಕೃಷ್ಣ ಅವರ ಮೊದಲ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಇಶಾ ಅಂಬಾನಿ ಮತ್ತು ಅವರ ಪತಿ ಆನಂದ್ ಪಿರಮಾಲ್ ಅವರು ಈ ಸಂದರ್ಭಕ್ಕಾಗಿ ಗ್ರ್ಯಾಂಡ್ ಕಂಟ್ರಿ ಫೇರ್-ಥೀಮ್ ಪಾರ್ಟಿಯನ್ನು ನಡೆಸಿದ್ದರು. ಈ ಪಾರ್ಟಿಯಲ್ಲಿ ಇಶಾ ಹಾವಿನ ಜೊತೆ ಪೋಸ್​ ಕೊಟ್ಟಿದ್ದರು. ತಮಗೆ ಹಾವು ಮತ್ತು ನಾಯಿ ಮರಿಗಳೆಂದರೆ ತುಂಬಾ ಇಷ್ಟ ಎಂದು ಬರೆದುಕೊಂಡಿರುವ ನಟಿ ಯಾವುದೇ ಭಯವಿಲ್ಲದೇ ಹಾವುಗಳೊಂದಿಗೆ ಪೋಸ್​ ಕೊಟ್ಟಿದ್ದರು. ಸ್ವರ್ಗದ ನನ್ನ ವ್ಯಾಖ್ಯಾನ ಎಂದರೆ ನಾಯಿಮರಿಗಳು ಮತ್ತು ಹಾವುಗಳು .. ನನ್ನ ಎರಡು ನೆಚ್ಚಿನ ಪ್ರಾಣಿಗಳು ಎಂದು ಬರೆದುಕೊಂಡಿದ್ದರು.  

ಇದರಿಂದ ಇಶಾ ಸಕತ್​ ಟ್ರೋಲ್​ಗೆ ಒಳಗಾಗಿದ್ದರು.  ಸ್ವಲ್ಪ ಹೆಚ್ಚೂ ಕಮ್ಮಿ ಆದ್ರೂ ಹಾವುಗಳಿಂದ ನೀವೇ ಸ್ವರ್ಗಕ್ಕೆ ಹೋಗಬೇಕಾಗತ್ತೆ ಎಚ್ಚರ ಕೊಟ್ಟಿದ್ದರು. ಪಾರ್ಟಿಯಲ್ಲಿ ಪಾಲ್ಗೊಂಡಿದ್ದ  ಶಾರುಖ್ ಖಾನ್ ಮತ್ತು ಮುಖೇಶ್ ಅಂಬಾನಿ ಅವರ ಮಗ ಅನಂತ್ ಅಂಬಾನಿ ಅವರು ಶಾರುಖ್‌ ಅವರಿಗೆ ಹಾವನ್ನು ಹಸ್ತಾತಂರಿಸಿರುವ ಫೋಟೊ ಕೂಡ ವೈರಲ್‌ ಆಗಿತ್ತು. ವನ್ಯ ಮೃಗಗಳ ಕಾಯ್ದೆ ಅಡಿ ಕೇಸು ದಾಖಲಿಸಬೇಕು ಎಂದು ಕೆಲವರು ಹೇಳಿದ್ದರೆ, ಹಾವನ್ನು ಹಿಂಸಿಸುವುದು ಸರಿಯಲ್ಲ ಎಂದು ಮತ್ತೆ ಕೆಲವರು ಕಿಡಿ ಕಾರಿದ್ದರು. ಸೆಲೆಬ್ರಿಟಿಗಳು ಎಂದ ಮಾತ್ರಕ್ಕೆ ವನ್ಯಮೃಗಗಳ ಜೊತೆ ಹೇಗಾದರೂ ವರ್ತಿಸಬಹುದು ಎಂದುಕೊಳ್ಳುತ್ತಾರೆ ಎಂದೆಲ್ಲಾ ಹೇಳಿದ್ದರು. ಹಾವಿನ ಜೊತೆ ಫೋಟೋ ನೋಡಿ ಎಷ್ಟು ಧೈರ್ಯ ಎಂದು ಹೇಳುತ್ತಾರೆ ಎಂದುಕೊಂಡಿದ್ದ ನಟಿ ಇಶಾಗೆ ಎಲ್ಲಾ ಕಮೆಂಟ್​ ನೋಡಿ ಶಾಕ್​ ಆಗಿದ್ದಂತೂ ನಿಜ. ಹಲವರು ಇವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದರ ಭಯದಿಂದ ಹೆದರಿ  ನಟಿ ಈಗ ಫೋಟೋ ಡಿಲೀಟ್​ ಮಾಡಿದ್ದಾರೆ. ನಟಿ ಫೋಟೋ ಹಾಕಿದ್ದರಿಂದ ಇದರ ವಿಡಿಯೋ ಕೂಡ ಸಕತ್​ ವೈರಲ್​ ಆಗುತ್ತಿದ್ದು, ಅಲ್ಲಿದ್ದವರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹ ವ್ಯಕ್ತವಾಗುತ್ತಿದೆ. 

ಹಾವೆಂದರೆ ನನಗೆ ಸ್ವರ್ಗ ಎಂದ ನಟಿ ಅನನ್ಯಾ ಪಾಂಡೆ ಹೆಬ್ಬಾವಿನ ಜೊತೆ ಪೋಸ್​: ಫ್ಯಾನ್ಸ್​ ಶಾಕ್​!

ಅಂದಹಾಗೆ, ಅನನ್ಯಾ ಪಾಂಡೆ ಬಾಲಿವುಡ್ ಹಿರಿಯ ನಟ ಚಂಕಿ ಪಾಂಡೆ ಮಗಳಾಗಿದ್ದು, ಸ್ಟಾರ್ ಕಿಡ್ ಆಗಿ ಬಾಲಿವುಡ್ ಗೆ ಎಂಟ್ರಿ ಕೊಟ್ಟವರು. ಕಡಿಮೆ ಸಮಯದಲ್ಲಿಯೇ ನಟಿ ಫೇಮಸ್ ಆದವರು.  ನೆಪೊಟಿಸಂ ಪ್ರಾಡಕ್ಟ್ ಆಗಿರುವ ಕಾರಣಕ್ಕೆ ಸಾಕಷ್ಟು ಟೀಕೆಗೆ ಗುರಿಯಾಗುತ್ತಿದ್ದರೂ ಸಹ ಬಾಲಿವುಡ್​ನಲ್ಲಿ ಅನನ್ಯಾಗೆ ಅವಕಾಶಗಳಿಗೇನೂ ಕೊರತೆ ಇಲ್ಲ.  ಕರಣ್ ಜೋಹರ್ ಸೇರಿದಂತೆ ಹಲವು ಗಾಡ್​ಫಾದರ್​ಗಳು ಅನನ್ಯಾಗೆ ಇರುವುದೇ ಇದಕ್ಕೆ ಕಾರಣ ಎನ್ನುವ ಮಾತುಗಳೂ ಇವೆ. ಇವರು ಸದ್ಯ ಅವರು ನಟ ಆದಿತ್ಯ ರಾಯ್ ಕಪೂರ್ (Aditya Roy Kapur) ಸಂಬಂಧದಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.   ಇಬ್ಬರೂ ಇತ್ತೀಚೆಗೆ ಡಿನ್ನರ್ ಡೇಟ್‌ನಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ, ಆದಿತ್ಯ ಮತ್ತು ಅನನ್ಯಾ ಇಬ್ಬರೂ ಕಪ್ಪು ಬಟ್ಟೆಯಲ್ಲಿ ಕಾಣಿಸಿಕೊಂಡರು. ಇದರ  ವಿಡಿಯೋ  ಹೊರಬಿದ್ದಿದ್ದು, ಇಬ್ಬರೂ  ಸಂಬಂಧದಲ್ಲಿದ್ದಾರೆ ಎನ್ನಲಾಗಿದೆ.  ಈಚೆಗೆ ಇವರು  ವಿಜಯ್ ದೇವರಕೊಂಡ ಜೊತೆ ಲೈಗರ್ ಸಿನಿಮಾದಲ್ಲಿ ನಟಿಸಿದ್ದರು. ಸೌತ್ ಸಿನಿಮಾ ಇಂಡಸ್ಟ್ರಿಯ ಅದೃಷ್ಟ ಪರೀಕ್ಷೆಯಲ್ಲೂ ಅನನ್ಯಾ ಪಾಂಡೆ ಫೇಲ್ ಆಗಿದ್ದು, ಬೋಲ್ಡ್​ ಫೋಟೋಶೂಟ್​ ಮಾಡಿಸುತ್ತಾ, ಫೇಮಸ್​ ಆಗುತ್ತಿದ್ದಾರೆ.

ಮೊನ್ನೆಯಷ್ಟೇ  ಅನನ್ಯಾ ಹೊಸದೊಂದು ಐಶಾರಾಮಿ ಮನೆ ಖರೀದಿ ಮಾಡಿದ್ದಾರೆ. ದೀಪಾವಳಿ ಅಥವಾ ಮಹಾರಾಷ್ಟ್ರದಲ್ಲಿ ಕರೆಯಲಾಗುವ ದಂತೇರಸ್ ಹಬ್ಬಕ್ಕೆ ಮನೆಯ ಗೃಹ ಪ್ರವೇಶವನ್ನೂ ಮಾಡಿದ್ದಾರೆ. ನನ್ನ ಹೊಸ ಮನೆ. ನನ್ನ ಹೊಸ ಪ್ರಾರಂಭಕ್ಕೆ ನಿಮ್ಮ ಪ್ರೀತಿ ಮತ್ತು ಧನಾತ್ಮಕ ಹಾರೈಕೆಗಳು ಬೇಕು. ಎಲ್ಲರಿಗೂ ದಂತೇರಸ್ ಹಬ್ಬದ ಶುಭಾಶಯಗಳು ಎನ್ನುವ ಮೂಲಕ ಸೋಷಿಯಲ್​ ಮೀಡಿಯಾದಲ್ಲಿ ಹೊಸ ಮನೆಯ ಪರಿಚಯ ಮಾಡಿಸಿದ್ದರು. 

ಉದ್ಯಮಿ ಲಲಿತ್ ಮೋದಿ ಜೊತೆ ಸುಷ್ಮಿತಾ ಸಂಬಂಧ? ಕೊನೆಗೂ ಮೌನ ಮುರಿದ ನಟಿ ಹೇಳಿದ್ದೇನು?

 

Follow Us:
Download App:
  • android
  • ios