ಇತ್ತೀಚೆಗಷ್ಟೇ ಅದ್ಧೂರಿ ಮದುವೆಯಾಗಿರುವ ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಜೋಡಿ ಪ್ಯಾರಿಸ್​ನಲ್ಲಿ ವಿಹಾರದಲ್ಲಿದ್ದರೆ ಟ್ರೋಲಿಗರು ಬಾಯಿ ಮುಚ್ಚುತ್ತಿಲ್ಲವಲ್ಲ! 

 ಉದ್ಯಮಿ ಮುಕೇಶ್ ಅಂಬಾನಿ ಮತ್ತು ನೀತಾ ದಂಪತಿಯ ಪುತ್ರ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್​ ಮದುವೆಯ ವಿಷಯ ಕಳೆದ ಕೆಲವು ತಿಂಗಳುಗಳಿಂದ ಸಕತ್​ ಸದ್ದು ಮಾಡುತ್ತಿತ್ತು. ಇದೀಗ ಮದುವೆ ವಿಷಯ ಸ್ವಲ್ಪ ತಣ್ಣಗಾಗಿದೆ. ಇದೇ 12ರಂದು ಈ ಜೋಡಿಯ ಮದುವೆ ನಡೆದಿದ್ದು, ಇವರಿಬ್ಬರೂ ಮದುವೆ ಲೈಫ್​ ಎಂಜಾಯ್​ ಮಾಡುತ್ತಿದ್ದಾರೆ. ದಿನಕ್ಕೊಂದರಂತೆ ತಿಂಗಳುಗಟ್ಟಲೆ ಮದುವೆ ಕಾರ್ಯಕ್ರಮಗಳು ಜರುಗಿದ್ದವು. ತಿಂಗಳುಗಳ ಕಾಲ ನಡೆದ ಈ ಮದುವೆಗೆ ಸಹಸ್ರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದ್ದು, ವಿಶ್ವದಲ್ಲಿಯೇ ಅತ್ಯಂತ ದುಬಾರಿ ಮದುವೆ ಎನಿಸಿಕೊಂಡಿದೆ ಎನ್ನಲಾಗುತ್ತಿದೆ. ಮದುವೆ ಸಮಯದಲ್ಲಿ 50 ಕುಟುಂಬಗಳಿಗೆ ಸಾಮೂಹಿಕ ವಿವಾಹ ಸಮಾರಂಭ ಏರ್ಪಡಿಸುವ ಮೂಲಕ ಅಂಬಾನಿ ಕುಟುಂಬ ಶ್ಲಾಘನೆಗೆ ಪಾತ್ರವಾಗಿದೆ. ಇಲ್ಲಿ ಭಾಗವಹಿಸಿರುವ ಪ್ರತಿ ಜೋಡಿಗೂ ಮಂಗಳಸೂತ್ರ, ಮದುವೆಯ ಉಂಗುರಗಳು, ಮೂಗುತಿ ಸೇರಿ ಚಿನ್ನಾಭರಣ, ಕಾಲುಂಗುರ, ಕಾಲ್ಗೆಜ್ಜೆಯಂಥ ಬೆಳ್ಳಿ ಆಭರಣ ಸೇರಿದಂತೆ ಪ್ರತಿ ವಧುವಿಗೆ ರೂ. ಒಂದು ಲಕ್ಷ ನಗದನ್ನು ನೀಡುವ ಮೂಲಕ ಕುಟುಂಬ ಶ್ಲಾಘನಾರ್ಹ ಕಾರ್ಯ ಮಾಡಿದೆ. 

ಈಗ ಎಲ್ಲವೂ ಸುಸೂತ್ರವಾಗಿ ಮುಗಿದಿದ್ದು, ನೂತನ ವಧು-ವರರು ಪ್ಯಾರೀಸ್​ನಲ್ಲಿ ಜಾಲಿ ಮೂಡ್​ನಲ್ಲಿ ಇದ್ದು, ಇದರ ವಿಡಿಯೋ ವೈರಲ್​ ಆಗಿದೆ. ಇದರಲ್ಲಿ ಅನಂತ್​ ಮತ್ತು ರಾಧಿಕಾ ಕಾರಿನತ್ತ ನಡೆದುಕೊಂಡು ಹೋಗುವುದನ್ನು ನೋಡಬಹುದು. ಅನಂತ್​ ಅವರಿಗೆ ಸ್ವಲ್ಪ ಆರೋಗ್ಯ ಸಮಸ್ಯೆ ಇರುವ ಕಾರಣ ನಿಧಾನವಾಗಿ ನಡೆದುಕೊಂಡು ಹೋಗುತ್ತಿದ್ದರೆ, ರಾಧಿಕಾ ಅವರನ್ನು ಬಿಟ್ಟು ಸ್ವಲ್ಪ ಮುಂದೆ ಹೋಗಿದ್ದಾರೆ. ಇಂಥ ದೃಶ್ಯಗಳು ಸಿಗುವುದನ್ನೇ ಕಾಯುತ್ತಿರುವ ಟ್ರೋಲಿಗರು ರಾಧಿಕಾಗೆ ಪತಿಯ ಜೊತೆ ಹೋಗುವುದು ನಾಚಿಕೆ, ಅದಕ್ಕೆ ಪತಿಯನ್ನು ಬಿಟ್ಟು ಮುಂದೆ ಹೋಗುತ್ತಿದ್ದಾಳೆ ಎನ್ನುತ್ತಿದ್ದಾರೆ. ಇನ್ನು ಜಿಯೋ ಗ್ರಾಹಕರಂತೂ ಜಿಯೋ ರೀಚಾರ್ಜ್​ ಬೆಲೆ ಹೆಚ್ಚು ಮಾಡಿದ ದುಡ್ಡಿನಿಂದಲೇ ಈ ಮದುವೆ ನಡೆದಿದೆ ಎನ್ನುವ ರೀತಿಯಲ್ಲಿ ಥಹರೇವಾರಿ ಕಮೆಂಟ್​ಗಳನ್ನು ಹಾಕುವುದನ್ನು ಮುಂದುವರೆಸಿದ್ದಾರೆ. 

ಮಾಧುರಿ ಮದ್ವೆ ವಿಷ್ಯ ತಿಳಿದಾಗ ನನ್ನಪ್ಪ ಬಾತ್‌ರೂಮ್‌ನಲ್ಲಿ.... ಆ ದಿನ ನೆನೆದ ದೀಪಿಕಾ ಪಡುಕೋಣೆ

ಜಿಯೋ ಬೆಲೆ ಹೆಚ್ಚು ಮಾಡುತ್ತಿದ್ದಂತೆಯೇ ಹಲವರು ಹಿಂದಿನ ದಿನವೇ ವರ್ಷದ ರೀಚಾರ್ಜ್​ ಮಾಡಿಸಿಕೊಂಡಿದ್ದಾರೆ. ಈ ಮೂಲಕ 500 ರೂಪಾಯಿಗೂ ಹೆಚ್ಚು ದುಡ್ಡು ಉಳಿಸಿಕೊಂಡಿದ್ದಾರೆ. ಅದಕ್ಕಾಗಿ ಲಕ್ಷಾಂತರ ಮಂದಿ ಇದೇ ರೀತಿಮಾಡಿದ್ದು, ಅವರು ರೀಚಾರ್ಜ್​ ಮಾಡಿಸಿಕೊಂಡ ಖುಷಿ ಇವರ ಫ್ಯಾಮಿಲಿಯ ಮುಖದಲ್ಲಿ ಕಾಣಿಸುತ್ತಿದೆ. ಅದಕ್ಕಾಗಿ ಎಲ್ಲರೂ ಖುಷಿಯಿಂದ ಡ್ಯಾನ್ಸ್​ ಮಾಡುತ್ತಿದ್ದಾರೆ ಎಂದು ಈ ಹಿಂದೆ ಹಲವರು ಮದುವೆಯ ಸಂಭ್ರಮದಲ್ಲಿ ಹೇಳಿದ್ದರು. ಈಗಲೂ ಇವರು ಪ್ಯಾರೀಸ್​ನಲ್ಲಿ ಓಡಾಡಿಕೊಂಡಿದ್ದರೆ ಇದು ನಾವೇ ಕೊಟ್ಟ ದುಡ್ಡು ಎನ್ನುತ್ತಿರುವ ಕೆಲವು ಟ್ರೋಲಿಗರು ಕೂಡಲೇ ಎಲ್ಲರೂ ಬಿಎಸ್​ಎನ್​ಎಲ್​ಗೆ ಪೋರ್ಟ್​ ಆಗಿ ಎಂದು ಕಮೆಂಟ್​ ಮಾಡುತ್ತಿದ್ದಾರೆ. ಹೀಗೆಯೇ ಬಿಟ್ಟರೆ, ಇವರ ಮಗುವಿನ ನಾಮಕರಣವನ್ನೂ ನಮ್ಮದೇ ದುಡ್ಡಲ್ಲಿ ಮಾಡಿ ಮುಗಿಸುತ್ತಾರೆ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಇನ್ನು ಕೆಲವರು ರಾಧಿಕಾ ಮುಖದಲ್ಲಿ ನವವಧುವಿನ ಕಳೆಯೇ ಇಲ್ಲ, ಈಗಲೇ ಜೀವನ ಬೇಸರ ಆದ ರೀತಿಯಲ್ಲಿ ಕಾಣಿಸುತ್ತಿದೆ ಎಂದೂ ಕಾಲೆಳೆಯುತ್ತಿದ್ದಾರೆ. ಒಟ್ಟಿನಲ್ಲಿ ಅನಂತ್​ ಮತ್ತು ರಾಧಿಕಾ ದಂಪತಿ ಕುರಿತು ನೆಟ್ಟಿಗರು ಕಾಲೆಳೆಯುವುದನ್ನೇ ಕಾಯುತ್ತಿದ್ದಾರೆ ಎನ್ನುವುದು ಪ್ರತಿ ವಿಡಿಯೋ ವೈರಲ್​ ಆದಾಗಲೂ ಕಾಣಿಸುತ್ತಿದೆ.

 ಹೀಗೆ ಕಾಲೆಳೆಯುವವರನ್ನು ತರಾಟೆಗೆ ತೆಗೆದುಕೊಂಡು ಕೆಲವರು ಕಮೆಂಟ್​ ಮಾಡಿದ್ದಾರೆ. ಶ್ರೀಮಂತರ ಮನೆಯಲ್ಲಿ ಹುಟ್ಟುವುದೇ ಅಪರಾಧ ಎನ್ನುವ ರೀತಿ ವರ್ತಿಸುವುದು ನಾಚಿಕೆಗೇಡು. ಅನಂತ್​ ಅವರಿಗೆ ಅನಾರೋಗ್ಯದಿಂದ ಹೀಗಾಗಿದೆ. ಅವರದ್ದು ಹಲವು ವರ್ಷಗಳ ಪ್ರೀತಿ. ಅದನ್ನು ಗೌರವಿಸಿ. ಅಷ್ಟೇ ಅಲ್ಲದೇ ಅನಂತ್​ ಅವರು ಇದಾಗಲೇ ಎಷ್ಟೋ ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅದನ್ನು ಗೌರವಿಸಿ. ಅದನ್ನು ಬಿಟ್ಟು ಇಲ್ಲಸಲ್ಲದ ಕಮೆಂಟ್ಸ್ ಹಾಕುತ್ತಾ ಇರಬೇಡಿ ಎಂದು ಕಿಡಿ ಕಾರಿದ್ದಾರೆ. ಇನ್ನು ಕೆಲವರು ನೀವು ರೀಚಾರ್ಜ್​ ಮಾಡಿರುವ ಜಿಯೋದಿಂದ ಅವರ ಒಂದು ಹೊತ್ತಿನ ಊಟಕ್ಕೂ ಆಗುವುದಿಲ್ಲ. ಜಿಯೋ ಮಾತ್ರವಲ್ಲದೇ ಏರ್​ಟೆಲ್​ ಇದಕ್ಕಿಂತ ಹೆಚ್ಚಿನ ಬೆಲೆ ಏರಿಕೆ ಮಾಡಿದೆ. ಜಿಯೋ ಆರಂಭದಲ್ಲಿ ಒಂದು ವರ್ಷ ಉಚಿತ ಕೊಡುಗೆ ನೀಡಿದೆ ಎನ್ನುವುದನ್ನು ಮರೆಯಬೇಡಿ. ಅನಗತ್ಯವಾಗಿ ಕಮೆಂಟ್​ ಮಾಡುವುದನ್ನು ಬಿಡಿ, ನಿಮಗೆ ಸಿರಿವಂತಿಕೆ ಸಿಕ್ಕಿಲ್ಲ ಎಂದ ಮಾತ್ರಕ್ಕೆ ಶ್ರೀಮಂತರ ಮಕ್ಕಳನ್ನು ಜರೆಯುವುದನ್ನು ನಿಲ್ಲಿಸಿ ಎಂದಿದ್ದಾರೆ. ಮುಕೇಶ್​ ಅವರು ಈ ಹಂತಕ್ಕೆ ಬರಲು ಅವರು ಬಹಳ ಶ್ರಮ ಪಟ್ಟಿದ್ದಾರೆ. ಈಗ ಶ್ರೀಮಂತರಾಗಿದ್ದಾರೆ ಎಂದ ಮಾತ್ರಕ್ಕೆ ತಲೆಗೊಂದರಂತೆ ಮಾತನಾಡುವುದನ್ನು ನಿಲ್ಲಿಸಿ ಎಂದೂ ನೆಟ್ಟಿಗರೊಬ್ಬರು ನೆಗೆಟಿವ್​ ಕಮೆಂಟ್​ ಹಾಕುತ್ತಿರುವವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 

ಸಂಸತ್ತಿಗೆ ಬರುವ ಮೊದಲು ರಾಹುಲ್​ ಗಾಂಧಿ ಪರೀಕ್ಷೆ ನಡೆಸಿ ಎಂದ ಕಂಗನಾ! ಏನಿದು ಹೊಸ ವರಸೆ?

View post on Instagram