ಪನಾಮಾದಲ್ಲಿ ಹನಿಮೂನ್‌ ಮಾಡುತ್ತಿರುವ ಅನಂತ್‌ ಅಂಬಾನಿ- ರಾಧಿಕಾ ಮರ್ಚಂಟ್‌ ಅಲ್ಲಿನ ಅಧ್ಯಕ್ಷರನ್ನು ಭೇಟಿಯಾಗಿದ್ದಾರೆ. ಈ ನಡುವೆ ಅನಂತ್‌ ಅಂಬಾನಿ ಸ್ವಲ್ಪ ಸುಸ್ತಾದಂತೆ ಕಾಣಿಸಿದೆ. 

ಅನಂತ್ ಅಂಬಾನಿ- ರಾಧಿಕಾ ಮರ್ಚಂಟ್‌ ಹನಿಮೂನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅನಂತ್-‌ ರಾಧಿಕಾ ಹನಿಮೂನ್‌ಗೆ ಆರಿಸಿಕೊಂಡ ತಾಣಗಳೂ ವಿಶಿಷ್ಟ. ಎಲ್ಲರೂ ಮಾಲ್ದೀವ್ಸ್‌, ಸ್ವಿಜರ್‌ಲ್ಯಾಂಡ್‌ ಹೋದರೆ ಇವರು ದಕ್ಷಿಣ ಅಮೆರಿಕದ ದೇಶಗಳಿಗೆ ಹೋಗಿದ್ದಾರೆ. ಇದೀಗ ಇಬ್ಬರೂ ಪನಾಮಾದಲ್ಲಿ ಇದ್ದಾರೆ. ಈ ಜೋಡಿ ಹನಿಮೂನ್‌ ಮತ್ತು ಬ್ಯುಸಿನೆಸ್‌ ಎರಡನ್ನೂ ಬೆರೆಸಿರುವಂತೆ ಕಾಣುತ್ತಿದೆ. ಪನಾಮಾ ದೇಶದಲ್ಲಿ ಆ ದೇಶದ ಅಧ್ಯಕ್ಷರನ್ನೇ ಇಬ್ಬರೂ ಭೇಟಿಯಾಗಿದ್ದಾರೆ. ಇದಕ್ಕೆ ಕಾರಣ ಬಹುಶಃ ಕುಬೇರ ಅಪ್ಪ ಮುಕೇಶ್‌ ಅಂಬಾನಿಯ ಕಾಂಟ್ಯಾಕ್ಟ್‌ ಮತ್ತು ಬ್ಯುಸಿನೆಸ್‌ ಹಿತಾಸಕ್ತಿ ಇರಬಹುದು. ಇಲ್ಲದಿದ್ದರೆ ಹನಿಮೂನ್‌ ಟ್ರಿಪ್‌ನಲ್ಲಿ ದೇಶದ ಅಧ್ಯಕ್ಷರನ್ನು ಯಾರು ಭೇಟಿಯಾಗುತ್ತಾರೆ ಹೇಳಿ! ಬಹುಶಃ ಅಂಬಾನಿ ಫ್ಯಾಮಿಲಿಯ ಒಂದು ವರ್ಷದ ಬ್ಯುಸಿನೆಸ್‌ನ ಲಾಭದ ಪ್ರಮಾಣವೇ ಪನಾಮಾ ದೇಶದ ಬಜೆಟ್‌ನ ಎರಡು ಪಾಲು ಇರಬಹುದು!

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಪನಾಮ ಅಧ್ಯಕ್ಷ ಜೋಸ್ ರೌಲ್ ಮುಲಿನೊ ಮತ್ತು ಅವರ ಸಂಗಾತಿ ಮಾರಿಸೆಲ್ ಕೊಹೆನ್ ಡಿ ಮುಲಿನೊ ಅವರನ್ನು ಪನಾಮದಲ್ಲಿ ಹನಿಮೂನ್ ಸಂದರ್ಭ ಭೇಟಿಯಾದರು. ಅನಂತ್ ಮತ್ತು ರಾಧಿಕಾ ಅವರ ಈ ಭೇಟಿಯ ಚಿತ್ರವನ್ನು ಇವರ ಇನ್‌ಸ್ಟಾಗ್ರಾಂ ಫ್ಯಾನ್‌ಪೇಜ್ ಹಂಚಿಕೊಂಡಿದೆ. ಈ ಸಂದರ್ಭಕ್ಕಾಗಿ ಕಪ್ಪು-ಬಿಳುಪು ಡ್ರೆಸ್‌ಗಳಲ್ಲಿ ರಾಧಿಕಾ ಮತ್ತು ಅನಂತ್ ಮಿಂಚಿದ್ದಾರೆ.

ಸೆಲ್ಫಿ ವೇಳೆ ಅನಂತ್ ಅಂಬಾನಿ ಹೆಗಲ ಮೇಲೆ ಕೈಯಿಟ್ಟ ಅಭಿಮಾನಿ, ಬಾಡಿಗಾರ್ಡ್ ಆ್ಯಕ್ಷನ್ ವೈರಲ್!

ರಾಧಿಕಾ ಮಾತ್ರ ಎಂದಿನಂತೆ ಲವಲವಿಕೆಯಿಂದ ಕಾಣಿಸಿಕೊಂಡರು. ರಾಧಿಕಾ ಈ ಸಂದರ್ಭಕ್ಕಾಗಿ ಕೋ-ಆರ್ಡ್ ಬ್ಲ್ಯಾಕ್ ಲೇಸ್-ಕಸೂತಿ ಡ್ರೆಸ್‌ ಆಯ್ಕೆ ಮಾಡಿದ್ದರು. ಮ್ಯಾಚಿಂಗ್‌ ಆಗುವ ಸ್ಕರ್ಟ್ ಮತ್ತು ಬ್ಲೌಸ್ ಸೆಟ್ ಅನ್ನು ಧರಿಸಿದ್ದಳು. ಲೇಸ್ ಕಸೂತಿ, ಮುಂಭಾಗದ ಬಟನ್ ಮತ್ತು ಸೂಕ್ತ ಫಿಟ್ ಅನ್ನು ಒಳಗೊಂಡಿರುವ ಹೊಂದಾಣಿಕೆಯ ಶೀರ್ ಕಾರ್ಡಿಜನ್‌ ಸ್ಟೈಲ್‌ ಇತ್ತು. ಸ್ಕರ್ಟ್ ಮ್ಯಾಕ್ಸಿ ಉದ್ದ, ನೆರಿಗೆಯ ಸಿಲೂಯೆಟ್ ಮತ್ತು ಮಧ್ಯ-ಎತ್ತರದ ಸೊಂಟವನ್ನು ಹೊಂದಿತ್ತು. ಜೊತೆಗೆ ಹರ್ಮ್ಸ್ ಮಿನಿ ಬರ್ಕಿನ್ ಬ್ರಾಂಡ್‌ನ ಬ್ಯಾಗ್ ಧರಿಸಿದ್ದಳು. ಕೇಶ ವಿನ್ಯಾಸ, ಸೊಗಸಾದ ಸರಪಳಿ, ಕಪ್ಪು ಬ್ಯಾಲೆರಿನಾಗಳು, ಕಿವಿಯೋಲೆಗಳು ಮತ್ತು ಮೇಕಪ್ ಇಲ್ಲದ ಲುಕ್‌ ಹೊಂದಿದ್ದಳು.

ಆದರೆ ಅನಂತ್‌ ಯಾಕೋ ಸ್ವಲ್ಪ ಸುಸ್ತಾದಂತೆ ಕಾಣಿಸಿತು. ಪನಾಮಾ ಅಧ್ಯಕ್ಷರ ಜೊತೆಗೆ ಇದ್ದರೂ ಒಂದು ಲವಲವಿಕೆ ಕಾಣಿಸಲಿಲ್ಲ. ಬಹುಶಃ ಹನಿಮೂನ್‌ ಮದುಮಗನನ್ನು ಬಳಲಿಸಿರಬಹುದು. ಅಥವಾ ಅಸ್ತಮಾ ಸಮಸ್ಯೆಯಿಂದ ಕಷ್ಟವಾಗಿರಬಹುದು. ಅನಂತ್ ಬಗ್ಗೆ ಹೇಳುವುದಾದರೆ, ಅಧ್ಯಕ್ಷರ ಭೇಟಿಯ ವೇಳೆ ಈತ ಪೂರ್ಣ ಉದ್ದದ ತೋಳು ಮತ್ತು ನಾಚ್ ಕಾಲರ್ ಅನ್ನು ಒಳಗೊಂಡಿರುವ ಪ್ರಿಂಟೆಡ್‌ ಬಿಳಿ ಮತ್ತು ಕಪ್ಪು ಬಟನ್-ಡೌನ್ ಶರ್ಟ್ ಧರಿಸಿದ್ದರು. ಕಪ್ಪು ಫ್ರೀ ಪ್ಯಾಂಟ್ ಮತ್ತು ಸ್ನೀಕರ್ಸ್‌ನೊಂದಿಗೆ ಅನಂತ್‌ ಮಿಂಚಿದರು.

View post on Instagram

ಸತ್ಯ ಸೀರಿಯಲ್​ ಮುಗಿದ ಬೆನ್ನಲ್ಲೇ ರಿಯಲ್​ ಪತಿ ಜೊತೆ ಗೌತಮಿ ಜಾಲಿ ಮೂಡ್​- ವಿಡಿಯೋ ವೈರಲ್​

ಅನಂತ್‌ ಅಸ್ತಮಾ ರೋಗಿ, ಈಗಲೂ ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಧಿಕಾ ಈ ವಿಷಯದಲ್ಲಿ ಅನಂತ್‌ ಜೊತೆಗೆ ಇದ್ದಾಳೆ. 2017ರಲ್ಲಿ ನೀಡಿದ ಒಂದು ಸಂದರ್ಶನದಲ್ಲಿ, ನೀತಾ ಅಂಬಾನಿ ಅವರು ತಮ್ಮ ಮಗ ಅನಂತ್ ತೀವ್ರವಾದ ಆಸ್ತಮಾದಿಂದ ಗಮನಾರ್ಹವಾದ ಆರೋಗ್ಯ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಹಂಚಿಕೊಂಡಿದ್ದರು. ಇದು ದೀರ್ಘಕಾಲದ ಸ್ಟಿರಾಯ್ಡ್ ಬಳಕೆಯ ಪರಿಣಾಮ ಆಗಿತ್ತು. ದುರದೃಷ್ಟವಶಾತ್ ಈ ಚಿಕಿತ್ಸಾ ಕ್ರಮವು ಅನಂತ್‌ನ ದೇಹದಲ್ಲಿ ಗಣನೀಯ ತೂಕ ಹೆಚ್ಚಳಕ್ಕೆ ಕಾರಣವಾಯಿತು. ಅವನ ಸ್ಥಿತಿಯನ್ನು ಉಲ್ಬಣಗೊಳಿಸಿತು. ವರದಿಗಳ ಪ್ರಕಾರ ಅನಂತ್ ತೂಕ ಸುಮಾರು 208 ಕೆಜಿ ತಲುಪಿತ್ತು. ವೈದ್ಯಕೀಯ ಚಿಕಿತ್ಸೆಗಳು ಮತ್ತು ಅವುಗಳ ಅನಪೇಕ್ಷಿತ ಪರಿಣಾಮಗಳು ಸಂಕೀರ್ಣವಾಗಿದ್ದವು. ಇದು ಅಂಬಾನಿ ಕುಟುಂಬದ ಸವಾಲುಗಳಲ್ಲಿ ಒಂದಾಗಿತ್ತು. ಬಳಿಕ ಅನಂತ್‌ ಸುಧಾರಿಸಿಕೊಂಡಿದ್ದ.

ಮಾಡೆಲ್​ ಫ್ಲರ್ಟ್​ ಮಾಡ್ತಿದ್ದಂತೆ ಕಂಟ್ರೋಲ್​ ಕಳಕೊಂಡ ಸಿದ್ಧಾರ್ಥ್​? ಪತ್ನಿ ಕಿಯಾರಾಗೆ ಸಾರಿ ಕೇಳಿದ ರೂಪದರ್ಶಿ!