ಸೆಲ್ಫಿ ವೇಳೆ ಅನಂತ್ ಅಂಬಾನಿ ಹೆಗಲ ಮೇಲೆ ಕೈಯಿಟ್ಟ ಅಭಿಮಾನಿ, ಬಾಡಿಗಾರ್ಡ್ ಆ್ಯಕ್ಷನ್ ವೈರಲ್!
ನವ ಜೋಡಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ಯಾರಿಸ್‌ಗೆ ಭೇಟಿ ನೀಡಿದ್ದಾರೆ. ಈ ವೇಳೆ ಅಂಬಾನಿ ಜೊತೆ ಸೆಲ್ಫಿ ತೆಗೆಯಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಅನಂತ್ ಹೆಗಲ ಮೇಲೆ ಕೈಯಿಟ್ಟು ಸೆಲ್ಫಿ ತೆಗೆಯುತ್ತಿದ್ದಂತೆ ಬಾಡಿಗಾರ್ಡ್ ಮಾಡಿದ್ದೇನು? ಈ ವಿಡಿಯೋ ವೈರಲ್ ಆಗಿದೆ.
ಪ್ಯಾರಿಸ್(ಆ.04) ಅದ್ಧೂರಿ ಮದುವೆ ಬಳಿಕ ಇದೀಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ಯಾರಿಸ್‌ಗೆ ಭೇಟಿ ನೀಡಿದ್ದಾರೆ. ಪ್ಯಾರಿಸ್‌ನ ಸುಂದರ ತಾಣಗಳಿಗೆ ಮಾತ್ರವಲ್ಲ, ಪ್ಯಾರಿಸ್ ಒಲಿಂಪಿಕ್ಸ್‌ಗೂ ಈ ಜೋಡಿ ಭೇಟಿ ನೀಡಿದೆ. ಪ್ಯಾರಿಸ್‌ನಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಕಾರಿನಿಂದ ಇಳಿಯುತ್ತಿದ್ದಂತೆ ಅಭಿಮಾನಿಗಳು ಸುತ್ತಿಕೊಂಡಿದ್ದಾರೆ. ಈ ವೇಳೆ ಅತೀ ಉತ್ಸಾಹದ ಅಭಿಮಾನಿ ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ. ಆದರೆ ಸೆಲ್ಫಿ ತೆಗೆಯುವಾಗ ಅಂಬಾನಿ ಹೆಗಲ ಮೇಲೆ ಕೈಹಾಕಿದ್ದಾನೆ. ಆದರೆ ತಕ್ಷಣ ಕಾರ್ಯಪ್ರವೃತ್ತರಾದ ಬಾಡಿಗಾರ್ಡ್, ಅಭಿಮಾನಿಯ ಕೈಗಳನ್ನು ತೆಗೆದು ರಕ್ಷಣೆ ನೀಡಿದ ವಿಡಿಯೋ ವೈರಲ್ ಆಗಿದೆ.
ಕಾರಿನಿಂದ ಇಳಿಯುತ್ತಿದ್ದಂತೆ ಅನಂತ್ ಅಂಬಾನಿ ಅಭಿಮಾನಿಗಳಿಗೆ ಹೆಲೋ ಎಂದು ವಿಶ್ ಮಾಡಿದ್ದಾರೆ. ಇದೇ ವೇಳೆ ಅಭಿಮಾನಿಗಳು ಸುತ್ತುವರೆದಿದ್ದಾರೆ. ಈ ಪೈಕಿ ಹಲವರು ಫೋಟೋಗಾಗಿ ಮುಗಿಬಿದ್ದಿದ್ದಾರೆ. ಒರ್ವ ಸೆಲ್ಫಿ ಕ್ಲಿಕ್ಕಿಸಲು ಮುಂದಾಗಿದ್ದಾನೆ. ಅಭಿಮಾನಿ ಜೊತೆ ಅನಂತ್ ಅಂಬಾನಿ ಫೋಟೋಗೆ ಫೋಸ್ ನೀಡಿದ್ದಾರೆ. ಆದರೆ ಫೋಟೋ ತೆಗೆಯುವಾಗ ಅಭಿಮಾನಿ, ಅನಂತ್ ಅಂಬಾನಿ ಹೆಗಲ ಮೇಲೆ ಕೈಹಾಕಿ ನಿಂತಿದ್ದಾನೆ.
300 ಕೋಟಿ ರೂ ಜೆಟ್, 40 ಕೋಟಿ ಮನೆ; ದಿಗ್ಗಜರಿಂದ ಅನಂತ್ ರಾಧಿಕಾಗೆ ಸಿಕ್ಕಿದೆ ಭರ್ಜರಿ ಗಿಫ್ಟ್!
ಅನಂತ್ ಅಂಬಾನಿ ಹಿಂಭಾಗದಲ್ಲಿದ್ದ ಬಾಡಿಗಾರ್ಡ್ ತಕ್ಷಣ ಅಭಿಮಾನಿಯ ಕೈಗಳನ್ನು ಹೆಗಲ ಮೇಲಿಂದ ತೆಗೆದಿದ್ದಾರೆ. ಅನಂತ್ ಅಂಬಾನಿ ಸೇರಿದಂತೆ ಉದ್ಯಮಿಗಳು, ಸೆಲೆಬ್ರೆಟಿಗಳು, ಕ್ರೀಡಾಪಟುಗಳ ಬಾಡಿಗಾರ್ಡ್ ಅತ್ಯಂತ ಸವಾಲಿನ ಕೆಲಸ. ಆದರೆ ನಿಯಮ ಮೀರಿದರೆ ಬಾಡಿಗಾರ್ಡ್ ತಕ್ಷಣ ಪ್ರತಿಕ್ರಿಯಿಸುತ್ತಾರೆ. ಕಠಿಣ ಕ್ರಮ ಕೈಗೊಳ್ಳುತ್ತಾರೆ. ಯಾವುದೇ ಸಂದರ್ಭದಲ್ಲೂ ರಕ್ಷಣೆಗೆ ಕಟಿಬದ್ಧವಾಗಿ ನಿಂತಿರುತ್ತಾರೆ. ಇದೀಗ ಅನಂತ್ ಅಂಬಾನಿ ಬಾಡಿಗಾರ್ಡ್ ಕ್ಷಿಪ್ರ ಆ್ಯಕ್ಷನ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡು ಮುಂದೆ ಸಾಗಿದ್ದಾರೆ. ಇತ್ತ ಅನಂತ್ ಅಂಬಾನಿಗೆ ಅಭಿಮಾನಿಯೊಬ್ಬ, ನೀವು ಫ್ರೆಂಚ್ ಮಾತನಾಡುತ್ತೀರಾ ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ಇಲ್ಲ ಎಂದು ಉತ್ತರಿಸಿದ್ದಾರೆ. ಆದರೆ ಬೊನ್ಜೌರ್(ಫ್ರೆಂಚ್‌ನಲ್ಲಿ ಹೆಲೋ ಎಂದರ್ಥ) ಎಂದು ನಕ್ಕಿದ್ದಾರೆ. ವಿಡಿಯೋ ಮಾಡುತ್ತಿದ್ದ ಅಭಿಮಾನಿ, ನಿಮ್ಮ ಜೊತೆ ಫೋಟೋ ತೆಗೆದುಕೊಳ್ಳಲೇ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಸರಿ ಎಂದು ಆತನ ಜೊತೆಗೂ ಅನಂತ್ ಅಂಬಾನಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಅನಂತ್ ಅಂಬಾನಿ ಮದುವೆ ಬೆನ್ನಲ್ಲೇ ಜಿಯೋಗೆ 5,445 ಕೋಟಿ ರೂ ತ್ರೈಮಾಸಿಕ ಲಾಭ!
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಂಡ ಈ ಜೋಡಿ, ಕೆಲ ಪಂದ್ಯಗಳನ್ನು ವೀಕ್ಷಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ಗೆ ಆಗಮಿಸಿದ ಅನಂತ್ ಹಾಗೂ ರಾಧಿಕಾ ಜೋಡಿಗೆ ಅದ್ಧೂರಿ ಸ್ವಾಗತ ನೀಡಲಾಗಿತ್ತು.