ನೆಟ್ಟಿಗರು ಯಾವ ಟ್ಯಾಬ್ಲೆಟ್ ತಗೋತಿರಾ ಎಂಬ ಗೇಮ್ ಮಾಡ್ತಿದ್ದಾರೆ. ಉದ್ಯಮಿ ಆನಂದ್ ಮಹೀಂದ್ರ ಕೂಡಾ ಈ ಗೇಮ್ ಆಡಿದ್ದಾರೆ. ಉದ್ಯಮಿ ಆನಂದ್ ಮಹೀಂದ್ರ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್. ಈಗ ಹೊಸತೊಂದು ಗೇಮ್ ಆರಂಭಿಸಿದ್ದಾರೆ.

ನೀವ್ಯಾವ ಮಾತ್ರೆ ತಗೋತಿರಾ ಗೇಮ್ ವೈರಲ್ ಆಗಿದೆ. ಉದ್ಯಮಿ ಆನಂದ್ ಮಹೀಂದ್ರ ಅವರೂ ಇದರಲ್ಲಿ ಭಾಗಿಯಾಗಿ ಯಾವ ಟ್ಯಾಬ್ಲೆಟ್ ತಗೋತೀರಾ ಎಂದು ನೆಟ್ಟಿಗರಿಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಬಹಳಷ್ಟು ಜನ ಪ್ರತಿಕ್ರಿಯಿಸಿದ್ದು, ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಕೂಡಾ ರೀಟ್ವೀಟ್ ಮಾಡಿದ್ದಾರೆ.

ಸೌದೆ ಒಲೆ ಉರಿಸಿ ಜೋಳದ ರೊಟ್ಟಿ ಮಾಡ್ತಾರೆ ಕಂಗನಾ ಅಮ್ಮ..!

ಟ್ರಿಕ್ಕಿ. ಅವರು ಎರಡು ಮಾತ್ರೆ ಕೇಳಿದ್ದಾರೆ. ಒಂದೇ ಸಾಕೆಂದಿದ್ದರೆ ಗೇಮ್ ಅಷ್ಟು ಕಷ್ಟವಾಗ್ತಿರ್ಲಿಲ್ಲ. ನನ್ನ ಸಂಡೇ ಆತ್ರಿ ಪೂರಾ ಎರಡನೇ ಟ್ಯಾಬ್ಲೆಟ್ ಹುಡುಕೋದ್ರಲ್ಲೇ ಮುಗೀತು ಎಂದಿದ್ದಾರೆ.

ಅಕ್ಟೋಬರ್ 4ರಂದು ಇದನ್ನು ಪೋಸ್ಟ್ ಮಾಡಲಾಗಿದ್ದು, ಟ್ವೀಟ್‌ಗೆ 1400ಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅಭಿಷೇಕ್ ಬಚ್ಚನ್ 2 ಮತ್ತು 9ನೇ ಮಾತ್ರೆ ಚೂಸ್ ಮಾಡಿದ್ದಾರೆ.