ಟ್ವಿಟರ್‌ಗೆ ಜಾಯಿನ್ ಆದಾಗಿನಿಂದಲೂ ಬಹಳಷ್ಟು ಟ್ವೀಟ್ ಮಾಡುತ್ತಲೇ ಇರುತ್ತಾರೆ ನಟಿ ಕಂಗನಾ ರಣಾವತ್. ಫ್ಯಾಮಿಲಿ ಟೈಂ, ಪಿಕ್‌ನಿಕ್ ಫೋಟೋಗಳನ್ನು ನಟಿ ಹಂಚಿಕೊಳ್ತಾರೆ.

ಲಾಕ್‌ಡೌನ್‌ ಸಮಯದಲ್ಲಿ ಕುಟುಂಬದ ಜೊತೆ ಸಮಯ ಕಳೆದಿದ್ದ ನಟಿ ತಲೈವಿ ಸಿನಿಮಾ ಶೂಟ್‌ಗಾಗಿ ಬಂದಿದ್ದಾರೆ. ಇದೇ ಸಂದರ್ಭ ಅಮ್ಮನ ಕ್ಯೂಟ್ ಫೋಟೋ ಶೇರ್ ಮಾಡಿದ್ದಾರೆ ನಟಿ.

'ಈಗೇಕೆ ಹತ್ರಾಸ್‌ನ್ನು ಪಾಕಿಸ್ತಾನ ಎನ್ನಲ್ಲ, ಮಹಿಳಾವಾದಿಗಳು ಎಲ್ಲಿದ್ದಾರೆ?'

ಭಾರತದ ಸಂಪ್ರದಾಯಿಕ ಶೈಲಿಯಲ್ಲಿ ಜೋಳದ ರೊಟ್ಟಿ ಮಾಡುತ್ತಿದ್ದ ಅಮ್ಮನ ಫೋಟೋ ಶೇರ್ ಮಾಡಿದ ನಟಿ, ತಲೈವಿ ಸಿನಿಮಾ ಶೂಟಿಂಗ್ ಮಧ್ಯೆ ಅಮ್ಮನ ಈ ಫೋಟೋ ಬಂತು. ಈ ಸೀಸನ್‌ನ ಜೋಳದ ರೊಟ್ಟಿ ಮಾಡ್ತಿದ್ದಾರೆ. ಮನೆಯಲ್ಲೇ ಬೆಳೆದ ಜೋಳದಿಂದ ತಯಾರಿಸುವ ರೊಟ್ಟಿ ಮಾಡಲು ಅವಳಿಗೆ ಬೇರೆಯೇ ಒಲೆ ಇದೆ. ಇಲ್ಲಿ ತಯಾರಿಸಿದ ರೊಟ್ಟಿಯ ರುಚಿಗಾಗಿ ಅಮ್ಮ ಇಲ್ಲಿ ಅಡುಗೆ ಮಾಡ್ತಾರೆ ಎಂದು ಬರೆದಿದ್ದಾರೆ.

ಇತ್ತೀಚೆಗಷ್ಟೇ ತಲೈವಿ ಸೆಟ್‌ನಿಂದ ನಿರ್ದೇಶಕ ಎಎಲ್ ವಿಜಯ್ ಜೊತೆ ಚರ್ಚಿಸುತ್ತಿರುವ ಫೋಟೋ ಹಂಚಿಕೊಂಡಿದ್ರು ನಟಿ. ಈ ಜಗತ್ತಲ್ಲಿ ಅದ್ಭುತ ಸ್ಥಳಗಳಿವೆ. ಆದರೆ ಶೂಟಿಂಗ್ ಸೆಟ್ ನನಗೆ ಅತ್ಯಂತ ಇಷ್ಟದ ಸ್ಥಳ ಎಂದಿದ್ದಾರೆ.