Asianet Suvarna News Asianet Suvarna News

ಬಾಯ್​ಫ್ರೆಂಡ್​​ ಜೊತೆ ಸೆರೆ ಸಿಕ್ಕ ಅಮಿತಾಭ್​ ಮೊಮ್ಮಗಳು ನವ್ಯಾ: ಮುಖ ಮುಚ್ಚಿಕೊಂಡ ಸಿದ್ಧಾಂತ್​

ಅಮಿತಾಭ್​ ಬಚ್ಚನ್​ ಮೊಮ್ಮಗಳು ನವ್ಯಾ ನವೇಲಿ ಬಾಯ್​ಫ್ರೆಂಡ್​ ಸಿದ್ಧಾಂತ್​ ಚತುರ್ವೇದಿ ಜೊತೆ ಕ್ಯಾಮೆರಾ ಕಣ್ಣಿಗೆ ಬಿದ್ದ ವಿಡಿಯೋ ವೈರಲ್​ ಆಗಿದೆ. 
 

Amitabh Bachchans granddaughter Navya spotted with rumoured boyfriend Siddhant Chaturvedi Suc
Author
First Published Jun 5, 2023, 2:40 PM IST

ಅಮಿತಾಭ್​ ಬಚ್ಚನ್ (Amitabh Bacchan) ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ಸದ್ಯ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ಹೀರೋ ಜತೆ ನವ್ಯಾ ನವೇಲಿ ಅವರು ಡೇಟಿಂಗ್ ಮಾಡುತ್ತಿರುವ ಸುದ್ದಿ ಹಳತಾಗಿದೆ.  ಸಿದ್ಧಾಂತ್ ಚತುರ್ವೇದಿ ಅವರು ಕಳೆದ ನವೆಂಬರ್​ನಲ್ಲಿ  ‘ಫೋನ್ ಭೂತ್’ ಸಿನಿಮಾ ಪ್ರಚಾರದಲ್ಲಿದ್ದ ಸಮಯದಲ್ಲಿ ಅವರಿಗೆ ನವ್ಯಾ ನವೇಲಿ ಜೊತೆಗಿನ ಡೇಟಿಂಗ್ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ಅವರ ನಗುವೇ ಉತ್ತರವಾಗಿತ್ತು. ಈ ಮೂಲಕ ಡೇಟಿಂಗ್​ ವಿಚಾರವನ್ನು ನಗುವಿನಲ್ಲಿಯೇ ಉತ್ತರಿಸಿದ್ದರು. ನಂತರ ಅವರು  ‘ನಾನು ಯಾರಾದರೂ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ ಎಂಬ ವದಂತಿ ಕೇಳಿದಾಗ ಅದು ನಿಜವಾಗಲಿ ಎಂದು ಬಯಸುತ್ತೇನೆ’ ಎನ್ನುವ ಮೂಲಕ  ಡೇಟಿಂಗ್ ವಿಚಾರಕ್ಕೆ ತೆರೆ ಎಳೆದಿದ್ದರು. ಇದಾದ ಬಳಿಕ  ಜಯಾ ಬಚ್ಚನ್​ (Jaya Bacchan) ಅವರು ಒಮ್ಮೆ  ತಮ್ಮ ಮೊಮ್ಮಗಳು ಮದುವೆಯಾಗದೆ ಮಗುವನ್ನ ಮಾಡಿಕೊಂಡರೂ ತಮಗೆ ಓಕೆ ಅಂತ ಹೇಳಿ ದೊಡ್ಡ ಸುದ್ದಿ ಮಾಡಿದ್ದರು. ಅದಾದ ಬಳಿಕ ಈ ಜೋಡಿ ಒಟ್ಟಾಗಿ ಹಲವು ಬಾರಿ ಕಾಣಿಸಿಕೊಂಡಿದೆ. ಕೆಲವು ತಿಂಗಳು ಹಿಂದೆ, ಜೋಡಿ ಮನೀಶ್ ಮಲ್ಹೋತ್ರಾ ಅವರ ಮನೆಯಲ್ಲಿ ದೀಪಾವಳಿ ಹಬ್ಬದ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಇವರಿಬ್ಬರು ಪ್ರತ್ಯೇಕವಾಗಿ ಪಾರ್ಟಿ ನಡೆಯುವ ಸ್ಥಳಕ್ಕೆ ಆಗಮಿಸಿದರೂ, ಅಲ್ಲಿರುವ ಪಾಪರಾಜಿಗಳು ಇವರಿಬ್ಬರ ಹೆಸರುಗಳನ್ನು ಒಟ್ಟಿಗೆ ಕೂಗುವ ಮೂಲಕ ಅವರನ್ನು ಗೇಲಿ ಮಾಡಿದ್ದರು.

ಇದೀಗ ಮತ್ತೆ ಈ ಜೋಡಿ (Couple) ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. ಈ ಲವ್​ಬರ್ಡ್ಸ್​ ವಿಮಾನ ನಿಲ್ದಾಣದಲ್ಲಿ (Airport) ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅವರು ಗೋವಾದಿಂದ ಹಿಂತಿರುಗುತ್ತಿದ್ದ ಬಗ್ಗೆ ಪಾಪರಾಜಿಯೊಬ್ಬರು ಪತ್ತೆ ಹಚ್ಚಿದ್ದಾರೆ. ಇಬ್ಬರೂ ಮ್ಯಾಚಿಂಗ್​ ಡ್ರೆಸ್​ (Matching Dress) ಹಾಕಿಕೊಂಡು ಗಮನ ಸೆಳೆದಿದ್ದಾರೆ.  ಇಬ್ಬರೂ ಬಿಳಿ  ಉಡುಗೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಪಾಪರಾಜಿಗಳು ಚಿತ್ರಗಳನ್ನು ಕ್ಲಿಕ್ಕಿಸುತ್ತಿರುವುದನ್ನು ನೋಡಿದ ಸಿದ್ದಾಂತ್​ ಮುಖವನ್ನು ನಿಖಾಬ್‌ನಿಂದ ಮುಚ್ಚಿಕೊಂಡಿದ್ದಾರೆ.  ಇದರ ಹೊರತಾಗಿಯೂ, ಇಬ್ಬರು ಒಟ್ಟಿಗೆ ವಿಮಾನ ನಿಲ್ದಾಣದಿಂದ ನಿರ್ಗಮಿಸುತ್ತಿರುವುದನ್ನು ಪಾಪರಾಜಿಗಳು ಸೆರೆಹಿಡಿದರು.

ನಾಯಕ ಬಿಗಿದಪ್ಪಿ ಐದು ನಿಮಿಷ ಕಿಸ್​ ಮಾಡಿದ ಕರಾಳ ಅನುಭವ ಬಿಚ್ಚಿಟ್ಟ ನಟಿ ರೇಖಾ

ಇಬ್ಬರೂ ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ಹೊಂದಾಣಿಕೆಯ ಪೋಸ್ಟ್‌ಗಳನ್ನು ಪೋಸ್ಟ್ ಮಾಡುವುದನ್ನು ಕಾಣಬಹುದು. ಭಾರಿ ಟ್ರೋಲ್​ ಆದ ಬಳಿಕ ಹಲವು ಬಾರಿ ಈ ಪೋಸ್ಟ್‌ಗಳನ್ನು ತೆಗೆದು ಕೂಡ ಹಾಕಲಾಗಿದೆ.  ತಮ್ಮ ಕೊನೆಯ ಚಿತ್ರ  ಫೋನ್ ಭೂತ್ ಅನ್ನು ಪ್ರಚಾರ ಮಾಡುವಾಗ, ಸಿದ್ಧಾಂತ್ ಚತುರ್ವೇದಿ (Siddhanth Chaturvedi) ಅವರು ಏಕಾಂಗಿ ಎಂದು ಘೋಷಿಸಿಕೊಂಡಿದ್ದರು. ಸಂದರ್ಶನವೊಂದರಲ್ಲಿ, ಸಿದ್ಧಾಂತ್ ಮತ್ತು ಅವರ ಸಹನಟ ಇಶಾನ್ ಖಟ್ಟರ್ ಅವರನ್ನು ತಮ್ಮ ಬಗ್ಗೆ  ಕೆಲವು ಮಾಹಿತಿ ಶೇರ್​ ಮಾಡಿಕೊಳ್ಳಲು  ಕೇಳಲಾಗಿತ್ತು. ಅ ಸಮಯದಲ್ಲಿ ಅವರು ಒಂಟಿ ಎಂದು ಹೇಳಿದ್ದರು. ಆದರೆ ನವ್ಯಾ ಕುರಿತು ಡೇಟಿಂಗ್​ ಬಗ್ಗೆ ಕೇಳಿದಾಗ ಮಾತ್ರ ನಾಚಿ ನಕ್ಕ ಅವರು, ನಿಜವಾಗಲಿ ಬಿಡಿ ಎಂದು ಹಾರಿಕೆ  ಉತ್ತರ ನೀಡಿದ್ದರು. 

ಸಿದ್ಧಾಂತ್ ಕೊನೆಯದಾಗಿ ಫೋನ್ ಭೂತ್ ನಲ್ಲಿ ಕಾಣಿಸಿಕೊಂಡಿದ್ದರು, ಇದರಲ್ಲಿ ಕತ್ರಿನಾ ಕೈಫ್ ಮತ್ತು ಇಶಾನ್ ಖಟ್ಟರ್ ಕೂಡ ನಟಿಸಿದ್ದಾರೆ.  ಈ ಚಿತ್ರದಲ್ಲಿ ಅವರು ಗೆಹ್ರಾಯನ್ ಸಹನಟಿ ಅನನ್ಯ ಪಾಂಡೆ ಎದುರು ಕಾಣಿಸಿಕೊಳ್ಳಲಿದ್ದಾರೆ. ಕೆಲ ತಿಂಗಳ ಹಿಂದೆ ನವ್ಯಾ (Navya Naveli) ಲೈಂಗಿಕತೆ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡಿ ಸುದ್ದಿಯಾಗಿದ್ದರು.  ದೇಶದ ಮಹಿಳೆಯರಿಗೆ ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಸರಿಯಾದ ಒಂದು ತಿಳಿವಳಿಕೆ ನೀಡುವಲ್ಲಿ ಮತ್ತು ಸರಿಯಾದ ಅರಿವು ಮೂಡಿಸುವಲ್ಲಿ ಇನ್ನೂ ಬಹಳ ದೂರ ಸಾಗಬೇಕಾಗಿದೆ. ಋತುಸ್ರಾವದ ಆರೋಗ್ಯ ಮತ್ತು ಮಾನಸಿಕ ಆರೋಗ್ಯಕ್ಕೆ ನಿಷೇಧಿತ ವಿಷಯಗಳಂತೆ ಭಾವಿಸುವುದನ್ನು ಮತ್ತು ತಿಳಿದುಕೊಳ್ಳುವುದನ್ನು ಮೊದಲು ನಿಲ್ಲಿಸುವುದು ಮೊದಲ ಹೆಜ್ಜೆಯಾಗಿದೆ ಎಂದಿದ್ದರು.  ಇದನ್ನು ಮಾಡಲು, ಜನರು ಅವುಗಳನ್ನು ತಮ್ಮ ಸ್ನೇಹಿತರು, ಕುಟುಂಬ ಮತ್ತು ಗೆಳೆಯರೊಂದಿಗೆ ಚರ್ಚಿಸಲು ಸಿದ್ಧರಿರಬೇಕು ಎಂದು ನವ್ಯಾ ಹೇಳಿ ಭೇಷ್​ ಎನಿಸಿಕೊಂಡಿದ್ದರು.

ಮೂರು ಮದುವೆ, ಹಲವರ ಜೊತೆ ಲಿವ್​ ಇನ್​... ಹೀಗಿದ್ರೂ ಕಮಲ ಹಾಸನ್​ ಒಂಟಿಯಾಕೆ?

 

Follow Us:
Download App:
  • android
  • ios