ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಆರೋಗ್ಯ ಪರಿಸ್ಥಿತಿಗೆ ಸದ್ಯ ಸರ್ಜರಿಯ ಅವಶ್ಯಕತೆ ಇದೆ ಎನ್ನಲಾಗಿದೆ. ತಂಬ್ಲರ್ ಬ್ಲಾಕ್ ಮೂಲಕ ನಟ ಈ ವಿಚಾರವನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿಕೊಂಡಿದ್ದಾರೆ.

ಮೆಡಿಕಲ್ ಕಂಡೀಷನ್, ಸರ್ಜರಿ, ಬರೆಯಲಾಗುತ್ತಿಲ್ಲ ಎಂದು 78 ವರ್ಷದ ಅಮಿತಾಭ್ ಬಚ್ಚನ್ ಬರೆದಿದ್ದರು.  ಸುದ್ದಿ ತಿಳಿಯುತ್ತಲೇ ಅಮಿತಾಭ್ ಅವರ ಫ್ಯಾನ್ಸ್ ಆತಂಕಗೊಂಡಿದ್ದಾರೆ.

ಸಿಟ್ಟಿನಲ್ಲಿ ಅಭಿಮಾನಿಗೆ ಹೊಡೆದ ಅಮಿತಾಭ್..! ಕಾರಣ ಈ ನಟಿ

ಅಭಿಮಾನಿಗಳು ಅಮಿತಾಭ್ ಅವರು ಶೀಘ್ರ ಗುಣಮಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ಬೇಗ ಗುಣಮುಖರಾಗಿ, ನಿಮ್ಮೊಂದಿಗೆ ನಮ್ಮ ಪ್ರಾರ್ಥನೆ ಇದೆ ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

ಅಮಿತಾಭ್ ಕೊನೆಯ ಬಾರಿ ಗುಲಾಬೊ ಸಿತಾಬೋದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಆಯುಷ್ಮಾನ್ ಖುರಾನ್ ಜೊತೆ ನಟಿಸಿದ್ದರು. ಇದನ್ನು ಬಿಟ್ಟು ನಟ ಬ್ರಹ್ಮಾಸ್ತ್ರ ಮತ್ತು ಚೆಹ್ರೆ ಸಿನಿಮಾಗಳಲ್ಲಿ ನಟಿಸಲಿದ್ದಾರೆ.