ಅಭಿಷೇಕ್ ಬಚ್ಚನ್ ಅವರ ಮುಂದಿನ ಫಿಲಂ 'ದಸ್ವಿ'ಯ ಟ್ರೇಲರ್ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದೆ. ಅದನ್ನು ಶೇರ್ ಮಾಡಿರುವ ಅಮಿತಾಭ್ ಬಚ್ಚನ್ ಏನಂತ ಟ್ವೀಟ್ ಮಾಡಿದ್ದಾರೆ ಗೊತ್ತಾ?
'ನನ್ನ ಮಕ್ಕಳು, ನನ್ನ ಮಕ್ಕಳಾಗಿರುವುದರಿಂದ ನನ್ನ ಉತ್ತರಾಧಿಕಾರಿಗಳಾಗುವುದಿಲ್ಲ. ನನ್ನ ಉತ್ತರಾಧಿಕಾರಿ ಯಾರಾಗಿರುತ್ತಾರೋ ಅವರೇ ನನ್ನ ಮಕ್ಕಳಾಗಿರುತ್ತಾರೆ''
ಹಾಗಂತ ಅಮಿತಾಭ್ ಬಚ್ಚನ್ (Amitabh Bachchan) ಅವರ ತಂದೆ ಹರಿವಂಶರಾಯ್ (Harivamsh Roy) ಬಚ್ಚನ್ ಹೇಳುತ್ತಿದ್ದರಂತೆ. ಅಭಿಷೇಕ್ (Abhishek Bachchan) ಅವರ ನೂತನ ಫಿಲಂ 'ದಸ್ವಿ'ಯ (Dasvi) ಟ್ರೇಲರ್ (Trailer) ಹಂಚಿಕೊಂಡಿರುವ ಅಮಿತಾಭ್ ಬಚ್ಚನ್, ಮಾಡಿರುವ ಟ್ವೀಟ್‌ನಲ್ಲಿ ತಮ್ಮ ತಂದೆಯ ಈ ಮಾತನ್ನು ನೆನೆದುಕೊಂಡಿದ್ದಾರೆ. ನಂತರ ಬರೆದಿದ್ದಾರೆ- ''ಅಭಿಷೇಕ್, ನೀನು ನನ್ನ ಉತ್ತರಾಧಿಕಾರಿ. ಹೇಳಿದ್ಮೇಲೆ ಮುಗೀತು ಅಷ್ಟೇ..''
ಇದಕ್ಕೆ ರೆಸ್ಪಾಂಡ್ ಮಾಡಿರುವ ಅಭಿಷೇಕ್ ಬಚ್ಚನ್, ''ಲವ್ ಯು ಪಾ, ಯಾವತ್ತೂ ಮತ್ತು ಶಾಶ್ವತವಾಗಿ'' ಎಂದು ಬರೆದುಕೊಂಡಿದ್ದಾರೆ.
ನಿಜಕ್ಕೂ ಈ ಚಿಂತನೆ ಎಷ್ಟು ಚೆನ್ನಾಗಿದೆ ಅಲ್ಲವೇ. ಶ್ರೀಮಂತರು, ಪ್ರಭಾವಿಗಳು, ಜನನಾಯಕರು ಹೀಗೆ ಚಿಂತಿಸಿದರೆ ಎಷ್ಟು ಚೆನ್ನಾಗಿರುತ್ತದೆ. ಮಕ್ಕಳನ್ನು ಉತ್ತರಾಧಿಕಾರಿಗಳನ್ನಾಗಿ ಮಾಡಿದಾಗ, ಪ್ರತಿಭೆಯಿಲ್ಲದಿದ್ದರೂ ಅನ್ಯಾಯವಾಗಿ ಶ್ರೀಮಂತಿಕೆ ಅವರನ್ನು ಸೇರುತ್ತದೆ. ಪ್ರತಿಭೆಯೇ ಉತ್ತರಾಧಿಕಾರದ ಮಂತ್ರ ಎಂದಾದರೆ ಎಲ್ಲರೂ ಪ್ರತಿಭಾವಂತರಾಗಲು ಹಾತೊರೆಯುತ್ತಾರೆ.
ಮೊದಲ ಮೂರು ತಿಂಗಳು ಅದೆಷ್ಟು ಕಠಿಣ: ಗರ್ಭಾವಸ್ಥೆಯ ಕಷ್ಟ ಹಂಚಿಕೊಂಡ ಸೋನಮ್
'ದಸ್ವಿ' ಒಂದು ಸೋಶಿಯಲ್- ಪೊಲಿಟಿಕಲ್ ಡ್ರಾಮಾ ಮೂವಿ ಎಂಬುದು ಟ್ರೇಲರ್ ನೋಡಿದರೆ ಗೊತ್ತಾಗುತ್ತದೆ. ಇದರಲ್ಲಿ ಹತ್ತನೇ ತರಗತಿ ಮಾತ್ರ ಓದಿದ ಒಬ್ಬ ವ್ಯಕ್ತಿ ಮುಖ್ಯಮಂತ್ರಿ ಆಗುವ ಪಾತ್ರದಲ್ಲಿ ಅಭಿಷೇಕ್ ನಟಿಸಿದ್ದಾರೆ. ಪ್ರೇಕ್ಷಕರನ್ನು ನಗಿಸಲೂ ಸಾಕಷ್ಟು ಅವಕಾಶ ಈ ಚಿತ್ರದಲ್ಲಿ ಅಭಿಷೇಕ್‌ಗೆ ಸಿಕ್ಕಿರುವಂತಿದೆ. ಈ ಹಿಂದೆ ಗುರು ಮುಂತಾದ ಫಿಲಂಗಳಲ್ಲಿ ಅಭಿಷೇಕ್ ಸೀರಿಯಸ್ ರೋಲ್‌ಗಳನ್ನು ಮಾಡಿದ್ದರು.
ಅಪ್ಪ- ಮಗನ ಈ ಟ್ವೀಟ್‌ಗಳಿಗೆ ಸಾವಿರಾರು ಮಂದಿ ಸಾವಿರಾರು ಥರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇದರಲ್ಲಿ ಮೆಚ್ಚುಗೆ, ವ್ಯಂಗ್ಯ, ಶ್ಲಾಘನೆ, ಟೀಕೆ ಎಲ್ಲವೂ ಇವೆ.
![]()
''ನೀವು ಇದನ್ನು ಎಲ್ಲರಿಗೂ ವಿವರಿಸಬೇಕಾದ್ದೇ ಇಲ್ಲ. ಅಭಿಷೇಕ್ ನಿಮ್ಮ ಉತ್ತರಾಧಿಕಾರಿ ಎಂಬುದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ'' ಎಂದಿದ್ದಾರೆ ಒಬ್ಬರು. ''ನಿಮ್ಮ ನಂತರ ನಿಮ್ಮ ಸ್ಥಾನವನ್ನು ಅಭಿಷೇಕ್ ತುಂಬಲಿದ್ದಾರೆ'' ಎಂದಿದ್ದಾರೆ ಮತ್ತೊಬ್ಬರು. ''ಬಚ್ಚನ್‌ಜೀ, ನೀವು ಕೊಟಿಗೊಬ್ಬರು ಸ್ಟಾರ್. ಸುಪ್ರೀಂ ಸ್ಥಾನ ಪಡೆದಿದ್ದೀರಿ. ಆದ್ರೆ ಯುವ, ಗುರು, ಸರ್ಕಾರ್ ಸಿನಿಮಾಗಳಲ್ಲಿ ಅಭಿಷೇಕ್ ನಿಮ್ಮನ್ನೂ ಮೀರಿಸಿ ನಟಿಸಿದ್ದಾರೆ. ಅವರು ಬಾಲಿವುಡ್‌ನ ಬೆಸ್ಟ್, ಆದರೆ ಇನ್ನೂ ಸಾಕಷ್ಟು ಸಂಶೋಧಿತವಾಗಿಲ್ಲದ ನಟ. ಕೊನೆಗೂ ಅವರು ಇದನ್ನೆಲ್ಲ ಮೀರಿ ಗೆಲ್ಲಲಿದ್ದಾರೆ ಎಂಬುದು ನನ್ನ ಅನಿಸಿಕೆ'' ಎಂಬುದು ಮತ್ತೊಬ್ಬ ಅಭಿಮಾನಿಯ ಅಭಿಪ್ರಾಯ. ಇನ್ನು ಕೆಲವರು, ''ಹರಿವಂಶರಾಯ್ ಹೇಳಿದ್ದಕ್ಕೂ, ನೀವು ಮಾಡುತ್ತಿರುವುದಕ್ಕೂ ತಾಳಮೇಳ ಇಲ್ಲ'' ಅಂತಲೂ, ''ನಿಮ್ಮ ಫ್ಯಾಮಿಲಿ ಸಮಸ್ಯೆ ನಿಮ್ಮ ಮನೆಯಲ್ಲೇ ಇಟ್ಟುಕೊಳ್ಳಿ'' ಅಂತಲೂ ಟೀಕಿಸಿದ್ದಾರೆ.
Aishwarya Rai ಬಗ್ಗೆ ಅಸಭ್ಯ ಕಾಮೆಂಟ್ ಮಾಡಿ ಸಿಕ್ಕಿಬಿದ್ದ Emraan Hashmi!
ಅಭಿಷೇಕ್ ಬಚ್ಚನ್ ಬಾಲಿವುಡ್‌ನಲ್ಲಿ (Bollywood) ಇನ್ನಷ್ಟು ಎಕ್ಸ್‌ಪ್ಲೋರ್ ಆಗಬೇಕಿರುವ ನಟ. ಜನ ಅವರ ನಟನೆಯನ್ನು ಅವರ ತಂದೆ ಅಮಿತಾಭ್ ಬಚ್ಚನ್ ಅವರ ಅಭಿನಯಕ್ಕೆ ಹೋಲಿಸಿ ನೋಡುತ್ತಾರೆ. ಅಮಿತಾಭ್ ಆದರೋ ಹಾಲಿವುಡ್ ರಾಬರ್ಟ್ ಡಿ ನೀರೋ ಲೆವೆಲ್‌ಗೆ ಇರುವವರು. ಆದರೆ ಅಮಿತಾಭ್‌ಗೆ ಹೋಲಿಸಿದರೆ ಅಭಿಷೇಕ್ ಇನ್ನೂ ಪಳಗದ, ಅಭಿನಯದ ಪಟ್ಟುಗಳನ್ನು ಇನ್ನೂ ಕಲಿಯುತ್ತಿರುವ ಕುದುರೆ. ಹೋಲಿಕೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಇದರಿಂದ ಅಭಿಷೇಕ್‌ಗೆ ಕೀಳರಿಮೆ ಉಂಟಾಗಿರಲೂ ಸಾಕು. ಅಭಿಷೇಕ್ ವರ್ಷಕ್ಕೊಂದು ಫಿಲಂ ಕೂಡ ತರುತ್ತಿಲ್ಲ. ಅವರ ಫಿಲಂ ಜರ್ನಿ ನಾಲ್ಕಾರು ಮೂವಿಗಳಿಗೆ ನಿಂತಿದೆ. ಬಾಕ್ಸಾಫೀಸ್‌ನಲ್ಲಿ ಅವರ ಫಿಲಂ ಯಾವುದೂ ಹಿಟ್ ಆಗದೇ ಇರುವುದರಿಂದ ಅವರ ಮೇಲೆ ಹಣ ಹೂಡುವವರೂ ಕಡಿಮೆ.ಇದೆಲ್ಲದರಿಂದಾಗಿ, ಅಮಿತಾಭ್ ಅವರಿಗೆ ತಮ್ಮ ಮಗನನ್ನು ಮತ್ತಷ್ಟು ಪ್ರಮೋಟ್ ಮಾಡುವ ಅನಿವಾರ್ಯ ಸೃಷ್ಟಿ ಆಗಿರಬಹುದು. ಆದರೆ ದಸ್ವಿ ಟ್ರೇಲರ್ ಚೆನ್ನಾಗಿದೆ. ಅಭಿಷೇಕ್‌ಗೆ ಒಳ್ಳೆಯದಾಗಲಿ ಎಂದು ನಾವು ಹಾರೈಸಬಹುದು.
