ಫೋನ್ ಮಾಡಲು ಸ್ವಲ್ಪ ದುಡ್ಡು ಕೊಡ್ತೀರಾ, ರತನ್ ಟಾಟಾ ಜೊತೆಗಿನ ಘಟನೆ ಬಿಚ್ಚಿಟ್ಟ ಅಮಿತಾಬ್!

ರತನ್ ಟಾಟಾ ಸರಳತೆ ಕುರಿತು ಹಲವು ಘಟನೆಗಳಿವೆ. ಶ್ರೀಮಂತ ಉದ್ಯಮಿ ಒಂದು ಬಾರಿ ನಟ ಅಮಿತಾಬ್ ಬಚ್ಚನ್ ಬಳಿ ಬಂದು, ನನಗೆ ಫೋನ್ ಕರೆ ಮಾಡಲು ಹಣ ಕೊಡುವಿರಾ ಎಂದು ಕೇಳಿದ್ದ ಘಟನೆಯನ್ನು ನಟ ಹೇಳಿದ್ದಾರೆ.

Can I borrow some money Amitabh bachchan share beautiful memory with Ratan tata ckm

ಮುಂಬೈ(ಅ.29) ಉದ್ಯಮಿ ರತನ್ ಟಾಟಾ ನಿಧನ ಭಾರತ ಮಾತ್ರವಲ್ಲ ಉದ್ಯಮ ಜಗತ್ತಿಗೆ ಅತೀ ದೊಡ್ಡ ನಷ್ಟ. ಉದ್ಯಮ ಸಾಮ್ರಾಜ್ಯ ಕಟ್ಟಿ ಬೆಳೆಸಿದ್ದು ಮಾತ್ರವಲ್ಲ, ಯಶಸ್ವಿಯಾಗಿ ಮುನ್ನಡೆಸಿ, ಮುಂದಿನ ಪೀಳಿಗೆಯೂ ಯಶಸ್ವಿಯಾಗಿ ಮುನ್ನಡೆಸಲು ರತನ್ ಟಾಟಾ ಮಾರ್ಗ ಹಾಕಿಕೊಟ್ಟಿದ್ದಾರೆ. ಇದೀಗ  ರತನ್ ಟಾಟಾ ಕುರಿತು ಹಲವರು ತಮ್ಮ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಇದೀಗ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಇದೀಗ ರತನ್ ಟಾಟಾ ಕುರಿತು ಸ್ಮರಣೀಯ ನೆನಪೊಂದನ್ನು ಬಿಚ್ಚಿಟ್ಟಿದ್ದಾರೆ. ವಿಶೇಷ ಅಂದರೆ ರತನ್ ಟಾಟಾ ಸರಳತೆ ಕುರಿತ ಘಟನೆ ಬಿಚ್ಚಿಟ್ಟ ಅಮಿತಾಬ್ ಬಚ್ಚನ್ ಒಂದು ಬಾರಿ ನನ್ನ ಬಳಿ ಬಂದ ಟಾಟಾ, ನನಗೆ ಫೋನ್ ಕರೆ ಮಾಡಲು ಸ್ವಲ್ಪ ಹಣಕೊಡುವಿರಾ ಎಂದು ಕೇಳಿದ್ದರು ಎಂದು ಹಳೇ ಘಟನೆ ಬಿಚ್ಚಿಟ್ಟಿದ್ದಾರೆ.

ಕೌನ್ ಬನೇಗಾ ಕರೋಡ್ ಪತಿ ಟಿವಿ ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್ ಈ ಘಟನೆ ಹಂಚಿಕೊಂಡಿದ್ದಾರೆ. 16ನೇ ಆವೃತ್ತಿಯ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಬೊಮನ್ ಇರಾನಿ ಹಾಗೂ ಚಿತ್ರ ನಿರ್ಮಾಪಕಿ ಫರಾ ಖಾನ್ ಪಾಲ್ಗೊಂಡಿದ್ದರು. ಈ ವೇಳೆ ಅಮಿತಾಬ್ ಬಚ್ಚನ್ ರತನ್ ಟಾಟಾ ಕುರಿತು ನೆನಪಿಸಿಕೊಂಡಿದ್ದಾರೆ. ಮಾನವೀಯ ಗುಣಗಳು ಹಾಗೂ ಸರಳತೆಯನ್ನು ಮೈಗೂಡಿಸಿಕೊಂಡಿರುವ ವ್ಯಕ್ತಿತ್ವ ಎಂದು ಅಮಿತಾಬ್ ಬಚ್ಚನ್ ಹೇಳಿದ್ದಾರೆ. ಇದೇ ವೇಳೆ ಲಂಡನ್‌ನಲ್ಲಿ ನಡೆದ ಘಟನೆ ಕುರಿತು ಹೇಳಿದ್ದಾರೆ.

ರತನ್ ಟಾಟಾ 10,000 ಕೋಟಿ ರೂ ಆಸ್ತಿಯಲ್ಲಿ ಮುದ್ದಿನ ನಾಯಿಗೂ ಇದೆ ಅತೀ ದೊಡ್ಡ ಪಾಲು!

ನಾನು ಹಾಗೂ ರತನ್ ಟಾಟಾ ಒಂದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆವು. ಇಬ್ಬರು ಲಂಡನ್‌ಗೆ ಪ್ರಯಾಣ ಬೆಳೆಸಿದ್ದೆವು. ವಿಮಾನ ಲಂಡನ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು. ರತನ್ ಟಾಟಾ ಪ್ರಮುಖ ಕಾರ್ಯಕ್ರಮ, ಉದ್ಯಮ ಸಂಬಂಧಿತ ವಿಚಾರಕ್ಕೆ ಲಂಡನ್ ತೆರಳಿದ್ದರು. ನಾವಿಬ್ಬರು ವಿಮಾನದಿಂದ ಇಳಿದು ನಿಲ್ದಾಣದಿಂದ ಹೊರಬಂದಾಗ ರತನ್ ಟಾಟಾ ಅವರನ್ನು ಆಹ್ವಾನಿಸಿದ ಆಯೋಜಕರು ಅಲ್ಲಿ ಇರಲಿಲ್ಲ. ಒಂದೆರಡು ನಿಮಿಷ ನೋಡಿದ ರತನ್ ಟಾಟಾ ಅಲ್ಲೆ ಪಕ್ಕದಲ್ಲಿದ್ದ ಫೋನ್ ಬೂತ್‌ಗೆ ತೆರಳಿದ್ದರು. ನಾನು ಹೊರಗಡೆ ಅಲ್ಲೆ ನಿಂತಿದ್ದ. ಕೆಲ ಹೊತ್ತಲ್ಲಿ ರತನ್ ಟಾಟಾ ಮರಳಿ ನನ್ನ ಬಳಿ ಬಂದರು. ಈ ವೇಳೆ ರತನ್ ಟಾಟಾ ಆಡಿದ ಮಾತುಗಳನ್ನು ನನಗೆ ನಂಬಲು ಸಾಧ್ಯವಾಗಲಿಲ್ಲ. ಕಾರಣ ನನ್ನ ಬಳಿ ಬಂದ ರತನ್ ಟಾಟಾ, ಅಮಿತಾಬ್, ನನಗೆ ಸ್ವಲ್ಪ ಹಣ ಸಾಲ ಕೊಡುವಿರಾ? ಫೋನ್ ಮಾಡಲು ನನ್ನ ಬಳಿ ದುಡ್ಡಿಲ್ಲ ಎಂದಿದ್ದರು. ಈ ಘಟೆಯನ್ನು ಅಮಿತಾಬ್ ಬಚ್ಚನ್ ಹೇಳಿಕೊಂಡಿದ್ದಾರೆ. 

 

 

ರತನ್ ಟಾಟಾ ಶ್ರೀಮಂತಿಕೆ, ಸಂಪತ್ತು ಎಷ್ಟಿದೆಯೋ ಅಷ್ಟೇ ದಾನ ಮಾಡಿದ್ದಾರೆ. ಇದೀಗ ರತನ್ ಟಾಟಾ 10,000 ಕೋಟಿ ರೂಪಾಯಿ ಆಸ್ತಿ ಬಿಟ್ಟುಹೋಗಿದ್ದಾರೆ. ಈ ಆಸ್ತಿಯಲ್ಲಿ ರತನ್ ಟಾಟಾ ಹಲವರಿಗೆ ಪಾಲು ಹಂಚಿದ್ದಾರೆ. ರತನ್ ಟಾಟಾ ಪ್ರೀತಿಯಿಂದ ಸಾಕಿದ್ದ ನಾಯಿಗೂ ತಮ್ಮ ಆಸ್ತಿಯಲ್ಲಿ ಪಾಲು ಹಂಚಿಕೊಂಡಿದ್ದಾರೆ. ತಮ್ಮ ಸಿಬ್ಬಂದಿ, ಗೆಳೆಯನಂತಿದ್ದ ನೆಚ್ಚಿನ ಶಂತನು ನಾಯ್ಡು ಸೇರಿದಂತೆ ಪ್ರಮುಖರಿಗೆ ತಮ್ಮ 10,000 ರೂಪಾಯಿ ಕೋಟಿ ಆಸ್ತಿಯಲ್ಲಿ ಪಾಲು ಹಂಚಿಕೊಂಡಿದ್ದಾರೆ.  ದಾನ ಧರ್ಮದಲ್ಲಿ ರತನ್ ಟಾಟಾ ಎತ್ತಿದ ಕೈ. ದೇಶ ಯಾವುದೇ ಸಂಕಷ್ಟದಲ್ಲಿರುವಾಗ ರತನ್ ಟಾಟಾ ಮುಂದೆ ನಿಂತು ಸಹಾಯಹಸ್ತ ಚಾಚಿದ್ದಾರೆ. ಕೊರೋನಾ ಸಮಯದಲ್ಲಿ ಟಾಟಾ ಗ್ರೂಪ್ ಹಾಗೂ ಟಾಟಾ ಸನ್ಸ್ ಜಂಟಿಯಾಗಿ  1,500 ಕೋಟಿ ರೂಪಾಯಿ ಕೇಂದ್ರ ಸರ್ಕಾರದ ಕೊರೋನಾ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿತ್ತು.


 

Latest Videos
Follow Us:
Download App:
  • android
  • ios