ಮದುವೆಗೆ ಮುನ್ನ ಜಯಾ ಬಚ್ಚನ್ ಅವರಿಗೆ ಅಮಿತಾಬ್ ಈ ಷರತ್ತುಗಳನ್ನು ಹಾಕಿದ್ದರಂತೆ!
ಜಯಾ ಬಚ್ಚನ್ (Jaya Bachchan) ಇತ್ತೀಚೆಗೆ ತಮ್ಮ ಮದುವೆಯ ಬಗ್ಗೆ ಶಾಕಿಂಗ್ ವಿಷಯವನ್ನು ಬಹಿರಂಗಪಡಿಸಿದ್ದಾರೆ. 49 ವರ್ಷಗಳ ದಾಂಪತ್ಯದ ನಂತರ, ಏಳು ಸುತ್ತುಗಳನ್ನು ತೆಗೆದುಕೊಳ್ಳುವ ಮೊದಲು ಅಮಿತಾಬ್ ಬಚ್ಚನ್ (Amitabh Bachchan)ಜಯಾ ಅವರ ಮುಂದೆ ಯಾವ ಷರತ್ತು ಹಾಕಿದ್ದರು ಎಂದು ಜಯಾ ಬಚ್ಚನ್ ಅವರು ರೀವಿಲ್ ಮಾಡಿದ್ದಾರೆ. ಅಮಿತಾಬ್ ಮತ್ತು ಜಯ ಬಚ್ಚನ್ ದಂಪತಿಗಳು ಜೂನ್ 1973 ರಲ್ಲಿ ವಿವಾಹವಾದರು. ಮದುವೆಯಾಗುವ ಮುನ್ನ ಅಮಿತಾಬ್ ಬಚ್ಚನ್ ತನ್ನ ಮುಂದೆ ಷರತ್ತು ಹಾಕಿದ್ದರು ಜಯಾ ಬಚ್ಚನ್ ಬಹಿರಂಗಪಡಿಸಿದ್ದಾರೆ.
ಸದಾ ಕೋಪದ ಸ್ವಭಾವಕ್ಕೆ ಹೆಸರುವಾಸಿಯಾಗಿರುವ ಬಾಲಿವುಡ್ ನಟಿ ಜಯಾ ಬಚ್ಚನ್ ಅಮಿತಾಬ್ ಬಚ್ಚನ್ ಜೊತೆಗಿನ ಮದುವೆಯ ಬಗ್ಗೆ ಶಾಕಿಂಗ್ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.
49 ವರ್ಷಗಳ ದಾಂಪತ್ಯದ ನಂತರ, ಜಯಾ ಬಚ್ಚನ್ ತನ್ನನ್ನು ಮದುವೆಯಾಗುವ ಮೊದಲು ಬಿಗ್ ಬಿ ಹಾಕಿದ್ದ ಷರತ್ತು ಬಹಿರಂಗಪಡಿಸಿದ್ದಾರೆ.
ಮೊಮ್ಮಗಳು ನವ್ಯಾ ನವೇಲಿ ನಂದಾ ವಾಟ್ ದಿ ಹೆಲ್ ನವ್ಯಾ ಎಂಬ ಪಾಡ್‌ಕ್ಯಾಸ್ಟ್‌ನಲ್ಲಿ ಜಯಾ ಬಚ್ಚನ್ ಅವರು ತನ್ನ ಮದುವೆಗೆ ಸಂಬಂಧಿಸಿದ ಆಘಾತಕಾರಿ ಸಂಗತಿ ಬಹಿರಂಗಪಡಿಸಿದ್ದಾರೆ.
ಅಂದಹಾಗೆ,ಜಯಾ ಬಚ್ಚನ್ ಮತ್ತು ಅಮಿತಾಬ್ ಬಚ್ಚನ್ ಜೋಡಿಯನ್ನು ಉದ್ಯಮದಲ್ಲಿ ಆರಾಧ್ಯ ದಂಪತಿಗಳೆಂದು ಪರಿಗಣಿಸಲಾಗಿದೆ ಮತ್ತು 2023ರಲ್ಲಿ ಅಮಿತಾಬ್-ಜಯಾ ಮದುವೆಯಾಗಿ 50 ವರ್ಷಗಳು ತುಂಬಲಿವೆ
ಅಮಿತಾಬ್ ಬಚ್ಚನ್ ಮತ್ತು ಜಯಾ ಜೂನ್ 3, 1973 ರಂದು ವಿವಾಹವಾದರು ಮತ್ತು 2023 ರಲ್ಲಿ, ಅವರು ತಮ್ಮ ಮದುವೆಯ 50 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಾರೆ. ಈ ನಡುವೆ ಜಯಾ ತನ್ನ ಮೊಮ್ಮಗಳ ಮದುವೆಯ ಬಗ್ಗೆ ಬಿಗ್ ಬಿ ಜೊತೆಗಿನ ಪಾಡ್‌ಕಾಸ್ಟ್ ವಾಟ್ ದಿ ಹೆಲ್ ನವ್ಯದಲ್ಲಿ ಕೆಲವು ವಿಷಯಗಳನ್ನು ಬಹಿರಂಗಪಡಿಸಿದರು.
ನನ್ನ ಕೆಲಸದ ಬದ್ಧತೆಗಳನ್ನು ಪೂರೈಸಲು ನಾವು ಅಕ್ಟೋಬರ್‌ನಲ್ಲಿ ಮದುವೆಯಾಗಲು ನಿರ್ಧರಿಸಿದ್ದೇವೆ. ಆದರೆ ಜಂಜೀರ್ ಚಿತ್ರದ ಯಶಸ್ಸಿನ ನಂತರ, ಅವರು ಪ್ರವಾಸಕ್ಕೆ ಹೋಗಬೇಕಾಗಿತ್ತು ಆದರೆ ಅಮಿತ್ ಅವರ ಪೋಷಕರು ಮದುವೆಗೆ ಮುಂಚಿತವಾಗಿ ಹೊರಗೆ ಹೋಗುವುದನ್ನು ಇಷ್ಟಪಡಲಿಲ್ಲ ಮತ್ತು ಆದ್ದರಿಂದ ಅವರು ಜೂನ್‌ನಲ್ಲಿ ಮದುವೆಯಾಗಲು ನಿರ್ಧರಿಸಿದರು.
9 ರಿಂದ 5 ಕೆಲಸ ಮಾಡುವ ಹೆಂಡತಿ ಬೇಕು ಎಂದು ಬಚ್ಚನ್ ಷರತ್ತು ಹಾಕಿದ್ದರು. ಅವರು ನನ್ನನ್ನು ಕೆಲಸ ಮಾಡಲು ಕೇಳಿದರು ಆದರೆ ಪ್ರತಿದಿನ ಅಲ್ಲ. ನಾನು ಕೆಲವು ಒಳ್ಳೆಯ ಚಿತ್ರಗಳಲ್ಲಿ ಮತ್ತು ಒಳ್ಳೆಯ ಜನರೊಂದಿಗೆ ಮಾತ್ರ ಕೆಲಸ ಮಾಡಬೇಕೆಂದು ಅವರು ಬಯಸಿದ್ದರು ಎಂದು ಜಯಾ ಬಚ್ಚನ್ ಹೇಳಿದ್ದಾರೆ.
ಬಿಗ್ ಬಿ ಜೊತೆ ಮದುವೆಯ ನಂತರ ಜಯಾ ಬಚ್ಚನ್ ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದರು ಆದರೆ ಕುಟುಂಬ ಮತ್ತು ಮಕ್ಕಳ ಸಲುವಾಗಿ ವೃತ್ತಿಜೀವನದಲ್ಲಿ ವಿರಾಮ ತೆಗೆದುಕೊಂಡರು ಬಹಳ ಹೊತ್ತಿನ ನಂತರ ಮತ್ತೆ ಸಿನಿಮಾಕ್ಕೆ ಬಂದಿದ್ದರು. ಅವರು ಹೆಚ್ಚಿನ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ.
ಜಯಾ ಬಚ್ಚನ್ ಅವರ ಮುಂಬರುವ ಚಿತ್ರ ರಾಕಿ ಔರ್ ರಾಣಿಯ ಪ್ರೇಮ್‌ಕಹಾನಿ. ಕರಣ್ ಜೋಹರ್ ಅವರ ಈ ಚಿತ್ರದಲ್ಲಿ ಧರ್ಮೇಂದ್ರ, ಶಬಾನಾ ಅಜ್ಮಿ, ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿದ್ದಾರೆ. ಅದೇ ಸಮಯದಲ್ಲಿ, ಅಮಿತಾಬ್ ಬಚ್ಚನ್ ಅವರ ಉಂಚಾಯಿ ಚಿತ್ರವು ನವೆಂಬರ್ 11 ರಂದು ಬಿಡುಗಡೆಯಾಗುತ್ತಿದೆ.