ಅಮಿತಾಬ್‌ ಬಚ್ಚನ್ ತದ್ರೂಪಿ ವಿಡಿಯೋ ವೈರಲ್‌

ಬಾಲಿವುಡ್ ಬಿಗ್‌ಬಿ ಅವರ ತದ್ರೂಪಿಯೊಬ್ಬರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರೇ ಇದು ನಿಜವೇ ಎಂದು ಗೊಂದಲಕ್ಕೊಳಗಾಗಿದ್ದಾರೆ.

Amitabh Bachchan doppelganger video goes viral akb

ಜಗತ್ತಿನಲ್ಲಿ ಒಂದೇ ರೀತಿಯ ಏಳು ಜನರು ಇರುತ್ತಾರಂತೆ ಏಳು ಜನರು ಇದ್ದಾರೋ ಇಲ್ಲವೋ ಎಂಬುದು ತಿಳಿದಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳ ತದ್ರೂಪಿಗಳನ್ನು ನೀವು ನೋಡಿರಬಹುದು. ಇವರು ಅವರಲ್ಲ ಎಂದು ಹೇಳಲಾಗದಷ್ಟು ಒಂದೇ ರೀತಿ ಇರುವ ಅನೇಕ ತದ್ರೂಪಿಗಳನ್ನು ನಾವು ನೋಡಿದ್ದೇವೆ. ಹಾಗೆಯೇ ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್ ಅವರನ್ನೇ ಹೋಲುವ ಶಶಿಕಾಂತ್ ಪೆಡ್ವಾಲ್ ಎಂಬುವವರ ವಿಡಿಯೋವೊಂದು ವೈರಲ್ ಆಗಿದೆ. 

ಅಮಿತಾಭ್ ಬಚ್ಚನ್ ಅವರ ತದ್ರೂಪಿ (doppelganger) ಶಶಿಕಾಂತ್ ಪೆಡ್ವಾಲ್ ಅವರು ಪಾರ್ಕ್‌ನಲ್ಲಿ ಅಡ್ಡಾಡುತ್ತಿರುವ ವೀಡಿಯೊ ವೈರಲ್ ಆಗಿದ್ದು, ಜನರು ಅವರ ಹೋಲಿಕೆಯನ್ನು ಕಂಡು ಆಶ್ಚರ್ಯಪಟ್ಟಿದ್ದಾರೆ.

 

ಕೆಲವು ಅದೃಷ್ಟವಂತ ಅಭಿಮಾನಿಗಳು ಮುಂಬೈನ ಬೀದಿಗಳಲ್ಲಿ ತಮ್ಮ ಹೀರೋಗಳನ್ನು ನೋಡಬಹುದು. ಆದರೆ ಅಂತಹ ಅವಕಾಶಗಳು ಸಿಗುವುದು ಬಲು ಅಪರೂಪ. ಅಂತಹದರಲ್ಲಿ ಅಮಿತಾಬ್ ಬಚ್ಚನ್ ಅವರು ಭದ್ರತೆಯೇ ಇಲ್ಲದ  ಉದ್ಯಾನವನದಲ್ಲಿ ಅಡ್ಡಾಡುತ್ತಿರುವುದನ್ನು ಗಮನಿಸಿದಾಗ ಜನರು ನಿಜವಾಗಿಯೂ ಗೊಂದಲಕ್ಕೊಳಗಾದರು. ಆದರೆ ನಿಧಾನವಾಗಿ ಇದು ಅಮಿತಾಬ್ ಅಲ್ಲ ಅವರಂತೆ ಇರುವ ಶಶಿಕಾಂತ್ ಪೆಡ್ವಾಲ್ (Shashikant Pedwal) ಎಂಬುದನ್ನು ಜನ ಅರಿತುಕೊಂಡರು.

ಇಂಟರ್‌ನೆಟ್‌ನಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಭಾರತ ಚಿತ್ರರಂಗದ ಲೆಜೆಂಡರಿ ನಟ ಆಗಿರುವ ಅಮಿತಾಬ್ ಅವರಂತೆ ಕಾಣುವ ವ್ಯಕ್ತಿಯೊಬ್ಬರು ಬಿಳಿ ಶೂ ಧರಿಸಿದ್ದು, ಬೂದು ಬಣ್ಣದ ಅಥ್ಲೆಟಿಕ್‌ ಉಡುಪಿನೊಂದಿಗೆ ಉದ್ಯಾನವನದಲ್ಲಿ ನಡೆಯುತ್ತಿರುವುದು ಕಂಡು ಬಂದಿದೆ. ಬಚ್ಚನ್ ಅವರಂತೆ ಗಡ್ಡ ಬಿಟ್ಟಿದ್ದ ಅವರು ನಡಿಗೆಯೂ ಕೂಡ ಬಿಗ್‌ ಬೀಯನ್ನೇ ಹೋಲುತ್ತಿತ್ತು. ಹೀಗಾಗಿ ಜನ ಇವರು ನಿಜವಾಗಿಯೂ ಶೋಲೆ ಸಿನಿಮಾದ ಹೀರೋನೇ ಎಂದು ಆಶ್ಚರ್ಯಪಟ್ಟರು ಆದರೆ ನಂತರದಲ್ಲಿ ಇದು ಅವರ ತದ್ರೂಪಿ ಎಂಬುದನ್ನು ಅರಿತುಕೊಂಡರು.

Big B ಅಜ್ಜ ಎಂದು ಕೊಂಡಿದ್ದಾರಂತೆ Shahrukh ಕಿರಿ ಮಗ; ಕಾರಣವೇನು?

ಇನ್ನು ಈ  ಶಶಿಕಾಂತ್ ಪೆಡ್ವಾಲ್ ಅವರು ಅಮಿತಾಬ್ ಬಚ್ಚನ್ ಅವರ ಐಕಾನಿಕ್ 1987 ರ ಚಲನಚಿತ್ರ ಶಾಹೆನ್‌ಶಾದಿಂದ (Shahenshah) 'ಅಂಧೇರಿ ರಾತನ್ ಮೇ'(Andheri Raaton Mein)  ಹಾಡುಗಳವರೆಗೆ ಹಲವು ಹಾಡುಗಳಿಗೆ ರೀಲ್ಸ್‌ ಮಾಡಿ ಫೇಮಸ್‌ ಆಗಿದ್ದಾರೆ. ಇನ್ನು  ಅಮಿತಾಬ್ ಬಚ್ಚನ್ (Amitabh Bachchan) ತದ್ರೂಪಿ ವಿಡಿಯೋ ನೋಡಿದ ಜನ ಇದು ಅಮಿತಾಬ್ ಬಚ್ಚನ್ ಎಂದು ನಾನು ಪ್ರಾಮಾಣಿಕವಾಗಿ ಭಾವಿಸಿದ್ದೇನೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ(Instagram) ಕಾಮೆಂಟ್ ಮಾಡಿದ್ದಾರೆ, ಮತ್ತೊಬ್ಬರು  ನೀವು ಬಿಗ್ ಬಿ ಅವರಿಗಿಂತ ಬಿಗ್ ಬಿ ಅವರಂತೆ ಕಾಣುತ್ತೀರಿ ಎಂದು ಹೇಳಿದ್ದಾರೆ.

Siddhant Chaturvedi ಜೊತೆ Amitabh ಮೊಮ್ಮಗಳು ಡೇಟಿಂಗ್?
ಶಶಿಕಾಂತ್ ಪೆದ್ವಾಲ್ ಅವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಅವರು ಬಚ್ಚನ್ ತದ್ರೂಪಿ ಆಗಿ ಒಂದು ದಶಕಕ್ಕೂ ಹೆಚ್ಚು ಕಾಲ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಲ್ಲದೇ ಮಿಮಿಕ್ರಿ ಕಲಾವಿದರೂ ಆಗಿರುವ ಶಶಿಕಾಂತ್ ಅವರು ಸಂತೋಷವನ್ನು ಹರಡಲು ಬಚ್ಚನ್ ಆಗಿ ಕ್ಯಾನ್ಸರ್ ರೋಗಿಗಳನ್ನು ಭೇಟಿ ಮಾಡಿದ್ದರು. ಇದು ಆನ್‌ಲೈನ್‌ನಲ್ಲಿ  ಜನರ ಪ್ರಶಂಸೆಗೆ ಪಾತ್ರವಾಗಿತ್ತು. ಕರೋನಾ ವೈರಸ್ ಸಾಂಕ್ರಾಮಿಕ (coronavirus pandemic) ಸಮಯದಲ್ಲಿ, ಒತ್ತಡದ ಸಮಯದಲ್ಲಿ ಕೋವಿಡ್ -19 ರೋಗಿಗಳು ಸೇರಿದಂತೆ ಅನೇಕರಿಗೆ ಆನ್‌ಲೈನ್ ಮೂಲಕ ಈ ಶಶಿಕಾಂತ್ ಪೆಡ್ವಾಲ್  ಉತ್ತಮ ಮನೋರಂಜನೆ ನೀಡಿದ್ದರು.

ಒಟ್ಟಿನಲ್ಲಿ ನಮ್ಮ ನೆಚ್ಚಿನ ನಟರು ಕೈಗೆ ಸಿಗದಿದ್ದರೂ ಈ ತದ್ರೂಪಿಗಳು ಅವರ ಹೆಸರಿನಲ್ಲಿ ಜನರನ್ನು ರಂಜಿಸುತ್ತಿರುವುದು ಸುಳಳಲ್ಲ.


 

Latest Videos
Follow Us:
Download App:
  • android
  • ios