ದೇಶದಲ್ಲಿ ನಡೆಯುವ ಬಹಳಷ್ಟು ಬೆಳವಣಿಗಗಳ ಬಗ್ಗೆ ಪ್ರತಿಕ್ರಿಯಿಸುವ ನಟಿ ಕಂಗನಾ ರಣಾವತ್ ರೈತ ಪ್ರತಿಭಟನೆಯ ಬಗ್ಗೆಯೂ ಟ್ವೀಟ್‌ಗಳನ್ನು ಮಾಡುತ್ತಲೇ ಇದ್ದಾರೆ. ಇದೀಗ ನಟಿಯ ಟ್ವಿಟರ್ ಖಾನೆಯನ್ನು ಬ್ಯಾನ್ ಮಾಡಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಕಳೆದ ಕೆಲವು ತಿಂಗಳಿಂದ ತನ್ನ ಟ್ವಿಟರ್ ಖಾತೆಯನ್ನು ತಾನೇ ಹ್ಯಾಂಡಲ್ ಮಾಡ್ತಿದ್ದಾರೆ ಕಂಗನಾ ರಣಾವತ್. ಸದ್ಯ ಆನ್‌ಲೈನ್‌ನಲ್ಲಿ ವಿವಾದಾತ್ಮಕ ವ್ಯಕ್ತಿಯಾಗಿ ಆಕೆ ಮೂಡಿ ಬರುತ್ತಿದ್ದಾರೆ. ಪ್ರತಿ ಬೆಳವಣಿಗೆ, ಪ್ರತಿಭಟನೆ, ರಾಜಕೀಯ, ಸಿನಿಮಾ ಎಲ್ಲದರ ಬಗ್ಗೆಯೂ ನಟಿ ಮಾತನಾಡುತ್ತಾ, ಅಭಿಪ್ರಾಯ ವ್ಯಕ್ತಪಡಿಸುತ್ತಿರುತ್ತಾರೆ.

ರೈತ ಪ್ರತಿಭಟನೆ ವಿರೋಧಿಸಿ ಕಂಗನಾ ಕಳ್ಕೊಂಡಿದ್ದು 15 ಕೋಟಿ

ತನ್ನ ನಿಯಮಗಳನ್ನು ಮೀರಿದ್ದಕ್ಕಾಗಿ ನಟಿಯ ಪೋಸ್ಟ್‌ನ್ನು ಟ್ವಿಟರ್ ಡಿಲೀಟ್ ಮಾಡಿತ್ತು. ಇದೀಗ ನಟಿ ಕಂಗನಾ ವಿದೇಶಿ ಗಾಯಕಿ ಮತ್ತು ಮಹಿಳಾ ಉದ್ಯಮಿ ರಿಹಾನಾ ಕುರಿತು ಟ್ವೀಟ್‌ ಮಾಡಿ ವಿರೋಧ ಎದುರಿಸುತ್ತಿದ್ದಾರೆ. ದೆಹಲಿ ಗಡಿಯಲ್ಲಿ ಪ್ರತಿಭಟಿಸುತ್ತಿರುವವರು ಉಗ್ರರು ಎಂದಿದ್ದಾರೆ ಕಂಗನಾ.

ತಲೈವಿ ಸಿನಿಮಾ ಶೂಟಿಂಗ್ ಮುಗಿಸಿದ ನಂತರ ನಟಿ ಸದ್ಯ ಧಾಕಡ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್‌ನ ಕೆಲವು ವಿಡಿಯೋ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ.