30ರ ಯುವಕನ ಜತೆ 49ರ ನಟಿ ಅಮಿಷಾ ಪಟೇಲ್​ ಲವ್ವಿಡವ್ವಿಯ ಫೋಟೋ ವೈರಲ್​ ಆಗಿದೆ. ಉದ್ಯಮಿ ಕಮೆಂಟ್​ ನೋಡಿ ಫ್ಯಾನ್ಸ್ ಶಾಕ್​ ಆಗಿದ್ದಾರೆ. 

ಒಂದು ಕಡೆ ನಟಿ 51 ವರ್ಷದ ಮಲೈಕಾ ಅರೋರಾ ತಮಗಿಂತ 11 ವರ್ಷ ಚಿಕ್ಕವರಾಗಿರುವ ಅರ್ಜುನ್​ ಕಪೂರ್​ ಜೊತೆ ದಶಕದವರೆಗೆ ಡೇಟಿಂಗ್​ನಲ್ಲಿದ್ದು, ಲಿವ್​ ಇನ್​ ಸಂಬಂಧದಲ್ಲಿಯೂ ಇದ್ದು ಈಗ ಬ್ರೇಕಪ್​ ಮಾಡಿಕೊಂಡಿದ್ದಾರೆ. ಆದರೆ ಅವರನ್ನೂ ಮೀರಿಸುವಂತೆ 49 ವರ್ಷದ ನಟಿ ಆಮಿಷಾ ಪಟೇಲ್​ 30 ವರ್ಷದ ಯುವಕನ ಜೊತೆ ಡೇಟಿಂಗ್​ ಮಾಡುತ್ತಿದ್ದು, ಅದರ ಫೋಟೋಗಳನ್ನು ಶೇರ್​ ಮಾಡಿದ್ದಾರೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಹುಬ್ಬೇರಿಸುತ್ತಿದ್ದಾರೆ. ಅಂದಹಾಗೆ ವಯಸ್ಸು 49 ಆದರೂ ಆಮಿಷಾ ಅವರು, ಸದ್ಯ ಸಿನಿಮಾಗಳಿಂದ ದೂರ ಇದ್ದಾರೆ. ಈಚೆಗೆ ಅವರ, ‘ಗದರ್ 2’ (Gadar 2) ಭಾರಿ ಸಕ್ಸಸ್​ ಕೂಡ ಕಂಡಿತ್ತು.

ಅಂದಹಾಗೆ, ಆಮಿಷಾ ಪಟೇಲ್​ ಹೆಸರು ಇದಾಗಲೇ ಹಲವಾರು ನಟರ ಜೊತೆ ಥಳಕು ಹಾಕಿಕೊಂಡಿದೆ. ಅವರು ಸದಾ ಸುದ್ದಿಯಲ್ಲಿದ್ದಾರೆ. ಇದಾಗಲೇ ಇವರ ಹೆಸರು ನಾಲ್ವರು ವಿವಾಹಿತರ ಜೊತೆ ಕೇಳಿಬಂದಿದೆ. ಆದರೆ ಈಗ ಶ್ರೀಮಂತ ಉದ್ಯಮಿ ಜೊತೆಗಿನ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಆ ಉದ್ಯಮಿಗೆ ಈಗ 30 ವರ್ಷ ವಯಸ್ಸು! ಅಂದರೆ ತಮಗಿಂದ 19 ವರ್ಷ ಕಿರಿಯನ ಜೊತೆ ನಟಿ ಡೇಟಿಂಗ್​ ಮಾಡುತ್ತಿದ್ದು, ಫೋಟೋಗಳು ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿದೆ. ಅಂದಹಾಗೆ, ಆ ಉದ್ಯಮಿ ಹೆಸರು ನಿರ್ವಾಣ್ ಬಿರ್ಲಾ. ಫೋಟೋಗಳನ್ನು ಶೇರ್​ ಮಾಡಿರುವ ನಟಿ, ‘ನನ್ನ ಡಾರ್ಲಿಂಗ್ ಜೊತೆ ಒಂದೊಳ್ಳೆಯ ಸಂಜೆ…’ ಎಂದು ಅದಕ್ಕೆ ಶೀರ್ಷಿಕೆ ನೀಡಿದ್ದಾರೆ. 

ನೈಜೇರಿಯಾದಲ್ಲಿ ಡಾ.ಬ್ರೋಗೆ ಚಾಕು ಇರಿದ್ರು, ಬ್ಲೇಡ್​ನಿಂದ ಬೆರಳು ಕತ್ತರಿಸಿದ್ರು! ವಿಡಿಯೋ ನೋಡಿ ಫ್ಯಾನ್ಸ್ ಶಾಕ್​

ಈ ಫೋಟೋಗಳನ್ನು ದುಬೈನಲ್ಲಿ ತೆಗೆಸಿಕೊಳ್ಳಲಾಗಿದೆ. ನಿರ್ವಾಣ ಒಬ್ಬ ವಾಣಿಜ್ಯೋದ್ಯಮಿ ಮತ್ತು ಗಾಯಕ. ಅವರು ಬಿರ್ಲಾ ಬ್ರೈನಿಯಾಕ್ಸ್ ಮತ್ತು ಬಿರ್ಲಾ ಓಪನ್ ಮೈಂಡ್ಸ್ ಸಂಸ್ಥಾಪಕರೂ ಆಗಿದ್ದಾರೆ. ಯಶೋವರ್ಧನ್ ಬಿರ್ಲಾ ಮತ್ತು ಅವಂತಿ ಬಿರ್ಲಾ ಅವರ ಮಗನೇ ನಿರ್ವಾಣ. ಇಷ್ಟು ಹೇಳಿದರೆ ಆತ ಎಷ್ಟು ಶ್ರೀಮಂತ ಎಂದು ಪುನಃ ಹೇಳಬೇಕಾಗಿಲ್ಲ ಅಲ್ಲವೆ? ವೈರಲ್​ ಫೋಟೋದಲ್ಲಿ ಅಮಿಷಾ ಮತ್ತು ನಿರ್ವಾಣ್ ಇಬ್ಬರೂ ಸಕತ್​ ಎಂಜಾಯ್​ ಮಾಡುವುದನ್ನು ನೋಡಬಹುದು. ಇಬ್ಬರೂ ಡ್ರೆಸ್​ಗಳನ್ನು ಮ್ಯಾಚಿಂಗ್​ ಮಾಡಿಕೊಂಡಿದ್ದಾರೆ.


ಮೊದಲೇ ಹೇಳಿದಂತೆ ನಟಿಯ ಹೆಸರು ನಾಲ್ವರ ಜೊತೆ ಕೇಳಿಬಂದಿದೆ. ಅದೂ ವಿವಾಹಿತರ ಜೊತೆ. ಅದರಲ್ಲಿಯೂ ನಿರ್ದೇಶಕ ವಿಕ್ರಮ್ ಭಟ್ ಅವರೊಂದಿಗಿನ ಸಂಬಂಧವು ಸಾಕಷ್ಟು ಚರ್ಚಿತವಾಗಿತ್ತು. ಇವರಿಬ್ಬರೂ ಸುಮಾರು 5 ವರ್ಷಗಳ ಕಾಲ ಸಂಬಂಧದಲ್ಲಿದ್ದರು, ಈಗ ಬ್ರೇಕಪ್​ ಆಗಿದ್ದಾರೆ. ಇಬ್ಬರ ಡೇಟಿಂಗ್ ವಿಚಾರ ಬಾಲಿವುಡ್‌ನಲ್ಲಿ ಅಂಗಳದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ನಟಿಯ ಈ ಪೋಸ್ಟ್‌ಗೆ ನಿರ್ವಾಣ ಕಮೆಂಟ್‌ ಮಾಡಿ, ಫನ್‌ ಆಗಿತ್ತು, ಲವ್‌ ಯೂ ಎಂದಿದ್ದಾರೆ. ಇದನ್ನು ನೋಡಿ ಹಾಗಿದ್ರೆ ಇವರಿಬ್ಬರೂ ದುಬೈನಲ್ಲಿ ಏನು ಮಾಡ್ತಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ. ಫೋಟೋದಲ್ಲಿ ಇಬ್ಬರೂ ಕಪ್ಪು ಬಟ್ಟೆ ಧರಿಸಿ ಮಿಂಚಿದ್ದಾರೆ. ಇಬ್ಬರೂ ಎಂಗೇಜ್ ಆಗಿದ್ದಾರಾ? ಎಂದೆಲ್ಲಾ ನೆಟ್ಟಿಗರು ನಟಿಯ ಕಾಲೆಳೆದಿದ್ದಾರೆ. ಈ ಡೇಟಿಂಗ್ ಸುದ್ದಿ ನಿಜನಾ ಎಂದು ಕೇಳುತ್ತಿದ್ದಾರೆ. 

ಸತ್ತಿದ್ದು ನಾನಲ್ಲ ಕಣ್ರೀ... RIP ಹಾಕಿ ಪ್ಲೀಸ್​ ನನ್ನ ಸಾಯಿಸ್ಬೇಡಿ: ಜಾಲತಾಣದಲ್ಲಿ ನಟ ನಿತಿನ್ ಮನವಿ

View post on Instagram