ಮಲಯಾಳಂ ನಟ ಪೃಥ್ವಿರಾಜ್ ಜೊತೆ ಅಲ್ಲು ಅರ್ಜುನ್ ಪತ್ನಿ ಡ್ಯುಯಟ್!
ಯಾವ್ದೇ ಹೀರೋಯಿನ್‌ಗೆ ಕಮ್ಮಿ ಇಲ್ಲ ಅಲ್ಲು ಅರ್ಜುನ್ ಪತ್ನಿ. ಈಕೆ ಸಿನಿಮಾಕ್ಕೆ ಎಂಟ್ರಿ ಕೊಡ್ತಿದ್ದಾರೆ ಅನ್ನೋದು ಹಳೇ ಸುದ್ದಿ. ಈಗ ಬಂದಿರೋ ಲೇಟೆಸ್ಟ್ ಸುದ್ದಿ ಅಂದರೆ ಈಕೆ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರ್ ಜೊತೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅನ್ನೋದು.
ದಕ್ಷಿಣ ಭಾರತದ ಜನಪ್ರಿಯ ಹೀರೋ ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹಾ ರೆಡ್ಡಿ ಅವರು ಸೌಂದರ್ಯದಲ್ಲಿ ಯಾವುದೇ ಹೀರೋಯಿನ್‌ಗಿಂತ ಕಡಿಮೆ ಏನಿಲ್ಲ. ಇಂಥ ಸುಂದರಿ ಈಗ ಸಿನಿಮಾದಲ್ಲಿ ನಟಿಸೋಕೆ ಮುಂದಾಗಿದಾರೆ. ಈ ಸುದ್ದಿ ಅನೌನ್ಸ್ ಆಗಿ ಬಹಳ ಕಾಲ ಆಗಿದೆ. ಆದರೆ ಈಕೆ ನಟಿಸೋದು ಯಾವ ಸಿನಿಮಾದಲ್ಲಿ ಯಾರ ಜೊತೆ ಅನ್ನೋದನ್ನು ಗುಟ್ಟಾಗಿಡಲಾಗಿತ್ತು. ಇದೀಗ ಆಪ್ತಮೂಲಗಳಿಂದ ಸುದ್ದಿಯೊಂದು ಬಂದಿದೆ. ಸ್ನೇಹ ರೆಡ್ಡಿ ನಟಿಸುತ್ತಿರೋದು ಮಲಯಾಳಂನ ಜನಪ್ರಿಯ ನಟ ಪೃಥ್ವಿರಾಜ್ ಸುಕುಮಾರ್ ಜೊತೆಗೆ ನಟಿಸುತ್ತಿದ್ದಾರೆ ಅನ್ನೋ ಸುದ್ದಿಯದು. ಹಾಗೆ ನೋಡಿದರೆ ಅಲ್ಲು ಅರ್ಜುನ್ ದಕ್ಷಿಣ ಭಾರತದಲ್ಲಿ ಎಷ್ಟು ಫೇಮಸ್ಸೋ ಅವರ ಪತ್ನಿ ಸ್ನೇಹಾ ರೆಡ್ಡಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಅಷ್ಟೇ ಫೇಮಸ್ಸು. ಅವರು ಟಾಲಿವುಡ್‌ನ ಅತ್ಯಂತ ಜನಪ್ರಿಯ ಸ್ಟಾರ್ ಪತ್ನಿಯರಲ್ಲಿ ಒಬ್ಬರು. ಆಕೆ ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ಆಕ್ಟಿವ್ ಆಗಿದ್ದಾರೆ. ಜತೆಗೆ ಅಪಾರ ಅಭಿಮಾನಿಗಳನ್ನೂ ಹೊಂದಿದ್ದಾರೆ. ತಮ್ಮ ಹಾಗೂ ಕುಟುಂಬದ ಫೋಟೋಗಳನ್ನು ಆಗಾಗ ಅವರು ಪೋಸ್ಟ್ ಮಾಡುತ್ತಿರುತ್ತಾರೆ. ಕೆಲವು ಬಾರಿ ಅಭಿಮಾನಿಗಳೊಂದಿಗೆ ಚಿಟ್‌ಚಾಟ್ ಮಾಡುವುದೂ ಉಂಟು.
ಇಂಥ ಸ್ನೇಹಾ ರೆಡ್ಡಿ ಈಗ ಸಿನಿಮಾವೊಂದರಲ್ಲಿ ನಟಿಸೋಕೆ ಮುಂದಾಗಿದ್ದಾರೆ ಅಂದಾಗ ಅವರ ಅಭಿಮಾನಿಗಳು ಸಹಜವಾಗಿಯೇ ಥ್ರಿಲ್ ಆಗಿದ್ದರು. ತೆಲುಗು ಸಿನಿಮಾ ಇರಬಹುದು ಅಂತ ಆರಂಭದಲ್ಲಿ ಅಂದುಕೊಂಡಿದ್ದರು. ಅವರ ಪತಿಯ ಸಿನಿಮಾದಲ್ಲೇ ನಟಿಸುತ್ತಿದ್ದಾರ ಅನ್ನೋ ಮಾತುಗಳು ಕೇಳಿಬಂದಿದ್ದವು. ಆಮೇಲೆ ತಿಳಿದ ವಿಚಾರ ಅಂದರೆ ಇದು ತೆಲುಗಿನ ಬದಲಾಗಿ ಇದು ಮಲಯಾಳಂ ಸಿನಿಮಾ ಎಂದು. ಮಲಯಾಳಂನ ಫೇಮಸ್ ಹೀರೋ ಒಬ್ಬರ ಜತೆಗೆ ಇವರು ಹೀರೋಯಿನ್ ಆಗಿ ನಟಿಸುತ್ತಿದ್ದಾರೆ. ಆ ಹೀರೋ ಯಾರು ಮತ್ತು ಸ್ನೇಹಾ ರೆಡ್ಡಿ ಪಾತ್ರ ಏನು ಎಂಬುದನ್ನು ಸ್ನೇಹಾ ರೆಡ್ಡಿ ರಹಸ್ಯವಾಗಿಯೇ ಇಟ್ಟಿದ್ದರು. ಅಲ್ಲು ಅರ್ಜುನ್ ಕೂಡ ಇದನ್ನು ರಿವೀಲ್ ಮಾಡಿರಲಿಲ್ಲ. ಆದರೆ ಪತ್ನಿ ಸ್ನೇಹಾ ರೆಡ್ಡಿಯ ಎಲ್ಲ ಸಾಹಸಗಳಿಗೂ ತಾನು ಸೈ ಎನ್ನುತ್ತೇನೆ ಎಂದು ಈ ಮೊದಲೇ ಅಲ್ಲು ಘೋಷಿಸಿದ್ದರು.
Pushpa 2 ರಶ್ಮಿಕಾ ಮಂದಣ್ಣಗೆ ಗೇಟ್‌ಪಾಸ್ ಕೊಟ್ಟ ಅಲ್ಲು ಅರ್ಜುನ್; ಸಾಯಿ ಪಲ್ಲವಿ ಎಂಟ್ರಿ ನೆಟ್ಟಿಗರು ಖುಷ್
ಅಲ್ಲು ಅರ್ಜುನ್ ಮತ್ತು ಅವರ ಪತ್ನಿ ಸ್ನೇಹಾ ದಕ್ಷಿಣದ ಅತ್ಯಂತ ಜನಪ್ರಿಯ ಸೆಲೆಬ್ರಿಟಿ ಕಪಲ್. ಅನೇಕ ಅಭಿಮಾನಿಗಳಿಗೆ ಇವರು ರೋಲ್ ಮಾಡೆಲ್ ಕೂಡ ಹೌದು. ಇವರು ಇನ್‌ಸ್ಟಾಗ್ರಾಂನಲ್ಲಿ ತುಂಬಾ ಆಕ್ಟಿವ್. ಸಾಮಾಜಿಕ ಜಾಲತಾಣಗಳಲ್ಲಿ ಅವರು ಮಾಡೋ ಪೋಸ್ಟ್ಗಳು ಈ ಬಗ್ಗೆ ಅವರು ಸಾಕಷ್ಟು ಕ್ರೇಜಿ ಎಂಬುದನ್ನು ಸಾರುತ್ತವೆ. ಅವರ ಓಡಾಟ, ಪ್ರವಾಸ, ಪಾರ್ಟಿ, ಮಕ್ಕಳ ಜೊತೆ, ಕುಟುಂಬದವರ ಜೊತೆಗಿನ ಒಡನಾಟ ಇವನ್ನೆಲ್ಲ ಶೇರ್ ಮಾಡಿಕೊಳ್ತಾರೆ. ಆದರೆ ಹೊಸ ಸಿನಿಮಾದ ಬಗ್ಗೆ ಹೆಚ್ಚೇನೂ ಹಾಕಿಲ್ಲ.
ಇತ್ತೀಚಿಗೆ ಸ್ನೇಹಾ ತಮ್ಮ ಇನ್‌ಸ್ಟಾಗ್ರಾಮ್ ಅಕೌಮಟ್‌ನಲ್ಲಿ ಅಭಿಮಾನಿಗಳ ಜತೆ ʼಆಸ್ಕ್ ಮಿ ಎನಿಥಿಂಗ್ʼ ಸೆಷನ್ ಅನ್ನು ನಡೆಸಿದರು. ಆಗ ʼಅಲ್ಲು ಅರ್ಜುನ್ ನಿಮಗೆ ಯಾವುದಾದರೂ ನಿಕ್‌ನೇಮ್ ಇಟ್ಟಿದ್ದಾರೆಯೇ? ಎಂದು ಅಭಿಮಾನಿಯೊಬ್ಬರು ಕೇಳಿದರು. ಅದಕ್ಕೆ ಸ್ನೇಹಾ, 'ಕ್ಯೂಟಿ' ಎಂದು ಉತ್ತರಿಸಿದರು. ಸ್ನೇಹಾ ಸಕತ್ ಕ್ಯೂಟಿಯಾಗಿರುವುದಂತೂ ಹೌದು.
ಅಲ್ಲು ಅರ್ಜುನ್ ಸ್ನೇಹಾರನ್ನು ʻನನ್ನ ಕ್ಯೂಟಿ' ಎಂದು ಕರೆಯುವುದು ಅನೇಕ ಸಂದರ್ಭದಲ್ಲಿ ರಿವೀಲ್(Reveal) ಆಗಿದೆ. ಬರ್ತ್‌ಡೇ ವಿಶಸ್ ಆಗಲಿ ಅಥವಾ ಆನಿವರ್ಸರಿಯಾಗಲಿ, ಸ್ನೇಹಾರನ್ನು ಉಲ್ಲೇಖಿಸುವಾಗ ಯಾವಾಗಲೂ ತಮ್ಮ ನೋಟ್‌ನಲ್ಲಿ “ಕ್ಯೂಟಿ” ಎಂದೇ ಹಾಕುತ್ತಾರೆ. ಇವರ ಲವ್ ಸ್ಟೋರಿಯೂ ಮುದ್ದಾಗಿದೆ. ಇವರಿಬ್ಬರೂ ಭೇಟಿಯಾಗಿದ್ದು ಅಲ್ಲು ಅರ್ಜುನ್ ಅವರ ಸ್ನೇಹಿತನ ಮದುವೆಯೊಂದರಲ್ಲಿ. ನಂತರ ಅಲ್ಲು ಅರ್ಜುನ್ ಹಾಗೂ ಸ್ನೇಹಾ ರೆಡ್ಡಿ ಪರಸ್ಪರ ಸಂಪರ್ಕದಲ್ಲಿದ್ದರು. ದಿನ ಕಳೆದಂತೆ ಪ್ರೀತಿ(Love) ಚಿಗುರಲಾರಂಭಿಸಿತು. ಸ್ವಲ್ಪ ಸಮಯ ಡೇಟಿಂಗ್ ಮಾಡಿದರು. 2011, ಮಾರ್ಚ್ 6ರಂದು ಮದುವೆಯಾದರು. ಇಂಥ ಅಲ್ಲು ಅರ್ಜುನ್ ಹಾಗೂ ಸ್ನೇಹಾ ದಂಪತಿಗೆ ಅರ್ಹ ಮತ್ತು ಅಯಾನ್ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
ಈ ಮಧ್ಯೆ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ 2 ಶೂಟಿಂಗ್(Shooting) ನಡೆಯುತ್ತಿದೆ. ಇದಕ್ಕೆ ಸಾಯಿ ಪಲ್ಲವಿ ನಾಯಕಿ. ಬಹುನಿರೀಕ್ಷಿತ ಪುಷ್ಪ 2 ಚಿತ್ರ ಬಿಡುಗಡೆಗಾಗಿ ಅವರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಇನ್ನೊಂದೆಡೆ ಸುಕುಮಾರ್ ಜೋಡಿಯಾಗಿ ಸ್ನೇಹಾ ರೆಡ್ಡಿ ಹೇಗೆ ಕಾಣಬಹುದು ಅನ್ನೋ ಕುತೂಹಲವೂ ಅಭಿಮಾನಿಗಳಲ್ಲಿದೆ.
Pushpa; ರಷ್ಯಾದಲ್ಲಿ ನೆಲಕಚ್ಚಿದ ರಶ್ಮಿಕಾ- ಅಲ್ಲು ಅರ್ಜುನ್ ಸಿನಿಮಾ; ಕೋಟಿಗಟ್ಟಲೆ ನಷ್ಟ