Pushpa; ರಷ್ಯಾದಲ್ಲಿ ನೆಲಕಚ್ಚಿದ ರಶ್ಮಿಕಾ- ಅಲ್ಲು ಅರ್ಜುನ್ ಸಿನಿಮಾ; ಕೋಟಿಗಟ್ಟಲೆ ನಷ್ಟ
ಇತ್ತೀಚಿಗಷ್ಟೆ ರಷ್ಯಾದಲ್ಲಿ ರಿಲೀಸ್ ಆಗಿದ್ದ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ಸಿನಿಮಾ ಹೀನಾಯ ಸೋಲು ಕಂಡಿದೆ.

ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಭಾರತದಲ್ಲಿ ಪುಷ್ಪ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಾಕ್ಸ್ ಆಫೀಸ್ ನಲ್ಲೂ ಕೋಟಿ ಕೋಟಿ ಬಾಚಿಕೊಂಡಿತ್ತು. ಪುಷ್ಪ ಸೂಪರ್ ಸಕ್ಸಸ್ ಬಳಿಕ ಇತ್ತೀಚಿಗಷ್ಟೆ ಸಿನಿಮಾತಂಡ ರಷ್ಯಾದಲ್ಲಿ ಸಿನಿಮಾ ರಿಲೀಸ್ ಮಾಡಿತ್ತು. ರಷ್ಯಾ ಭಾಷೆಗೆ ಡಬ್ ಮಾಡಿ ಪುಷ್ಪ ಸಿನಿಮಾವನ್ನು ಅಲ್ಲಿ ಬಿಡುಗಡೆ ಮಾಡಲಾಗಿತ್ತು. ಪ್ರಮೋಷನ್‌ಗೆ ಇಡೀ ಸಿನಿಮಾತಂಡ ರಷ್ಯಾಗೆ ಹಾರಿತ್ತು. ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್, ನಿರ್ದೇಶಕ ಸುಕುಮಾರ್ ಸೇರಿದಂತೆ ಇಡೀ ತಂಡ ರಷ್ಯಾಗೆ ಹಾರಿತ್ತು. ಭರ್ಜರಿ ಪ್ರಮೋಷನ್ ಮಾಡಿತ್ತು. ರಷ್ಯಾ ಪ್ರವಾಸದ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿತ್ತು.
ಆದರೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಪುಷ್ಪ ಸಿನಿಮಾ ರಷ್ಯಾದಲ್ಲಿ ನೆಲಕಚ್ಚಿದೆ ಎನ್ನುವ ಮಾತು ಕೇಳಿಬಂದಿದೆ. ಇದರಿಂದ ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕಿದ್ದಾರಂತೆ. ಸಿನಿಮಾ ಪ್ರಚಾರಕ್ಕಾಗಿ ಚಿತ್ರತಂಡ ಕೋಟಿಗಟ್ಟಲೆ ಖರ್ಚು ಮಾಡಿತ್ತು. ಟಿವಿ, ರೇಡಿಯೋ ಸಂದರ್ಶನ ಸೇರಿದಂತೆ ಸಿಕ್ಕಾಪಟ್ಟೆ ಹಣ ಸುರಿಯಲಾಗಿತ್ತು. ಆದರೆ ರಷ್ಯಾದಿಂದ ತಮ್ಮ ಸಿನಿಮಾಗೆ ಯಾವುದೇ ಹಣ ವಾಪಾಸ್ ಬಂದಿಲ್ಲ ಎನ್ನುವ ಮಾತು ಕೇಳಿಬಂದಿದೆ. ಪುಷ್ಪ ನೋಡಲು ರಷ್ಯಾ ಮಂದಿ ಆಸಕ್ತಿ ತೋರಿಲ್ಲ ಎನ್ನುವ ಮಾತು ಕೇಳಿಬಂದಿದೆ. ತುಂಬಾ ನಷ್ಟ ಅನುಭವಿಸಿದ ಕಾರಣ ಕೇವಲ ಮೂರು ದಿನಕ್ಕೆ ಚಿತ್ರಮಂದಿರಗಳಿಂದ ಪುಷ್ಪ ಸಿನಿಮಾ ತೆಗೆದು ಹಾಕಿದರು ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.
ಪುಷ್ಪಾ ಚಿತ್ರದ ನಿರ್ಮಾಣ ಸಂಸ್ಥೆ ಮೇಲೆ ಐಟಿ ರೈಡ್, 15 ಪ್ರದೇಶದಲ್ಲಿ ಶೋಧ ಕಾರ್ಯ!
ಡಿಸೆಂಬರ್ 8 ರಂದು ಪುಷ್ಪ ಸಿನಿಮಾ ರಷ್ಯಾದಲ್ಲಿ ರಿಲೀಸ್ ಆಗಿತ್ತು. ಇಡೀ ತಂಡ ಅಲ್ಲಿಗೆ ಹೋಗಿ ಸಿನಿಮಾ ಪ್ರಮೋಟ್ ಮಾಡಿ ರಿಲೀಸ್ ಮಾಡಲಾಗಿತ್ತು. ಆದರೆ ಹೀನಾಯ ಸೋಲು ಕಂಡಿದೆ ಎನ್ನಲಾಗಿದೆ. ಭಾರತದಲ್ಲಿ ಸಕ್ಸಸ್ ಕಂಡ ಸಿನಿಮಾ ರಷ್ಯಾದಲ್ಲಿ ಸೋಲು ಕಂಡಿದ್ದು ಅಚ್ಚರಿ ಮೂಡಿಸಿದೆ. ಸಿನಿಮಾತಂಡಕ್ಕೆ ಸುಮಾರು 3 ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ ಎನ್ನಲಾಗಿದೆ. ರಷ್ಯಾದಲ್ಲಿ ಪುಷ್ಪ ಸೋಲು ಸಿನಿಮಾತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಅಂದಹಾಗೆ ಈ ಮೊದಲು ರಿಲೀಸ್ ಆದಾಗ ಪುಷ್ಪ ಸಿನಿಮಾಗೆ ಓವರ್ ಸೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವಿದೇಶದಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಭರ್ಜರಿ ಕಮಾಯಿ ಮಾಡಿತ್ತು. 80 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿತ್ತು. ಆದರೀಗ ರಷ್ಯಾದಲ್ಲಿ ಹೀನಾಯ ಸೋಲು ಕಂಡಿದ್ದು ಚಿತ್ರತಂಡಕ್ಕೆ ದೊಡ್ಡ ಶಾಕ್ ಆಗಿದೆ.
ಯುಟ್ಯೂಬ್‌ನಲ್ಲೂ 'ಶ್ರೀವಲ್ಲಿ' ಹವಾ; ಅತೀ ಹೆಚ್ಚು ವೀಕ್ಷಿಸಿದ ಹಾಡುಗಳ ಲಿಸ್ಟ್‌ನಲ್ಲಿ ಪುಷ್ಪ ನಂ.1
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಸದ್ಯ ಪುಷ್ಪ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶಕ ಸುಕುಮಾರ್ ದೊಡ್ಡ ಮಟ್ಟದಲ್ಲಿ ಪುಷ್ಪ-2 ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಕೂಡ ಬದಲಾವಣೆ ಮಾಡಿದ್ದು ಮೊದಲ ಭಾಗಕ್ಕಿಂತ 2ನೇ ಭಾಗ ದೊಡ್ಡ ಮಟ್ಟದಲ್ಲಿ ಇರಲಿದೆಯಂತೆ. ಮೊದಲ ಭಾಗ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡ ಕಾರಣ 2ನೇ ಭಾಗದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಹಾಗಾಗಿ ಪುಷ್ಪ-2 ಸಿನಿಮಾವನ್ನು ಅದ್ದೂರಿಯಾಗಿ ತಯಾರಿಸುತ್ತಿದ್ದಾರೆ ಎನ್ನಲಾಗಿದೆ. ರಶ್ಮಿಕಾ, ಅಲ್ಲು ಅರ್ಜುನ್, ಫಹಾದ್ ಫಾಸಿಲ್ ಸೇರಿದಂತೆ ಇನ್ನು ಯಾರೆಲ್ಲ ಇರಲಿದ್ದಾರೆ, ಪುಷ್ಪ-2 ಹೇಗೆ ಮೂಡಿಬರಲಿದೆ ಎಂದು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.