ಅಲ್ಲು ಅರ್ಜುನ್ ಅರೆಸ್ಟ್ ಪುಷ್ಪಾ2 ಚಿತ್ರದ ಪ್ರಮೋಶನ್‌ಗೆ ಮಾಡಿದ ನಾಟಕ? ನಿರ್ದೇಶಕನ ಬಾಂಬ್!

ಅಭಿಮಾನಿ ಮೃತಪಟ್ಟ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಬಂಧನಕ್ಕೆ ಖ್ಯಾತ ನಿರ್ದೇಶಕ ಹೊಸ ಟ್ವಿಸ್ಟ್ ನೀಡಿದ್ದಾರೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ, ಪುಷ್ಪಾ 2 ಚಿತ್ರದ ಪ್ರಮೋಶನ್‌ಗಾಗಿ ಮಾಡಿದ ನಾಟಕ ಎಂದಿದ್ದಾರೆ. ನಿಜಕ್ಕೂ ಇದು ಡ್ರಾಮಾ ಆಗಿತ್ತಾ?

Allu Arjun arrest drama only for pushpa 2 movie publicity claims Ram Gopal verma ckm

ಹೈದರಾಬಾದ್(ಡಿ.14) ಪುಷ್ಪಾ2 ಚಿತ್ರ ಭರ್ಜರಿ ಯಶಸ್ಸು ಕಂಡು ಮುನ್ನುಗ್ಗುತ್ತಿದೆ. 1,100 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದರ ನಡುವೆ ಅಭಿಮಾನಿ ಮೃತಪಟ್ಟ ಪ್ರಕರಣದಲ್ಲಿ ಪುಷ್ಪಾ 2 ನಟ ಅಲ್ಲು ಅರ್ಜುನ್ ಬಂಧನ ಭಾರಿ ಕೋಲಾಹಲ ಸೃಷ್ಟಿಸಿದೆ. ಪ್ರಿಮಿಯರ್ ಶೋ ವೇಳೆ ಕಾಲ್ತುಳಿತಕ್ಕೆ ಮಹಿಳಾ ಅಭಿಮಾನಿ ಮೃತಪಟ್ಟ ಪ್ರಕರಣದಲ್ಲಿ ಎ12 ಆರೋಪಿಯಾಗಿದ್ದ ಅಲ್ಲು ಅರ್ಜುನ್ ಬಂಧನ ರಾಜಕೀಯ ಪ್ರೇರಿತ ಅನ್ನೋ ಆರೋಪ,ಜಟಾಪಟಿ ನಡೆಯುತ್ತಿದೆ. ಇತ್ತ ರೇವಂತ್ ರೆಡ್ಡಿ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಇದರ ನಡುವೆ ಖ್ಯಾತ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಹೊಸ ಬಾಂಬ್ ಸಿಡಿಸಿದ್ದಾರೆ. ಪುಷ್ಪಾ 2 ಚಿತ್ರದ ಪ್ರಮೋಶನ್‌ಗಾಗಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮಾಡಿದ ನಾಟಕ ಇದು ಎಂದು ರಾಮ್ ಗೋಪಾಲ್  ವರ್ಮಾ ಆರೋಪಿಸಿದ್ದಾರೆ.

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಿಡಿಸಿದ ಹೊಸ ಬಾಂಬ್ ಇದೀಗ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದೆ. ಸೋಶಿಯಲ್ ಮೀಡಿಯಾದಲ್ಲಿ ಮಾಡಿದ ಪೋಸ್ಟ್ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ  ನಟ ಅಲ್ಲು ಅರ್ಜುನ್ ವಿರುದ್ದ ತೆಗೆದುಕೊಂಡ ಕ್ರಮದ ಕುರಿತು ಎಲ್ಲರೂ ಅಚ್ಚರಿಗೊಂಡಿದ್ದಾರೆ. ನನ್ನ ಪ್ರಕಾರ ಇದು ಪುಷ್ಪಾ2 ಚಿತ್ರಕ್ಕೆ ರೇವಂತ್ ರೆಡ್ಡಿ ನೀಡಿದ ಪ್ರಮೋಶನ್ ಎಂದು ಅನಿಸುತ್ತದೆ. ತೆಲಂಗಾಣ ರಾಜ್ಯದ ನೆಚ್ಚಿನ ಪುತ್ರನ ಪುಷ್ಪಾ2 ಚಿತ್ರಕ್ಕೆ ಮತ್ತಷ್ಟು ಯಶಸ್ಸು ನೀಡಲು ಈ ಕ್ರಮ ಕೈಗೊಳ್ಳಲಾಗಿದೆ. 2ನೇ ವಾರವೂ ಕಲೆಕ್ಷನ್ ಹೆಚ್ಚಿಸಲು ಸಹಾಯ ಮಾಡಿದ್ದಾರೆ. ಪ್ರಕರಣದಲ್ಲಿ ರಾಜ್ಯ ಸರ್ಕಾರ ಅತ್ಯಂತ ಕೆಟ್ಟ ವಿಚಾರಣೆ ನಡೆಸಿದೆ. ಕೆಲವೇ ಗಂಟೆಗಳಲ್ಲಿ ಜಾಮೀನು ಕೂಡ ಸಿಕ್ಕಿದೆ. ಇದರಿಂದ ಪುಷ್ಪಾ 2 ಚಿತ್ರ ಮತ್ತಷ್ಟು ವಾರ ಭರ್ಜರಿ ಕಲೆಕ್ಷನ್ ಮಾಡಲು ಸಹಾಯವಾಗಿದೆ. ಮುಖ್ಯಮಂತ್ರಿ ರೇವಂತ್ ರೆಡ್ಡಿಗೆ ಧನ್ಯವಾದ. ತೆಲಂಗಾಣ ರಾಜ್ಯ ಹೆಮ್ಮೆ ಹಾಗೂ ಪುಷ್ಪಾ 2 ಚಿತ್ರಕ್ಕೆ ಯಶಸ್ಸು ನೀಡಿರುವುದಕ್ಕೆ ಧನ್ಯವಾದ ಎಂದಿದ್ದಾರೆ.

ಗಡಿಗೆ ಹೋಗಿ ಯುದ್ಧ ಮಾಡಿದ್ದಾರಾ? ಅಲ್ಲು ಅರ್ಜುನ್ ವಿರುದ್ಧ ಕಿಡಿ ಕಾರಿದ ಸಿಎಂ ರೇವಂತ್ ರೆಡ್ಡಿ!

ಅಲ್ಲು ಅರ್ಜುನ್ ಅಭಿಮಾನಿಗಳು, ಕೆಲ ರಾಜಕೀಯ ಮುಖಂಡರು ಅಲ್ಲು ಅರ್ಜುನ್ ಬಂಧನ ರಾಜಕೀಯ ಪ್ರೇರಿತ ಅನ್ನೋ ಆರೋಪ ಮಾಡಿದ್ದಾರೆ. ರೇವಂತ್ ರೆಡ್ಡಿ ರಾಜಕೀಯ ದ್ವೇಷಕ್ಕಾಗಿ ಈ ಬಂಧನ ಮಾಡಿಸಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿತ್ತು. ಆದರೆ ಇದಕ್ಕೆ ರೇವಂತ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಕಾನೂನು ಎಲ್ಲರಿಗೂ ಒಂದೆ, ಇಲ್ಲಿ ಸೆಲೆಬ್ರೆಟಿಗಳಿಗೆ ಬೇರೆ ಕಾನೂನು ಇಲ್ಲ. ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಪೊಲೀಸರು ವಿಚಾರಣೆಗೆ ಬಂಧಿಸಿದ್ದಾರೆ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.

 

 

ಏನಿದು ಪ್ರಕರಣ?
ಪುಷ್ಪಾ2 ಚಿತ್ರ ದೇಶಾದ್ಯಂತ ಬಿಡುಗಡೆಯಾಗಿದೆ. ಭಾರಿ ಯಶಸ್ಸು ಕಂಡಿದೆ. ಡಿಸೆಂಬರ್ 4 ರಂದು ಮಧ್ಯರಾತ್ರಿ ಪುಷ್ಪಾ2 ಚಿತ್ರದ ಪ್ರಿಮಿಯರ್ ಶೋ ಏರ್ಪಡಿಸಲಾಗಿತ್ತು. ಹೈದರಾಬಾದ್‌ನ ಸಂಧ್ಯಾ ಥಿಯೇಟರ‌್‌ನಲ್ಲಿ ಪ್ರಿಮಿಯರ್ ಶೋ ನೋಡು ಮಹಿಳಾ ಅಭಿಮಾನಿ ಕುಟುಂಬ ಸಮೇತ ಆಗಮಿಸಿದ್ದರು. ದಿಢೀರ್ ಆಗಿ ಸಂಧ್ಯಾ ಚಲನಚಿತ್ರ ಮಂದಿರಕ್ಕೆ ಅಲ್ಲು ಅರ್ಜುುನ್ ಭೇಟಿ ನೀಡಿದ್ದರು. ಇದರಿಂದ ನಟನ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಇತ್ತ ತೀವ್ರ ನೂಕು ನುಗ್ಗಲು ಸೃಷ್ಟಿಯಾಗಿತ್ತು.

ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ ಕಾರಣ ಕಾಲ್ತುಳಿತ ಸಂಭವಿಸಿತ್ತು. ಈ ಕಾಲ್ತುಳಿತದಲ್ಲಿ ಮಹಿಳಾ ಅಭಿಮಾನಿ ಮೃತಪಟ್ಟಿದ್ದರು. ಅಭಿಮಾನಿಯ ಪುತ್ರ ಗಂಭೀರಗಾಯಗೊಂಡು ಆಸ್ಪತ್ರೆ ದಾಖಲಿಸಲಾಗಿದೆ. ಈ ಪ್ರಕರಣ ಸಂಬಂಧ ಸಂಧ್ಯಾ ಥಿಯೇಟರ್ ಮಾಲೀಕ ಸೇರಿದಂತೆ ಅಲ್ಲು ಅರ್ಜುನ್ ಮೇಲೂ ಪ್ರಕರಣ ದಾಖಲಾಗಿದೆ. ಸೆಷನ್ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿದ್ದರೆ, ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು.
 

Latest Videos
Follow Us:
Download App:
  • android
  • ios