Asianet Suvarna News Asianet Suvarna News

ಕೊನೆಗೂ ಆರಂಭವಾಯ್ತು ಪುಷ್ಪ-2 ಶೂಟಿಂಗ್; ರಶ್ಮಿಕಾ ಮಂದಣ್ಣ ಹೇಳಿದ್ದೇನು?

ಪುಷ್ಪ-2 ಸಿನಿಮಾದ ಚಿತ್ರೀಕರಣ ಇಂದಿನಿಂದ (ಆಗಸ್ಟ್ 22) ಪ್ರಾರಂಭವಾಗಿದೆ. ಇಂದು ಹೈದರಾಬಾದ್‌ನಲ್ಲಿ ನಡೆದ ಪೂಜೆ ಸಮಾರಂಭದಲ್ಲಿ ಪುಷ್ಪ-2 ಸಿನಿಮಾಗೆ ಚಾಲನೆ ನೀಡಲಾಗಿದೆ. 

Allu Arjun and Rashmika Mandanna starrer sequel of Pushpa 2  finally start shoot on Monday sgk
Author
Bengaluru, First Published Aug 22, 2022, 12:49 PM IST

ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷೆಯ ಪುಷ್ಪ-2 ಸಿನಿಮಾ ಯಾವಾಗ ಪ್ರಾರಂಭವಾಗಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೀಗ ಸಿನಿಮಾದ ಬಗ್ಗೆ ಬಿಗ್ ಅಪ್‌ಡೇಟ್ ಹೊರಬಿದ್ದಿದ್ದು ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ಹೌದು, ಪುಷ್ಪ-2 ಸಿನಿಮಾದ ಚಿತ್ರೀಕರಣ ಇಂದಿನಿಂದ (ಆಗಸ್ಟ್ 22) ಪ್ರಾರಂಭವಾಗಿದೆ. ಈ ಬಗ್ಗೆ ಸಿನಿಮಾತಂಡ ಮಾಹಿತಿ ನೀಡಿದೆ. ಇಂದು ಹೈದರಾಬಾದ್‌ನಲ್ಲಿ ನಡೆದ ಪೂಜೆ ಸಮಾರಂಭದಲ್ಲಿ ಪುಷ್ಪ-2 ಸಿನಿಮಾಗೆ ಚಾಲನೆ ನೀಡಲಾಗಿದೆ. ಪುಷ್ಪ-2 ಚಿತ್ರದ ಮುಹೂರ್ತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಬಗ್ಗೆ ಪುಷ್ಪ ಸಿನಿಮಾದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿಸ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ 'ಪುಷ್ಪರಾಜ್ ಈಸ್ ಬ್ಯಾಕ್. ಈ ಬಾರಿ ಆಳ್ವಿಕೆ ಮಾಡುವುದು #ಪುಷ್ಪ ದಿ ರೂಲ್, ಪೂಜಾ ಸಮಾರಂಭ' ಎಂದು ಹೇಳಿದ್ದಾರೆ. ಇನ್ನು ಭಾರತದ ಅತ್ಯಂತ ನಿರೀಕ್ಷಿತ ಸೀಕ್ವೆಲ್ ಎಂದು ಹೇಳಿದ್ದಾರೆ. ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಸಿನಿಮಾಗಾಗಿ ಕಾಯುತ್ತಿದ್ದೇವೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಪುಷ್ಪ ದಿ ರೂಲ್ ಇತಿಹಾಸ ಸೃಷ್ಟಿಮಾಡಲಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. 

ಸುಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಪುಷ್ಪ; ದಿ ರೈಸ್ ಸಿನಿಮಾದ ಸೀಕ್ವೆಲ್ ಪುಷ್ಪ; ದಿ ರೂಲ್. ಪುಷ್ಪ ದಿ ರೈಸ್ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿದ್ದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದ್ದ ಅಲ್ಲು ಅರ್ಜುನ್ ನಟನೆಯ ಮೊದಲ ಸಿನಿಮಾ ಇದಾಗಿತ್ತು. ಅಲ್ಲು ಅರ್ಜುನ್ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು. ಜೊತೆಗೆ ಬಾಕ್ಸ್ ಆಫೀಸ್‌ನಲ್ಲೂ ಭರ್ಜರ್ ಕಮಾಯಿ ಮಾಡಿತ್ತು. 300 ಕೋಟಿ ರೂಪಾಯಿ ಬಾಚಿಕೊಂಡಿದೆ. ಎನಡನೇ ಭಾಗದ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.

ಪುಷ್ಪ ದಿ ರೈಸ್ ಸಿನಿಮಾದಲ್ಲಿ ಅಲ್ಲು ಅರ್ಜುನ್ ಲಾರಿ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಕ್ತ ಚಂದನ ಕಳ್ಳ ಸಾಗಣಿಕೆ ಬಗ್ಗೆ ಇರುವ ಸಿನಿಮಾ ಇದಾಗಿದ್ದು ಅಲ್ಲು ಅರ್ಜುನ್ ಡಿ ಗ್ಲಾಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ರಶ್ಮಿಕಾ ಕೂಡ ಡಿ ಗ್ಲಾಮ್ ಆಗಿ ಮಿಂಚಿದ್ದರು. ಇನ್ನು ಸಿನಿಮಾದ ಕೊನೆಯಲ್ಲಿ ಮಲಯಾಳಂ ಖ್ಯಾತ ನಟ ಫಹಾದ್ ಫಾಸಿಲ್ ಎಂಟ್ರಿ ಕೊಟ್ಟಿದ್ದರು. ಪಾರ್ಟ್-2ನಲ್ಲಿ ಪಾತ್ರ ಹೇಗಿರಲಿದೆ ಎಂದು ಅಬಿಮಾನಿಗಳು ಕಾಯುತ್ತಿದ್ದಾರೆ.

'ಪುಷ್ಪ' ದ ಶ್ರೀವಲ್ಲಿ ಐಕಾನಿಕ್ ಸ್ಟೆಪ್ ಸೃಷ್ಟಿ ಆಗಿದ್ದು ಹೇಗೆ, ಹೇಳ್ತಾರೆ ಅಲ್ಲು ಅರ್ಜುನ್!

ಸದ್ಯ ಪುಷ್ಪ ದಿ ರೂಲ್ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಈ ಸಿನಿಮಾದಲ್ಲಿ ಫಹಾದ್ ಪಾತ್ರ ಹೆಚ್ಚಾಗಿ ಇರಲಿದ್ದು, ಅಲ್ಲು ಅರ್ಜುನ್ ಮತ್ತು ಫಹಾದ್ ನಡುವಿನ ಮುಖಾಮುಖಿ, ಆಕ್ಷನ್ ದೃಶ್ಯಗಳು ಹೆಚ್ಚಾಗಿ ಇರಲಿದೆ ಎನ್ನಲಾಗುತ್ತಿದೆ. ಮೊದಲ ಭಾಗಕ್ಕಿಂತ ಎರಡನೇ ಭಾಗ ಮತ್ತಷ್ಟು ರೋಚಕ ಮತ್ತು ಭಯಾನಕವಾಗಿರಲಿದೆ ಎನ್ನುವ ಮಾತು ಕೇಳಿಬರುತ್ತಿದೆ.

ಅಲ್ಲು ಅರ್ಜುನ್ ಬದಲು ಶಾರುಖ್ ಖಾನ್ ಸಿನಿಮಾ ಸೇರಿದ್ದೇಕೆ ವಿಜಯ್ ಸೇತುಪತಿ?

ಇಂದಿನಿಂದ ಚಿತ್ರೀಕರಣ ಪ್ರಾರಂಭವಾದ ಬಗ್ಗೆ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 'ಭಾರತದ ಅತ್ಯಂತ ನಿರೀಕ್ಷೆಯ ಸಿನಿಮಾ ಪುಷ್ಪ ದಿ ರೂಲ್ ಇಂದು ಪೂಜೆ' ಎಂದು ಹೇಳಿದ್ದಾರೆ. ಚಿತ್ರೀಕರಣದ್ಲಲಿ ಭಾಗಿಯಾಗಲು ಸಖತ್ ಎಕ್ಸಾಯಿಟ್ ಆಗಿದ್ದ ರಶ್ಮಿಕಾ ಇಂದಿನಿಂದ ಪುಷ್ಪ2 ಶೂಟಿಂಗ್‌ಗೆ ಹಾಜರಾಗಿದ್ದಾರೆ. ಭಾಗ-2ನಲ್ಲಿ ಏನೆಲ್ಲ ಬದಲಾವಣೆಗಳು ಆಗಲಿದೆ, ಅಲ್ಲು ಅರ್ಜುನ್ ಅಬ್ಬರ ಹೇಗಿರಲಿದೆ ಎಂದು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. 

Follow Us:
Download App:
  • android
  • ios