ಅಯೋಧ್ಯೆಯಲ್ಲಿ ಆಲಿಯಾ: ರಾಮಾಯಣದಲ್ಲಿ ಮಿಂದೆದ್ದ ಮೈಸೂರು ಸಿಲ್ಕ್ ಸೀರೆ! ಏನಿದರ ವಿಶೇಷತೆ?
ಬಾಲರಾಮನ ಪ್ರಾಣಪ್ರತಿಷ್ಠೆಗೆ ಅಯೋಧ್ಯೆಯಲ್ಲಿ ಬಂದಿದ್ದ ಆಲಿಯಾ ಭಟ್ ರಾಮಾಯಣದ ಸೀರೆ ತೊಟ್ಟಿದ್ದರು. ಮೈಸೂರಿನ ಸಿಲ್ಕ್ ಸೀರೆಯಲ್ಲಿನ ರಾಮಾಯಣದ ವಿಶೇಷತೆ ಏನು?
ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಸಾಂಪ್ರದಾಯಿಕ ಉಡುಗೆಯಲ್ಲಿ ಅಯೋಧ್ಯೆಗೆ ಆಗಮಿಸಿದ ಅನೇಕ ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಆಲಿಯಾ ಭಟ್ ಕೂಡ ಸೇರಿದ್ದಾರೆ. ನಟಿಯ ಸೀರೆಯು ರಾಮಾಯಣ ವಿಷಯದ ಬಾರ್ಡರ್ ಅನ್ನು ಹೊಂದಿದ್ದರಿಂದ ಇನ್ನಷ್ಟು ವಿಶೇಷವಾಗಿತ್ತು. ಅದರ ಮೇಲೆ ಭಗವಾನ್ ರಾಮ, ಭಗವಾನ್ ಹನುಮಾನ್ ಮತ್ತು ರಾಮ ಸೇತುವಿನ ಕಸೂತಿ ಚಿತ್ರಗಳನ್ನು ಮಾಡಲಾಗಿದೆ. ನಟಿ ಅಯೋಧ್ಯೆಗೆ ಆಗಮನಿಸುತ್ತಿದ್ದಂತೆಯೇ, ಜನರ ಕಣ್ಣುಗಳು ಆಲಿಯಾ ಸೀರೆಯಂಚಿನ ಮೇಲೆ ಬಿದ್ದಿದೆ. ಇದರ ತುಂಬಾ ರಾಮಾಯಣ ಇರುವುದನ್ನು ನೋಡಿ ಫೋಟೋ ತೆಗೆದುಕೊಂಡು ಅದನ್ನು ಶೇರ್ ಮಾಡಿದ್ದಾರೆ.
ಇದೀಗ ಎಲ್ಲೆಲ್ಲೂ ನಟಿಯ ಸೀರೆಯದ್ದೇ ಚರ್ಚೆ. ಸೋಷಿಯಲ್ ಮೀಡಿಯಾದಲ್ಲಿ ನಟಿಯ ಸೀರೆಯ ಬಗ್ಗೆ ಹಲವಾರು ಹಲವು ರೀತಿಯ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆಲಿಯಾ ಚಳಿಯಿಂದ ರಕ್ಷಿಸಿಕೊಳ್ಳಲು ಶಾಲು ಮತ್ತು ಸೀರೆಗೆ ಹೊಂದುವ ಪರ್ಸ್ ಅನ್ನು ಸಹ ಧರಿಸಿದ್ದರು. ಅವರ ಜೊತೆಗೆ ನಟ, ಪತಿ ರಣಬೀರ್ ಕಪೂರ್ ಇದ್ದರು, ಅವರು ಕ್ರೀಮ್ ಶಾಲಿನೊಂದಿಗೆ ಬಿಳಿ ಕುರ್ತಾ-ಪೈಜಾಮವನ್ನು ಧರಿಸಿದ್ದರು. ಇದೀಗ ಆಲಿಯಾ ಅವರ ಅಭಿಮಾನಿ ಪುಟವು ಆಲಿಯಾ ಭಟ್ ಅವರ ಸೀರೆಯ ಜೂಮ್-ಇನ್ ಚಿತ್ರವನ್ನು ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. "ಆಲಿಯಾ ಭಟ್ ಸಂಪೂರ್ಣ ರಾಮಾಯಣವನ್ನು ಚಿತ್ರಿಸುವ ಮೋಟಿಫ್ಗಳೊಂದಿಗೆ ಸೀರೆಯನ್ನು ಧರಿಸಿದ್ದಾರೆ" ಎಂದು ಶೀರ್ಷಿಕೆ ಬರೆಯಲಾಗಿದೆ. ಕಿವಿಗೆ ರುದ್ರಾಕ್ಷಿ ಮಾದರಿಯ ಕಿವಿಯೋಲೆಗಳನ್ನು ಧರಿಸಿದ್ದರು. ಕೂದಲನ್ನು ಸ್ಟೈಲ್ ಆಗಿ ಹೆಣೆದು ತುರುಬು ಕಟ್ಟಿದ್ದರು. ಅವರ ಲುಕ್ ಅನ್ನು ಜನ ಮೆಚ್ಚಿಕೊಂಡಿದ್ದು, ರಾಮನ ಮೇಲಿನ ಭಕ್ತಿಗೆ ಜೈ ಅಂದಿದ್ದಾರೆ.
ನೃತ್ಯ, ಸಂಗೀತ, ಜಪದ ಮೂಲಕ ಸ್ಯಾಂಡಲ್ವುಡ್ನಲ್ಲಿ ರಾಮನ ಸ್ಮರಣೆ... ಯಾರು ಹೇಗೆಲ್ಲಾ ಆಚರಿಸಿದ್ರು ನೋಡಿ...
ಇನ್ನು ಈ ಸೀರೆಯ ವಿಶೇಷತೆ ಕುರಿತು ಹೇಳುವುದಾದರೆ, ಸಂಕೀರ್ಣವಾದ ಪಲ್ಲು ವಿನ್ಯಾಸವನ್ನು 10 ದಿನಗಳಲ್ಲಿ ತಯಾರಿಸಲಾಗಿದೆ. ಇದನ್ನು ಡಿಸೈನ್ ಮಾಡಿರುವುದು ಡಿಸೈನರ್ ಭಾರತಿ ಹರೀಶ್. ಅಂದಹಾಗೆ, ಆಲಿಯಾ ಅವರಿಗೂ ಈ ಸೀರೆಗೂ ಕರ್ನಾಟಕದ ನಂಟಿದೆ! ಹೌದು. ರಾಮಲಲ್ಲಾ ಪ್ರಾಣಪ್ರತಿಷ್ಠೆಗೆಂದು ಆಲಿಯಾ ಕರ್ನಾಟಕದಿಂದ ಮೈಸೂರು ಸಿಲ್ಕ್ ಸೀರೆ ಖರೀದಿಸಿದ್ದರು. ಅದಾದ ಬಳಿಕ ಸೀರೆಯ ಸೆರಗಿನಲ್ಲಿ ರಾಮಾಯಣ ಕೈಯಿಂದ ಮುದ್ರಿಸಲಾಗಿದೆ, ಅಲ್ಲಿ ನೀವು ರಾಮಾಯಣದಲ್ಲಿ ಉಲ್ಲೇಖಿಸಲಾದ ಪ್ರಮುಖ ಕ್ಷಣಗಳ ಚಿತ್ರಣವನ್ನು ನೋಡಬಹುದು. ರಾಮನು ಶಿವಧನುಷವನ್ನು ಒಡೆಯುವುದು, ರಾಮನನ್ನು ಕಾಡಿಗೆ ಹೋಗುವಂತೆ ಹೇಳುವುದು, ಗಂಗೆಯ ಸೇತುವೆ, ಚಿನ್ನದ ಜಿಂಕೆ ಮತ್ತು ಅಪಹರಣ ಮುಂತಾದ ವಿವರಗಳು ಈ ಸೀರೆಯಲ್ಲಿ ಇವೆ. ನಾಲ್ಕು ಇಂಚಿನ ಸೆರಗಿನಲ್ಲಿ ಇವೆಲ್ಲವೂ ಒಳಗೊಂಡಿದೆ.
ಈ ಕುರಿತು ಮಾತನಾಡಿರುವ ಭಾರತಿ ಹರೀಶ್, “ಇಬ್ಬರು ಕಲಾವಿದರು ಸತತ 10 ದಿನಗಳ ಕಾಲ ಇದನ್ನು ಮಾಡಲು ಶ್ರಮಿಸಿದ್ದಾರೆ. ಸೀರೆಯ ಬೆಲೆ ಸುಮಾರು 45 ಸಾವಿರ ರೂಪಾಯಿ ಎಂದು ಅವರು ಹೇಳಿದ್ದಾರೆ. ಈ ರಾಮಾಯಣ ಸ್ಫೂರ್ತಿಯ ಸೀರೆಗೆ ಸೂಟ್ ಆಗುವಂತೆ ನಟಿ ಆಲಿಯಾ ಅದೇ ಬಣ್ಣದ ಪೊಟ್ಲಿ ಬ್ಯಾಗ್ ಕೂಡ ಕೈಯಲ್ಲಿ ಹಿಡಿದಿದ್ದರು. ಕಿವಿಗೆ ರುದ್ರಾಕ್ಷಿ ಮಾದರಿಯ ಕಿವಿಯೋಲೆಗಳನ್ನು ಧರಿಸಿದ್ದರು. ಕೂದಲನ್ನು ಸ್ಟೈಲ್ ಆಗಿ ಹೆಣೆದು ತುರುಬು ಕಟ್ಟಿದ್ದರು. ಅಂದಹಾಗೆ ಆಲಿಯಾ ಮತ್ತು ರಣಬೀರ್ ಜೊತೆಗೆ, ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್, ಮಾಧುರಿ ದೀಕ್ಷಿತ್, ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ಆಯುಷ್ಮಾನ್ ಖುರಾನಾ, ಕಂಗನಾ ರನೌತ್, ಅನುಪಮ್ ಖೇರ್ ಮತ್ತು ಜಾಕಿ ಶ್ರಾಫ್ ಸೋಮವಾರ ರಾಮಮಂದಿರ ಪ್ರಾಣ ಪ್ರತಿಷ್ಠೆಯ ಭಾಗವಾದರು.
ಬಾಲರಾಮನ ಪ್ರಾಣಪ್ರತಿಷ್ಠೆ ಬಳಿಕ ನಟ ಯಶ್ ಏನಂದ್ರು? ವಿಡಿಯೋ ಮೂಲಕ ಸುದೀಪ್ ವಿಶೇಷ ನಮನ