ನಟಿ ಆಲಿಯಾ ಭಟ್​ ತಾವು ಲಿಪ್​ಸ್ಟಿಕ್​ ಏಕೆ ಹಚ್ಚುವುದಿಲ್ಲ ಎಂದು ವಿಡಿಯೋದಲ್ಲಿ ತಿಳಿಸಿದ್ದು, ಪತಿ ರಣಬೀರ್​ ಮೇಲೆ ಫ್ಯಾನ್ಸ್​ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಅಷ್ಟಕ್ಕೂ ನಟಿ ಹೇಳಿದ್ದೇನು?  

ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್​ ಕ್ಯೂಟ್​ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ (Alia Bhatt). ಅದರಲ್ಲಿಯೂ ಸದ್ಯ ಹಿಂದಿ ಚಿತ್ರರಂಗದ ಯಶಸ್ವಿ ನಟಿಯ ಬಗ್ಗೆ ಹೇಳಿದರೆ ಅದರಲ್ಲಿ ಆಲಿಯಾ ಭಟ್ ಹೆಸರು ಸೇರುವುದು ಖಚಿತ. ಒಂದೆಡೆ ಇಂಡಸ್ಟ್ರಿಯ ಹಲವು ದೊಡ್ಡ ನಟರು ಹಿಟ್ ಚಿತ್ರದ ಹುಡುಕಾಟದಲ್ಲಿ ಬ್ಯುಸಿಯಾಗಿದ್ದರೆ, ಆಲಿಯಾ ಒಂದಿಲ್ಲೊಂದು ಹಿಟ್ ನೀಡುತ್ತಿದ್ದಾರೆ. 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ನಟಿಯ ಮತ್ತೊಂದು ಯಶಸ್ವಿ ಚಿತ್ರವಾಗಿದೆ. ಈ ಹಿಂದೆ ಆಲಿಯಾ ಅಭಿನಯದ 'ಗಂಗೂಬಾಯಿ ಕಥಿವಾಡಿ' ಮತ್ತು 'ಬ್ರಹ್ಮಾಸ್ತ್ರ' ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್ ಆಗಿದ್ದವು. ಇವರ ಒಟ್ಟೂ 8 ಚಿತ್ರಗಳು 100 ಕೋಟಿ ಕ್ಲಬ್​ಗೆ ಸೇರಿವೆ. ಸದ್ಯ ಇವರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಕತ್​ ಸುದ್ದಿ ಮಾಡುತ್ತಿದೆ. ಅದೇ ಇನ್ನೊಂದೆಡೆ, 2022ರ ಏಪ್ರಿಲ್​ 14ರಂದು ಆಲಿಯಾ ಮತ್ತು ರಣಬೀರ್​ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಸಿರಿದ್ದು, ಈಗ ಅಮ್ಮ ಕೂಡ ಹೌದು. ಇವರದ್ದು ಬಾಲಿವುಡ್​ನ ಕ್ಯೂಟ್​ ಜೋಡಿ ಎನ್ನಲಾಗುತ್ತದೆ. ಆದರೆ ಇದೀಗ ಆಲಿಯಾ ಭಟ್​ ತಮ್ಮ ಲಿಪ್​ಸ್ಟಿಕ್​ ಕುರಿತು ನೀಡಿರುವ ಹೇಳಿಕೆಯಿಂದಾಗಿ ಪತಿ ರಣಬೀರ್​ ಕಪೂರ್​ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಇಷ್ಟೆಲ್ಲಾ ಸಕ್ಸಸ್​ ಆಗಿರುವಾಗ ಇನ್ನೂ ಪತಿಯ ಮಾತನ್ನು ಕೇಳುತ್ತಿರುವ ಬಗ್ಗೆ ಆಲಿಯಾ ಭಟ್​ ಮೇಲೆ ಮುನಿಸನ್ನೂ ತೋರಿಸುತ್ತಿದ್ದಾರೆ. ಅಷ್ಟಕ್ಕೂ ಏನಪ್ಪಾ ಇದು ಲಿಪ್​ಸ್ಟಿಕ್​ ಕಥೆ ಎಂದರೆ, ಆಲಿಯಾ ಭಟ್​ ಒಂದು ವಿಡಿಯೋ ಮಾಡಿ ಅದರಲ್ಲಿ ಲಿಪ್​ಸ್ಟಿಕ್​ ಕುರಿತು ಹೇಳಿಕೊಂಡಿದ್ದಾರೆ. ವೋಗ್ ಇಂಡಿಯಾದ ವಿಡಿಯೋ ಒಂದರಲ್ಲಿ ಆಲಿಯಾ ಭಟ್ ಲಿಪ್​ಸ್ಟಿಕ್ ಬಗ್ಗೆ ಮಾತನಾಡಿದ್ದಾರೆ. ತಮಗೆ ಲಿಪ್​ಸ್ಟಿಕ್ ಎಂದರೆ ಹೆಚ್ಚು ಇಷ್ಟ ಎಂದಿರುವ ನಟಿ, ತಾವು ಅದನ್ನು ಹೇಗೆ ಹಚ್ಚುವುದು ಎಂಬುದನ್ನು ವಿವರಿಸಿದ್ದಾರೆ. ಆದರೆ ಕೊನೆಯಲ್ಲಿ ಅದನ್ನು ಒರೆಸಿಬಿಡುತ್ತೇನೆ. ಲಿಪ್​ಸ್ಟಿಕ್​ ಹಚ್ಚಿದರೂ ಅದು ಕಾಣದಂತೆ ಒರೆಸಿ ಲೈಟ್​ ಆಗಿ ಇರಿಸಿಕೊಳ್ಳುತ್ತೇನೆ ಎಂದಿದ್ದಾರೆ.

ಇದಕ್ಕೆ ಅವರು ನೀಡಿರುವ ಕಾರಣ ಮಾತ್ರ ಕುತೂಹಲವಾದದ್ದು. ಆಲಿಯಾ ಹೇಳಿದ್ದೇನೆಂದರೆ, ನನ್ನ ಗಂಡ ರಣಬೀರ್​ ಕಪೂರ್​ಗೆ (Ranbir Kapoor) ಲಿಪ್​​ಸ್ಟಿಕ್​ ಹಚ್ಚುವುದು ಇಷ್ಟವಿಲ್ಲ. ನಾನು ಇದನ್ನು ಹಚ್ಚಿದರೆ ಅವರೇ ಒರೆಸಿಬಿಡುತ್ತಾರೆ. ಏಕೆಂದರೆ ನನ್ನ ನ್ಯಾಚುರಲ್​ ತುಟಿಯ ಬಣ್ಣ ಅವರಿಗೆ ಇಷ್ಟ. ರಣಬೀರ್ ಕಪೂರ್ ನನ್ನ ಗಂಡನಾಗುವ ಮೊದಲು, ಅವರು ಬಾಯ್​ಫ್ರೆಂಡ್ ಕೂಡ ಆಗಿದ್ದರೂ. ಆಗಿನಿಂದಲೂ ಅವರಿಗೆ ಲಿಪ್​ಸ್ಟಿಕ್​ ಎಂದರೆ ಆಗುವುದಿಲ್ಲ. ಲಿಪ್​ಸ್ಟಿಕ್ ಹಚ್ಚಿದರೆ ಅದನ್ನು ಒರೆಸು ಒರೆಸು ಎಂದು ಪದೇ ಪದೇ ಹೇಳುತ್ತಾರೆ. ರಣಬೀರ್​ಗೆ ನನ್ನ ತುಟಿಗಳ ನ್ಯಾಚುರಲ್ ಕಲರ್ ಇಷ್ಟ ಎಂದು ಆಲಿಯಾ ಹೇಳಿದ್ದಾರೆ. ಆಲಿಯಾ ಏನೋ ಇದನ್ನು ಅಷ್ಟು ಸೀರಿಯಸ್ಸಾಗಿ ತೆಗೆದುಕೊಳ್ಳದೇ ನ್ಯಾಚುರಲ್​ ಆಗಿ ಹೇಳಿದ್ದಾರೆ. ಗಂಡನ ಮೇಲಿನ ಪ್ರೀತಿಯಿಂದಲೇ ಹೇಳಿದ್ದಾರೆ. ಆದರೆ ಆಕೆಯ ಫ್ಯಾನ್ಸ್​ಗೆ ಇದು ಉರಿದು ಹೋಗಿದೆ.

ಗರ್ಭಿಣಿಯಾಗಿದ್ದ ಸುದ್ದಿಯನ್ನು ಪತಿಗಿಂತಲೂ ಮೊದ್ಲು ಆ ಸ್ಟಾರ್​ಗೆ ತಿಳಿಸಿದ್ರಂತೆ ಆಲಿಯಾ!

ಸಾಮಾನ್ಯವಾಗಿ ಕೆಲವು ಮಹಿಳೆಯರ ಮೇಲೆ ಪತಿಯಂದಿರುವ ಒಂದಲ್ಲ ಒಂದು ರೀತಿ ದೌರ್ಜನ್ಯ ನಡೆಸುತ್ತಾರೆ. ಕೆಲವೊಮ್ಮೆ ಅದು ಸಣ್ಣ ಮಟ್ಟಿಗೆ ಎನ್ನಿಸಿದರೂ ಅಸಲಿಗೆ ಅದು ದೊಡ್ಡ ವಿಚಾರವೇ. ಈಗ ಇಂಥ ಸೆಲೆಬ್ರಿಟಿಯಾದರೂ ನಿಮ್ಮ ಮೇಲೆ ನಡೆಯುತ್ತಿರುವುದು ಒಂದು ರೀತಿಯ ದೌರ್ಜನ್ಯವೇ ಎಂದಿದ್ದಾರೆ ಫ್ಯಾನ್ಸ್​. ನಟಿಯಾದಾಕೆಗೆ ಲಿಪ್​ಸ್ಟಿಕ್​ ಅತ್ಯಗತ್ಯ. ಇದು ಗೊತ್ತಿದ್ದ ಮೇಲೆ ನಟಿಯನ್ನು ಏಕೆ ಅವ್ರು ಮದ್ವೆಯಾಗಬೇಕಿತ್ತು ಎಂದು ಪ್ರಶ್ನಿಸಿರೋ ಅಭಿಮಾನಿಗಳು, ಇಂಥ ಪತಿ ನಿಮ್ಗೆ ಬೇಕಾ ಎಂದೂ ಕೇಳುತ್ತಿದ್ದಾರೆ! ಬಹಳಷ್ಟು ಜನರು ಇದಕ್ಕೆ ಪ್ರತಿಕ್ರಿಯಿಸಿ ಇದು ರೆಡ್​ ಫ್ಲ್ಯಾಗ್ (Reg Flag) ಎಂದು ಕರೆದ್ದಾರೆ. ಇದನ್ನು ನೀವು ಅಷ್ಟು ಸೀರಿಯಸ್​ ಆಗಿ ತೆಗೆದುಕೊಳ್ಳದೇ ಇರಬಹುದು. ಆದರೆ ಇದು ಪತ್ನಿಯ ಮೇಲೆ ಮಾಡ್ತಿರೋ ದೌರ್ಜನ್ಯ ಎನ್ನುತ್ತಿದ್ದಾರೆ ಟ್ರೋಲಿಗರು!

ಈ ಹಿಂದೆ ಆಲಿಯಾ ಭಟ್ ಅವರು ಇದೇ ರೀತಿ ಹೇಳಿಕೆ ಕೊಟ್ಟಿದ್ದರು. ವಾದ ಮಾಡುವಾಗ ನನ್ನ ಸ್ವರ ಒಂದು ಲಿಮಿಟ್​ಗಿಂತ ಹೆಚ್ಚಾದರೆ ರಣಬೀರ್ ಇಷ್ಟ ಪಡುವುದಿಲ್ಲ ಎಂದಿದ್ದರು. ನಾನು ನನ್ನ ಕೋಪವನ್ನು ನಿಯಂತ್ರಿಸಲು ತುಂಬಾ ಕಷ್ಟಪಡಬೇಕು. ನನ್ನ ಪತಿಗೆ ನನ್ನ ಕೋಪ ಇಷ್ಟವಿಲ್ಲ. ನನ್ನ ಧ್ವನಿ ಒಂದು ಮಟ್ಟಕ್ಕಿಂತ ಹೆಚ್ಚಾಗುವುದನ್ನು ರಣಬೀರ್ ಇಷ್ಟಪಡುವುದಿಲ್ಲ. ನಾವು ಕೋಪ ಹಾಗೂ ದುಃಖದಲ್ಲಿದ್ದಾಗಲೂ ನಾವು ಕರುಣೆ ಇದ್ದವರಾಗಿ ವರ್ತಿಸುವುದು ತುಂಬಾ ಅಗತ್ಯ ಎನ್ನುತ್ತಾರಂತೆ ರಣಬೀರ್ ಎಂದಿದ್ದರು. ಆಗಲೂ ಆಲಿಯಾಗೆ ಫ್ಯಾನ್ಸ್ ಬುದ್ಧಿ ಹೇಳಿದ್ದರು. 

ಆಲಿಯಾ ಮದುವೆ ಮೆಹಂದಿ ಡಿಸೈನ್​ಗಾಗಿ ಮಹಿಳೆಯರ ಕಿತ್ತಾಟ! ವಾದ-ಪ್ರತಿವಾದಗಳ ಸುರಿಮಳೆ

View post on Instagram