ಮಗಳು 25 ವರ್ಷದವರೆಗೆ ಹೀಗಿರಬೇಕು ಎಂದಿದ್ದಾರೆ ನಟಿ Alia Bhatt!

ನಟಿ ಆಲಿಯಾ ಭಟ್​ ಪುತ್ರ ರಾಹಾ ಇದಾಗಲೇ ನಾಲ್ಕು ತಿಂಗಳಿನವಳಾಗಿದ್ದಾಳೆ. ಸದ್ಯ ಆಲಿಯಾ ಚಿತ್ರಕ್ಕೆ ಬ್ರೇಕ್​ ಕೊಟ್ಟಿದ್ದು ಮಗಳಿಗಾಗಿ ಸಮಯ ಮೀಸಲು ಇಟ್ಟಿದ್ದಾರೆ. ಹಾಗಿದ್ದರೆ ಅವರು ಮಗಳ ಜೊತೆ ಹೇಗೆ ಕಾಲ ಕಳೆಯುತ್ತಾರೆ?
 

Alia Bhatt reveals how her daughter would for next 25 years

ಬಾಲಿವುಡ್​ನ ಕ್ಯೂಟ್​ ಸ್ಟಾರ್​  ಆಲಿಯಾ ಭಟ್ (Alia Bhatt) 18 ನೇ ವಯಸ್ಸಿನಲ್ಲಿ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು ಮತ್ತು ಅಂದಿನಿಂದ ಅವರು ಸಾಕಷ್ಟು ಮನ್ನಣೆ ಗಳಿಸಿದ್ದಾರೆ. ಅವರು ಕಳೆದ ಏಪ್ರಿಲ್​ ತಿಂಗಳಿನಲ್ಲಿ ನಟ ರಣವೀರ್​ ಕಪೂರ್​ (Ranabeer Kapoor) ಅವರನ್ನು ಮದುವೆಯಾಗಿ ನವೆಂಬರ್​ನಲ್ಲಿಯೇ  ಹೆಣ್ಣುಮಗುವಿನ ತಾಯಿಯಾಗಿದ್ದಾರೆ. ತಾಯಿಯಾದ  ಬಳಿಕ  ಆಲಿಯಾ ಸದ್ಯ ಚಿತ್ರರಂಗದಿಂದ ದೂರವಿದ್ದಾರೆ.  ಕಳೆದ ವರ್ಷ ಬಿಡುಗಡೆಯಾದ ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಬ್ಲಾಕ್​ ಬಸ್ಟರ್​ ಚಿತ್ರ ‘ಗಂಗೂಬಾಯಿ ಕಥಿಯಾವಾಡಿ’(Gangubai Kathiawadi) ಯಲ್ಲಿನ ಆಲಿಯಾ ಅಭಿನಯಕ್ಕೆ ಮನಸೋಲದವರೇ ಇಲ್ಲ. ಮುಂಬೈನ ಕಾಮಾಟಿಪುರದ ವೇಶ್ಯೆ, ಮಾಫಿಯಾ ಡಾನ್ ಗಂಗೂಬಾಯಿ  ಅವರ ಜೀವನಚರಿತ್ರೆಯೇ ಈ ಚಿತ್ರ. ಬಾಕ್ಸ್‌ ಆಫೀಸ್‌ನಲ್ಲಿ ಅಕ್ಷರಶಃ ಮ್ಯಾಜಿಕ್ ಮಾಡಿತ್ತು. ಬಿಡುಗಡೆಯಾದ ಮೊದಲ ದಿನವೇ ಈ ಚಿತ್ರ ಬರೋಬ್ಬರಿ 10.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು ಎನ್ನುವ ಖ್ಯಾತಿ ಗಳಿಸಿರೋ ಆಲಿಯಾ, ವೃತ್ತಿಯ ಉತ್ತುಂಗದಲ್ಲಿ ಇರುವಾಗಲೇ ಮಗಳಿಗಾಗಿ ಚಿತ್ರರಂಗದಿಂದ ಬ್ರೇಕ್​ ಪಡೆದಿದ್ದಾರೆ.  

ಈ ಕುರಿತು ಇತ್ತೀಚೆಗೆ ಆಲಿಯಾ ಹೇಳಿಕೊಂಡಿದ್ದರು.  ಚಿತ್ರರಂಗದಿಂದ ತಾತ್ಕಾಲಿಕ ಬ್ರೇಕ್​ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದರು.  ತಾವು ತಾಯ್ತನದ ಸಂಪೂರ್ಣ ಖುಷಿಯನ್ನು ಅನುಭವಿಸುವುದಕ್ಕಾಗಿ ಬ್ರೇಕ್​ (Break) ತೆಗೆದುಕೊಳ್ಳುತ್ತಿರುವುದಾಗಿ ಅವರು ಇದಾಗಲೇ ಘೋಷಿಸಿದ್ದಾರೆ.  ಅನೇಕ ನಟಿಯರು ತಾಯಿಯಾದ ಬಳಿಕ ಸಿನಿಮಾಗಳಿಂದ ದೂರ ಉಳಿದ ಅನೇಕ ಉದಾಹರಣೆಗಳಿವೆ. ಅವರ ಹಾದಿಯಲ್ಲಿ ಈಗ ಆಲಿಯಾ ಸಾಗಿದ್ದಾರೆ. ಅಂದಹಾಗೆ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕಳೆದ ವರ್ಷ ಏಪ್ರಿಲ್‌ನಲ್ಲಿ ವಿವಾಹವಾದರು. ಅದೇ ವರ್ಷ ನವೆಂಬರ್​ನಲ್ಲಿ ಇವರಿಗೆ ಮಗಳು ಹುಟ್ಟಿದ್ದು, ಅದಕ್ಕೆ  ರಾಹಾ ಎಂದು ಹೆಸರು ಇಟ್ಟಿದ್ದಾರೆ. ಈಗ ಮಗಳಿಗೆ ನಾಲ್ಕು ತಿಂಗಳು. ಸಂಪೂರ್ಣ ಮಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಆಲಿಯಾ. 

Alia Bhatt ಉತ್ತಮ ಪತ್ನಿ ಹೌದೋ, ಅಲ್ವೊ? ಶಾಕಿಂಗ್​ ಹೇಳಿಕೆ ಕೊಟ್ಟ ಪತಿ ರಣಬೀರ್
 

 ಆಲಿಯಾ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡಿರುವಾಗ , ರಣಬೀರ್ ಮಗಳು ರಾಹಾಳನ್ನು ನೋಡಿಕೊಳ್ಳುತ್ತಿದ್ದಾರೆ.  ಅವರಿಬ್ಬರೂ ಕೆಲಸ ಮಾಡುವಾಗ ರಣಬೀರ್​ ಅವರ ತಾಯಿ, ನಟಿ ನೀತು ಕಪೂರ್ ಅಥವಾ ಆಲಿಯಾ ಕುಟುಂಬದ ಯಾರಾದರೂ ಯಾವಾಗಲೂ ರಾಹಾ ಅವರೊಂದಿಗೆ ಇರುತ್ತಾರೆ. ಆದರೆ ಆಲಿಯಾ, ಮಗಳು ರಾಹಾ ಜೊತೆ ಹೇಗೆ ಸಮಯ ಕಳೆಯುತ್ತಾರೆ ಎಂಬ ಬಗ್ಗೆ  ಮ್ಯಾಗಜೀನ್‌ಗೆ (Magazine) ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. 
 
ನಾಲ್ಕು ತಿಂಗಳ ಮಗಳು ರಾಹಾಗೆ (Raha) ಪುಸ್ತಕ ಎಂದರೆ ತುಂಬಾ ಇಷ್ಟ ಎಂದು ಆಲಿಯಾ ಹೇಳಿದ್ದಾರೆ. 'ಪುಸ್ತಕ ಓದಲು ರಾಹಾ ಹಾತೊರೆಯುತ್ತಾಳೆ. ಏನಾದರೂ ಕಥೆ ಹೇಳಿದರೆ ತುಂಬಾ ಗಮನವಿಟ್ಟು ಕೇಳುತ್ತಾಳೆ. ಪುಸ್ತಕಕ್ಕಾಗಿ ಕೈ ಚಾಚುತ್ತಾಳೆ, ತಾನೂ ಓದಲು ಹವಣಿಸುತ್ತಾಳೆ' ಎಂದು ಆಲಿಯಾ ಹೇಳಿದ್ದಾರೆ. ಇದಕ್ಕಾಗಿಯೇ ಆಕೆಯ ಎದುರು ಹೆಚ್ಚು ಹೆಚ್ಚು ಪುಸ್ತಕ ಓದುವುದಾಗಿ ಅವರು ಹೇಳಿದ್ದಾರೆ.  ಆಲಿಯಾ ಬ್ರ್ಯಾಂಡ್ ಎಡ್-ಎ-ಮಮ್ಮಾ (Brand A Mumma) ಮೂಲಕ ಕಥೆಪುಸ್ತಕಗಳನ್ನು ಪ್ರಾರಂಭ ಮಾಡುವ ಯೋಚನೆ ಮಾಡುತ್ತಿದ್ದಾರಂತೆ. ಈ ಕುರಿತು ಮಾತನಾಡಿದ ಅವರು, 'ನನ್ನ ಮನಸ್ಸಿನಲ್ಲಿ ಒಂದೆರಡು ವಿಚಾರಗಳಿವೆ. ಒಂಬತ್ತು ಕಥೆಗಳ ಸರಣಿಯನ್ನು ಮಾಡಲು ಬಯಸುತ್ತಿದ್ದೇನೆ. ಇವುಗಳಲ್ಲಿ ಸಂತೋಷ, ಭರವಸೆ ಮತ್ತು ದಯೆಯಂತಹ ಭಾವನೆಗಳು ಇರಲಿವೆ. ಈ ಬಗ್ಗೆ ಇನ್ನೂ ಯೋಜನೆ ರೂಪಿಸುತ್ತಿದ್ದೇನೆ' ಎಂದಿದ್ದಾರೆ.

ಡೆಲಿವರಿ ಆದ್ಮೇಲೆ ಹೆಚ್ಚಾಗಿತ್ತು ಮೊಡವೆ ಕಾಟ: ಗುಟ್ಟು ಬಿಚ್ಚಿಟ್ಟ ನಟಿ Alia Bhatt
 
ಅದೇ ರೀತಿ ಮಗಳು ರಾಹಾ 25 ವರ್ಷದವಳಾಗುವವರೆಗೆ ಹೇಗಿರಬೇಕು ಎಂಬ ಬಗ್ಗೆ ಆಲಿಯಾ  ಯೋಚನೆ ಮಾಡಿದ್ದಾರಂತೆ. ಮಗಳ ಭವಿಷ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಮಗಳು ರಾಹಾ  ಎಲ್ಲೇ ಇದ್ದರೂ,  ಸಂತೋಷವಾಗಿರಬೇಕು. ಆಕೆ  ತನ್ನ ನಿಜವಾದ ಆತ್ಮವಾಗಿ ಬದುಕಬೇಕು.  ಬೇರೊಬ್ಬರ ಜೊತೆ ಪ್ರೀತಿಯಲ್ಲಿ ಬೀಳುವ ಮೊದಲು ತನ್ನನ್ನು ಪ್ರೀತಿಸುವುದನ್ನು ಕಲಿಯಬೇಕು ಮತ್ತು ಈಗಿನಂತೆಯೇ ಮುಂದೆ ಕೂಡ ಮಗಳ ಜೊತೆಯೇ ಹೆಚ್ಚು ಸಮಯವನ್ನು ನಾನು ಕಳೆಯಬೇಕು' ಹೀಗೆ ಹತ್ತು ಹಲವು ಯೋಚನೆಗಳು ನನ್ನ ತಲೆಯಲ್ಲಿ ಇವೆ. ಮಗಳು 25 ವರ್ಷದವಳಾಗುವವರೆಗೆ ಏನೇನು ಮಾಡಬೇಕು ಎಂಬ ಬಗ್ಗೆ ತಲೆಯಲ್ಲಿ ಕೆಲವೊಂದು ಯೋಚನೆಗಳು ಹೊಳೆಯುತ್ತಲೇ ಇರುತ್ತವೆ ಎಂದಿದ್ದಾರೆ. 

Latest Videos
Follow Us:
Download App:
  • android
  • ios