ಅವಾರ್ಡ್​ ಫಂಕ್ಷನ್​ನಲ್ಲಿ ರಣಬೀರ್​-ಆಲಿಯಾ ಇದೆಂಥ ರೊಮ್ಯಾನ್ಸ್​! ಆಕೆ ತೃಪ್ತಿ ಡಿಮ್ರಿ ಅಲ್ಲಪ್ಪಾ ಎಂದ ಫ್ಯಾನ್ಸ್​

ಫಿಲ್ಮ್​ಫೇರ್​ ಅವಾರ್ಡ್​ ಫಂಕ್ಷನ್​ನಲ್ಲಿ ರಣಬೀರ್​-ಆಲಿಯಾ  ರೊಮ್ಯಾನ್ಸ್​ ಮಾಡಿರುವ ವಿಡಿಯೋ ವೈರಲ್​ ಆಗಿದೆ. ಅನಿಮಲ್​ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದಾಗ ನೆಟ್ಟಿಗರು ಏನಂದ್ರು?
 

Alia Bhatt Ranbir Kapoor kiss as they dance to Jamal Kudu at Filmfare 2024 fans reacts suc

2024ನೇ ಸಾಲಿನ ಫಿಲ್ಮ್​ಫೇರ್​ ಅವಾರ್ಡ್​ ಕಾರ್ಯಕ್ರಮ ಜನವರಿ 28ರಂದು ಗುಜರಾತ್​ನ ಗಾಂಧಿನಗರದಲ್ಲಿ ಭರ್ಜರಿಯಾಗಿ ನಡೆದಿದ್ದು,  69ನೇ ಸಾಲಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಗಿದೆ. ಈ ಬಾರಿಯ ಫಿಲ್ಮ್​ಫೇರ್​ ಅವಾರ್ಡ್​ ವಿಶೇಷತೆ ಏನೆಂದರೆ, ಇದರಲ್ಲಿ ರಣಬೀರ್​ ಕಪೂರ್​ ಮತ್ತು ಆಲಿಯಾ ದಂಪತಿ, ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಂದಹಾಗೆ, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಪರಸ್ಪರ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಒಂದೇ ಒಂದು ಅವಕಾಶವನ್ನು ಬಿಡುವುದಿಲ್ಲ. ಇಬ್ಬರೂ ತಮ್ಮ ಪ್ರೀತಿಯನ್ನು ಅನೇಕ ಬಾರಿ ಲೈವ್ ಶೋಗಳಲ್ಲಿ ವ್ಯಕ್ತಪಡಿಸಿದ್ದಾರೆ.  ಇದೇ ಪ್ರೀತಿಯನ್ನು ಅವರು ಫಿಲ್ಮ್​ಫೇರ್​ ಅವಾರ್ಡ್​ ಫಂಕ್ಷನ್​ ಸಂದರ್ಭದಲ್ಲಿಯೂ ವ್ಯಕ್ತಪಡಿಸಿದ್ದಾರೆ.

ಈ ಜೋಡಿಯು ಫಿಲ್ಮ್‌ಫೇರ್ 2024 ರಲ್ಲಿ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿಗಳನ್ನು ಪಡೆದಿದೆ. ಈ ವೇಳೆ ರಣಬೀರ್ 'ಅನಿಮಲ್' ಚಿತ್ರದ 'ಜಮಾಲ್ ಕುಡು' ಹಾಡಿಗೆ ನೃತ್ಯ ಪ್ರದರ್ಶನ ನೀಡಿದ್ದು, ಇದ್ದಕ್ಕಿದ್ದಂತೆ ವೇದಿಕೆಯಿಂದ ಕೆಳಗಿಳಿದು ಆಲಿಯಾಗೆ ಮುತ್ತಿಟ್ಟರು. ಇದರ ವಿಡಿಯೋ ಸಕತ್​ ವೈರಲ್​ ಆಗಿದೆ.   ಈ ಬಾರಿ ಈ ಕಾರ್ಯಕ್ರಮವನ್ನು ಮುಂಬೈ ಬದಲಿಗೆ ಗುಜರಾತ್‌ನ ಗಾಂಧಿನಗರದಲ್ಲಿ ಆಯೋಜಿಸಲಾಗಿತ್ತು. ಈ ಸಮಯದಲ್ಲಿ, ಅನೇಕ ತಾರೆಯರು ಈ ಸುಂದರ ಸಂಜೆಯ ಭಾಗವಾದರು. ಇವರಲ್ಲಿ ಎಲ್ಲರ ಮನಸ್ಸನ್ನು ಗೆದ್ದು, ಕದ್ದವರು  ಆಲಿಯಾ ಮತ್ತು ರಣಬೀರ್.  ಇವರಿಬ್ಬರ ವೀಡಿಯೋ ವೈರಲ್ ಆಗುತ್ತಿದ್ದು, ಈ ಜೋಡಿ ಪರಸ್ಪರ ಪ್ರೀತಿಯನ್ನು ಮೆರೆದಿದ್ದಾರೆ.

 
 
 
 
 
 
 
 
 
 
 
 
 
 
 

A post shared by Filmfare (@filmfare)

ಫಿಲ್ಮ್‌ಫೇರ್ 2024 ಆಲಿಯಾ ಮತ್ತು ರಣಬೀರ್ ಇಬ್ಬರಿಗೂ ವಿಶೇಷವಾಗಿತ್ತು. ರಣಬೀರ್ ಕಪೂರ್ ಅತ್ಯುತ್ತಮ ನಟ ಪ್ರಶಸ್ತಿ ಮತ್ತು ಆಲಿಯಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಅದೇ ಸಮಯದಲ್ಲಿ, ರಣಬೀರ್ ಕಪೂರ್ ಒಂದು ವೇದಿಕೆಯ ಪ್ರದರ್ಶನವನ್ನು ನೀಡಿದರು, ಇದರಲ್ಲಿ ಆಲಿಯಾ ಅವರಿಗೆ ಸಂಪೂರ್ಣವಾಗಿ ಬೆಂಬಲ ನೀಡಿದರು. ಮೆಷಿನ್ ಗನ್ ಪ್ರತಿಕೃತಿಯೊಂದಿಗೆ ಅನಿಮಲ್​ ನೋಟದಲ್ಲಿ ರಣಬೀರ್ ತಮ್ಮ ಗ್ರ್ಯಾಂಡ್ ಎಂಟ್ರಿಯಲ್ಲಿ ಗಮನ ಸೆಳೆದರು. ಅದೇ ಸಮಯದಲ್ಲಿ, ಪ್ರದರ್ಶನದ ಸಮಯದಲ್ಲಿ, ಅವರು ಇದ್ದಕ್ಕಿದ್ದಂತೆ ವೇದಿಕೆಯಿಂದ ಕೆಳಗಿಳಿದು ಆಲಿಯಾ ಅವರನ್ನೂ ಸೇರುವಂತೆ ಮಾಡಿದರು. ಜಮಾಲ್ ಕುಡು ಎಂಬ ಅನಿಮಲ್ ಹಾಡಿಗೆ ಇಬ್ಬರೂ ಡ್ಯಾನ್ಸ್ ಮಾಡಿದ್ದು, ಡ್ಯಾನ್ಸ್ ವೇಳೆ ಆಲಿಯಾಳನ್ನು ಅಪ್ಪಿಕೊಂಡು ಮುತ್ತು ಕೊಟ್ಟಿದ್ದಾರೆ.

ಅವರ ಅಭಿನಯಕ್ಕಿಂತ ಆಲಿಯಾ ಮತ್ತು ರಣಬೀರ್ ಅವರ ಕಿಸ್ ಬಗ್ಗೆ ಹೆಚ್ಚು ಮಾತನಾಡಲಾಗುತ್ತಿದೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪ್ರಶಸ್ತಿ ಕಾರ್ಯಕ್ರಮದಲ್ಲಿ ಇಬ್ಬರೂ ನೈಜ ಹಾಡಿನಂತೆ ತಲೆಗೆ ಕನ್ನಡಕ ಹಾಕಿಕೊಂಡು ಪ್ರದರ್ಶನ ನೀಡಿದರು. ರಣಬೀರ್ ಕಪೂರ್   ತೃಪ್ತಿ ಡಿಮ್ರಿ ಜೊತೆ ಅನಿಮಲ್​ನಲ್ಲಿ ಅಭಿನಯಿಸಿದ್ದಾರೆ. ಇದೀಗ ಪತಿ-ಪತ್ನಿಯ ಈ ಪರಿಯ ರೊಮ್ಯಾನ್ಸ್​ ನೋಡಿದ ತರ್ಲೆ ನೆಟ್ಟಿಗರು ಈಕೆ ನಿನ್ನ ಪತ್ನಿ ಕಣೋ, ತೃಪ್ತಿ ಡಿಮ್ರಿ ಅಲ್ಲ ಎಂದು ಕಾಲೆಳೆಯುತ್ತಿದ್ದಾರೆ. 

 
 
 
 
 
 
 
 
 
 
 
 
 
 
 

A post shared by Filmfare (@filmfare)

Latest Videos
Follow Us:
Download App:
  • android
  • ios